ಡೆಡ್ಲಿಸೋಮ ಅಲಿಯಾಸ್ ಆದಿತ್ಯನ ಮೇಲೆ ದೂರು ದಾಖಲು..!!

10 May 2019 4:59 PM | Entertainment
981 Report

ಮನೆ ಬಾಡಿಗೆ ನೀಡದೆ ಮನೆ ಮಾಲೀಕನಿಗೆ ಬೈದಿರುವ ಸ್ಯಾಂಡಲ್ ವುಡ್ ಸ್ಟಾರ್ ಮೇಲೆ ಇದೀಗ ದೂರು ದಾಖಲಾಗಿದೆ..  ಕೆಲವು ತಿಂಗಳಿನಿಂದ ಮನೆ ಬಾಡಿಗೆ ನೀಡದೇ ಮನೆ ಮಾಲೀಕನ ಜೊತೆ ಗಲಾಟೆ ಮಾಡಿದ್ದಕ್ಕೆ ಸ್ಯಾಂಡಲ್‍ವುಡ್ ನಟ ಆದಿತ್ಯ ವಿರುದ್ಧ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಟ ಆದಿತ್ಯ, ಸದಾಶಿವನಗರದ ಆರ್‍ಎಂವಿ ಎಕ್ಸ್ಟೆನ್ಷನ್‍ನಲ್ಲಿರುವ ಪ್ರಸನ್ನ ಅವರ ಬಾಡಿಗೆ ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಕೂಡ ವಾಸವಾಗಿದ್ದಾರೆ.

ಕಳೆದ ಏಳು ತಿಂಗಳಿಂದ ಕೂಡ ಮನೆ ಬಾಡಿಗೆ ನೀಡಿರಲಿಲ್ಲ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಮನೆ ಮಾಲೀಕರಾದ ಪ್ರಸನ್ನ ಜೊತೆ ಆದಿತ್ಯ ಜಗಳವಾಡಿದ್ದಾರೆ. ಆದಿತ್ಯ ಅವರ ಜೊತೆ ಅವರ ತಂದೆ ರಾಜೇಂದ್ರ ಸಿಂಗ್ ಬಾಬು, ತಂಗಿ ಹಾಗೂ ತಾಯಿ ಮನೆಯಲ್ಲಿ ವಾಸ ಮಾಡುತ್ತಿದ್ದರು... ನಾಲ್ಕು ವರ್ಷದ ಹಿಂದೆ ತಿಂಗಳಿಗೆ 40 ಸಾವಿರ ರೂ. ನಂತೆ ಬಾಡಿಗೆಗೆ ನೀಡಲಾಗಿತ್ತು. ಬಳಿಕ ಈಗ ಮನೆ ಮಾಲೀಕರು 48 ಸಾವಿರ ಬಾಡಿಗೆಯನ್ನು ಹೆಚ್ಚು ಮಾಡಿದ್ದರು. ಆದಿತ್ಯ ಇದುವರೆಗೆ 2 ಲಕ್ಷ 88 ಸಾವಿರ ಹಣ ಬಾಕಿ ನೀಡಬೇಕಿದೆ ಎಂದು ಮನೆ ಮಾಲೀಕರು ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಆದಿತ್ಯ ಕುಟುಂಬ ಈ ಮನೆಯಲ್ಲಿ ವಾಸವಾಗಿದ್ದಾರೆ. ಆದರೆ ಕಳೆದ ಏಳು ತಿಂಗಳಿಂದ ಬಾಡಿಗೆ ನೀಡಿರಲಿಲ್ಲ. ಈ ವಿಚಾರವಾಗಿ ಮನೆ ಮಾಲೀಕ ಕೆಲ ಕಳೆದ ನವೆಂಬರ್ ನಲ್ಲಿ ಕೋರ್ಟ್ ಗೆ ಎವಿಕ್ಷನ್ ಕೇಸ್ ದಾಖಲಿಸಿದ್ದರು. ಸದ್ಯ ಇಂದು ಮನೆ ಖಾಲಿ ಮಾಡಿಸಿ ಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.. ಸ್ಟಾರ್ ನಟರಿಗೆ ಮನೆ ಬಾಡಿಗೆ ಕಟ್ಟುವುದಕ್ಕೆ ಇಷ್ಟು ಕಷ್ಟನಾ ಎನ್ನುವ ಪ್ರಶ್ನೆ ಇದೀಗ ಸೃಷ್ಟಿಯಾಗಿದೆ.

Edited By

Manjula M

Reported By

Manjula M

Comments