ಮದುವೆಯಾಗದೆ ಮಕ್ಕಳನ್ನು ಪಡೆಯಲು ಸಿದ್ಧರಾದ ಬಾಲಿವುಡ್ ಬ್ಯಾಡ್ ಬಾಯ್ ಸಲ್ಲು..!!

10 May 2019 3:25 PM | Entertainment
207 Report

ಬಾಲಿವುಡ್ ನಟ ಸಲ್ಮಾನ್ ಖಾನ್ ಇಷ್ಟು ವರ್ಷಗಳಾದರೂ ಕೂಡ ಇನ್ನು ಮದುವೆಯಾಗಿಲ್ಲ… ತಮ್ಮ ಮೇಲಿರುವ ಪ್ರಕರಣಗಳು ಇತ್ಯರ್ಥ ಆಗುವವರೆಗೂ ಕೂಡ ನಾನು ಮದುವೆಯಾಗಲ್ಲ ಎಂದು ನಟ ಸಲ್ಮಾನ್ ಖಾನ್ ತಿಳಿಸಿದ್ದಾರೆ.. ಖ್ಯಾತ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌, ಇದೀಗ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ…

ಹಿಟ್‌ ಆ್ಯಂಡ್‌ ರನ್‌, ಕೃಷ್ಣಮೃಗ ಹತ್ಯೆ, ಸೇರಿದಂತೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್‌ ಖಾನ್(53) ಈಗಾಗಲೇ ಹಲವು ಪ್ರಕರಣಗಳಲ್ಲಿ ಸಲ್ಮಾನ್‌ ಖಾನ್ ಆರೋಪಿಯಾಗಿದ್ದಾರೆ. ಈ ಆರೋಪದ ಮೇಲೆ ಆಗಿಂದಾಗೆ ಕೋರ್ಟ್ ಗೆ ಹೋಗುವ ಸಂಭವವಿರುತ್ತದೆ.. ಅಷ್ಟೆ ಅಲ್ಲದೆ ಮದುವೆಯ ವಯಸ್ಸು ಕೂಡ ಮೀರಿದೆ… ನಾನು ಮದುವೆಯಾಗುವುದಾದರೆ ಅದು ಕೇವಲ ಮಕ್ಕಳನ್ನು ಹೊಂದುವ ಉದ್ದೇಶಕ್ಕಾಗಿ ಮಾತ್ರ ಎಂದು ಸಲ್ಮಾನ್ ಖಾನ್ ತಿಳಿಸಿದ್ದರು..ಹೀಗಾಗಿಯೇ ಇದೀಗ ಅವರು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಹೊಂದುವ ಚಿಂತೆಯಲ್ಲಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.. ಈ ಹಿಂದೆ ಸಾಕಷ್ಟು ನಟರು ಬಾಡಿಗೆ ತಾಯ್ತನದ ಮೂಲಕವೇ ಮಕ್ಕಳನ್ನು ಪಡೆದುಕೊಂಡಿದ್ದರು.

Edited By

Manjula M

Reported By

Manjula M

Comments