ಪ್ಲಾಸ್ಟಿಕ್ ಆಟಿಕೆ ನುಂಗಿ ನಟನ ಮಗು ಸಾವು..!!

10 May 2019 1:31 PM | Entertainment
5122 Report

ಪೋಷಕರಿಗೆ ಮಕ್ಕಳನ್ನು ನೋಡಿಕೊಳ್ಳುವುದು ಎಂದರೆ ಅದು ಒಂದು ದೊಡ್ಡ ಜವಬ್ದಾರಿ.. ಎಷ್ಟು ಕೇರ್ ತೆಗೆದುಕೊಂಡರೂ ಕೂಡ ಸಾಕಾಗುವುದಿಲ್ಲ..ಒಮ್ಮೊಮ್ಮೆ ಎಷ್ಟು ಜವಬ್ದಾರಿಯಿಂದ ನೋಡಿಕೊಂಡರೂ ಎಡವಟ್ಟು ಆಗೋಗುತ್ತೆ…ಅದೇ ರೀತಿಯ ಎಡವಟ್ಟು ನಟನ ಮನೆಯಲ್ಲೂ ಕೂಡ ನಡೆದಿದೆ..

ನಟನ ಮಗು ಆಟ ಆಡುವಾಗ ಆಟಿಕೆ ನುಂಗಿ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ… 'ಪ್ಯಾರ್ ಕೆ ಪಾಪಡ್' ಟಿವಿ ಶೋ ನಟ ಪ್ರತಿಷ್ ವೋರಾ ಅವರ 2 ವರ್ಷದ ಮಗು ಪ್ಲಾಸ್ಟಿಕ್ ಆಟಿಕೆ ನುಂಗಿ ಸಾವನ್ನಪ್ಪಿದೆ.. ಕಿರುತೆರೆ ನಟರಾಗಿರುವ ಪ್ರತಿಷ್ ವೋರಾ ಅವರು 'ಪ್ಯಾರ್ ಕೆ ಪಾಪಡ್' ಶೋ ಮೂಲಕ ಖ್ಯಾತಿ ಪಡೆದಿದ್ದರು..ಪ್ಲಾಸ್ಟಿಕ್ ಆಟಿಕೆಗಳೊಂದಿಗೆ  ಆಟವಾಡುವಾಗ ಆಟಿಕೆಯೊಂದನ್ನು ಮಗು ನುಂಗಿದೆ. ಅದು ಗಂಟಲಲ್ಲಿ ಸಿಲುಕಿ ಉಸಿರಾಡಲು ಸಾಧ್ಯವಾಗದೆ ಮಗು ಸಾವನ್ನಪ್ಪಿದೆ ಎಂದು ಹೇಳಲಾಗಿದೆ. ಹಾಗಾಗಿ ಮಕ್ಕಳನ್ನು ಆಟ ಆಡುವಾಗ,ತುಂಬಾ ಜೋಪಾನವಾಗಿ ನೋಡಿಕೊಳ್ಳಬೇಕು..ಸ್ವಲ್ಪ ಎಚ್ಚರ ತಪ್ಪಿದರೆ ಈ ರೀತಿಯ ಅನಾಹುತ ಆಗುವುದು ಖಂಡಿತ…

Edited By

Manjula M

Reported By

Manjula M

Comments