ಸಾಮಾಜಿಕ ಜಾಲತಾಣಗಳಲ್ಲಿ ನಗ್ನ ಫೋಟೋ ಹಂಚಿಕೊಂಡ ಪುನೀತ್  ನಾಯಕಿ..!!

09 May 2019 4:40 PM | Entertainment
4872 Report

ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಟ ನಟಿಯರ ಪೋಟೋಗಳು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿವೆ.. ಇದೀಗ ನಟಿಯ ನಗ್ನ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.. ‘ರಣವಿಕ್ರಮ’ ಚಿತ್ರದ ನಾಯಕಿಯಾದ ಅದಾ ಶರ್ಮಾ ತನ್ನ ಚಿತ್ರದ ಹೊಸ ಪ್ರಮೋಶನ್‍ಗಾಗಿ ಇನ್‍ಸ್ಟಾಗ್ರಾಂನಲ್ಲಿ ನಗ್ನ ಫೋಟೋವೊಂದನ್ನ  ಷೇರ್ ಮಾಡಿದ್ದಾರೆ..

‘ಮ್ಯಾನ್ ಟು ಮ್ಯಾನ್’ ಅದಾ ಶರ್ಮಾ ಹಿಂದಿಯಲ್ಲಿ ಚಿತ್ರದಲ್ಲಿ ಅಭಿನಯಿಸುತ್ತಾರೆ. ಈ ಸಿನಿಮಾದ ಪ್ರಮೋಶನ್‍ಗಾಗಿ ಅವರು ನಗ್ನ ಫೋಟೋವನ್ನು ಷೇರ್ ಮಾಡಿದ್ದಾರೆ. ಫೋಟೋದಲ್ಲಿ ನಕಲಿ ಮೀಸೆಯನ್ನು ಅಂಟಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.., ಮ್ಯಾನ್ ಟು ಮ್ಯಾನ್ ನನ್ನ ಮುಂದಿನ ಹಿಂದಿ ಚಿತ್ರ. ನಾನು ನಟಿ.. ಹಾಗಾಗಿ ನಾನು ಇಂತಹ ಪಾತ್ರವನ್ನು ನಿರ್ವಹಿಸುತ್ತೇನೆ.. ಎಂದು ನಾನು ಅಂದುಕೊಂಡಿರಲಿಲ್ಲ ಎಂದಿದ್ದಾರೆ… ಇದೊಂದು ರೊಮ್ಯಾಂಟಿಕ್ ಸಿನಿಮಾವಾಗಿದ್ದು ಆಗಿದ್ದು, ವಿಭಿನ್ನ ಲವ್ ಸ್ಟೋರಿ ಈ ಸಿನಿಮಾದಲ್ಲಿದೆ. ಮಿಕ್ಕಿದೆಲ್ಲಾ ನಿಮ್ಮ ಕಲ್ಪನೆಗೆ ಬಿಡುತ್ತೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅದಾ ಶರ್ಮಾ  ನವೀನ್ ಕಸ್ತೂರಿಯಾ ಜೊತೆ ಸ್ಕ್ರೀನ್ ಷೇರ್ ಮಾಡುತ್ತಿದ್ದಾರೆ.. ಅಬೀರ್ ಸೆನ್ ಗುಪ್ತಾ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ… ಅದಾ ಶರ್ಮಾ ತನ್ನ ಸಿನಿ ಜರ್ನಿಯಲ್ಲಿ ಮೊದಲ ಬಾರಿಗೆ ಪುರುಷನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.. ತೆರೆ ಮೇಲೆ ಈ ಸಿನಿಮಾ ಯಾವ ರೀತಿ ಮೂಡಿಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ…

Edited By

Manjula M

Reported By

Manjula M

Comments