ಕ್ಯಾಟ್ ಕೊರಳಿಗೆ ಘಂಟೆ ಕಟ್ಟೋರ್ಯಾರು..? ಕತ್ರಿನಾ ಈ ಬಗ್ಗೆ ಹೇಳಿದ್ದೇನು…?

09 May 2019 4:04 PM | Entertainment
291 Report

ಇತ್ತಿಚಿಗೆ ಚಿತ್ರರಂಗದಲ್ಲಿ ಮದುವೆ ಪರ್ವ ಶುರುವಾಗಿರುವ ಆಗಿದೆ....ಒಬ್ಬರು ಆದಂತೆ ಒಬ್ಬರು ಪ್ರೀತಿಯಲ್ಲಿ ಬಿದ್ದು ಮದುವೆಯಾಗುತ್ತಿದ್ದಾರೆ…ಇದೀಗ ಮದುವೆಯಾಗಲು ಯಾರ್ ರೆಡಿ ಇದ್ದಾರೆ ಗೊತ್ತಾ..? ಇದೀಗ ಬಾಲಿವುಡ್ ಸೆಕ್ಸಿ ಗರ್ಲ್ ಕತ್ರಿನಾ ಕೈಫ್ ಮದುವೆಯಾಗುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ… ಖಾಸಗಿ ವಾಹಿನಿಯ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಮಯದಲ್ಲಿ ನಾನು  ಅತೀ ಶೀಘ್ರದಲ್ಲಿಯೇ ಮದುವೆ ಆಗುತ್ತೇನೆ.. ನನಗೂ ಮಕ್ಕಳು ಆಗುತ್ತೇವೆ, ಅವುಗಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿರಲು ಇಷ್ಟಪಡುತ್ತೇನೆಂದು ತಿಳಿಸಿದ್ದಾರೆ.

ಆದರೆ ಕತ್ರಿನಾ ಕೈಫ್ ಯಾರನ್ನು ಯಾವಾಗ ಮದುವೆ ಆಗುತ್ತೇನೆ ಎಂಬುವುದು ಗೊತ್ತಿಲ್ಲ… ಒಟ್ಟಿನಲ್ಲಿ ಮದುವೆ ಆಗುತ್ತೇನೆ… ಹಾಗಾಗಿ ನನ್ನ ಕೊರಳಿಗೆ ಘಂಟೆ ಕಟ್ಟುವ ವ್ಯಕ್ತಿ ಯಾರೆಂದು ಸ್ನೇಹಿತರು ಮಾತನಾಡುತ್ತಾರೆ ಎಂದು ಹೇಳಿ ಕತ್ರಿನಾ ಕೈಫ್ ನಸು ನಕ್ಕಿದ್ದಾರೆ… ಕೆಲ ನಾಯಕರ ಜೊತೆ ಕತ್ರಿನಾ ಕೈಫ್ ಹೆಸರು ತಳುಕು ಹಾಕಿಕೊಂಡಿತ್ತು..ಪ್ರಾರಂಭದಲ್ಲಿ ಸಲ್ಮಾನ್ ಖಾನ್ ಅವರನ್ನೇ ಕತ್ರಿನಾ ಮದುವೆ ಆಗಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿತ್ತು. ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಬ್ರೇಕಪ್ ಮಾಡಿಕೊಂಡಿದ್ದರು. ಒಟ್ಟಾಗಿಯಾಗಿ ಕತ್ರಿನಾ ಕೈಫ್  ಯಾರನ್ನು ಮದುವೆಯಾಗುತ್ತಾರೆ ಎಂದು ಎಲ್ಲಿಯೂ ಕೂಡ ಹೇಳಿಲ್ಲ… ಆದರೆ ಮದುವೆಯಾಗುವುದಂತೂ ಖಂಡಿತಾ ಎಂದು ಸ್ಪಷ್ಟ ಪಡಿಸಿದ್ದಾರೆ.

Edited By

Manjula M

Reported By

Manjula M

Comments