ದೀಪಿಕಾ ಪಡುಕೋಣೆ ಪ್ರಗ್ನೆನ್ಸಿ..!? ನೆಟ್ಟಿಗರ ಅನುಮಾನಕ್ಕೆಕಾರಣ ಇದೇನಾ.. !

09 May 2019 11:30 AM | Entertainment
230 Report

ನಟ ನಟಿಯರು ಸುಮ್ನೆ ಸುಮ್ನೆ ಇತ್ತಿಚಿಗೆ ಸುದ್ದಿಯಾಗುತ್ತಿದ್ದಾರೆ.. ಅದರಲ್ಲೂ ಇತ್ತಿಚಿಗಷ್ಟೆ ಮದುವೆಯಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮಾತ್ರ ಹೆಚ್ಚು ಸುದ್ದಿಯಲ್ಲಿದ್ದಾರೆ.. ಬಹಳ ದಿನಗಳ ಹಿಂದೆ ದೀಪಿಕಾ ಗರ್ಭಿಣಿ ಎಂಬ ರೂಮರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.. ಆದರೆ ಅದಕ್ಕೆ ಸ್ವತಹ ದೀಪಿಕಾ ಅವರೇ ಕ್ಲಾರಿಟಿ ಕೊಟ್ಟಿದ್ದರು.. ಆ ರೀತಿಯದ್ದು ಏನು ಇಲ್ಲ ಎಂದು.. ಆದರೆ ಇದೀಗ ಮತ್ತೆ ಅಂತಹುದೇ ಸುದ್ದಿಯೊಮದು ಹರಿದಾಡುತ್ತಿದೆ…

ಗಲಾ 2019 ರ್ಯಾಂಪ್ ವಾಕ್ ವೇದಿಕೆಯಲ್ಲಿ ದೀಪಿಕಾ ಪಡುಕೋಣೆ ಫೋಟೋಗಳನ್ನು ನೋಡಿ ಮತ್ತೆ ನೆಟ್ಟಿಗರು ನಟಿ ಗರ್ಭಿಣಿಯೇ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಮದುವೆಯಾದ ಮೇಲೆ ನಟಿಮಣಿಯರ ಗರ್ಭಿಣಿ ವಿಷಯದ ಬಗ್ಗೆ ಆಗಾಗ ರೂಮರ್ ಗಳು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಲೇ ಇವೆ… ದೀಪಿಕಾ ಮತ್ತು ರಣವೀರ್ ಸಿಂಗ್ ಮದುವೆಯಾಗಿ ಕೆಲವು ತಿಂಗಳು ಮಾತ್ರ ಕಳೆದಿವೆ... ಆಗಲೇ ಅವರಿಗೆ ಪ್ರಗ್ನೆನ್ಸಿ ಬಗ್ಗೆ ಆಗಾಗ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ. ದೀಪಿಕಾ ಕೂಡಾ ಸದ್ಯಕ್ಕೆ ಅಂತಹ ಪ್ಲ್ಯಾನ್ ಇಲ್ಲ ಎನ್ನುತ್ತಲೇ ಇರುತ್ತಾರೆ.   ಗಲಾ ವೇದಿಕೆಯಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತಿತರ ಬೆಡಗಿಯರೊಂದಿಗೆ ಡಿಪ್ಪಿ ತೆಗೆಸಿಕೊಂಡ ಫೋಟೋದಲ್ಲಿ ಆಕೆಯ ಹೊಟ್ಟೆ ಕೊಂಚ ಉಬ್ಬಿದ್ದಕ್ಕೇ ನೆಟ್ಟಿಗರಿಗೆ ಆಕೆ ಗರ್ಭಿಣಿಯೇ ಎಂಬ ಅನುಮಾನ ಮೂಡಲು ಆರಂಭವಾಗಿದೆ. ಆದರೆ ದೀಪಿಕಾ ಆಪ್ತರು ಇದನ್ನು ನಿರಾಕರಿಸಿದ್ದು, ಇದು  ಸುಳ್ಳು ಎಂದು ತಿಳಿಸಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ದರೆ ಒಂದು ವೇಳೆ ಡಿಪ್ಪಿ ನಿಜವಾಗಲೂ ಗರ್ಭಿಣಿಯಾದರೂ ಕೂಡ ಅದನ್ನು ನಂಬಬೇಕೋ ಇಲ್ಲವೋ ಎಂಬುದು ನೆಟ್ಟಿಗರ ಪ್ರಶ್ನೆಯಾಗಿ ಬಿಟ್ಟಿದೆ..

Edited By

Manjula M

Reported By

Manjula M

Comments