ಈ ನಟಿ ಪ್ರಕಾರ ಕಿಸ್ ಮಾಡೋದ್ರಲ್ಲಿ ಟೈಗರ್ ಶ್ರಾಫ್ ಬೆಸ್ಟ್ ಅಂತೆ..!!

06 May 2019 5:41 PM | Entertainment
274 Report

ಇತ್ತಿಚಿಗೆ ರೊಮ್ಯಾನ್ಸ್, ಕಿಸ್ ಸೀನ್, ಲಿಪ್ಲಾಕ್ ಸೀನ್ಗಳು ಕಾಮನ್ ಆಗಿಬಿಟ್ಟಿವೆ… ಇದೀಗ ಸ್ಟುಡೆಂಟ್ ಆಫ್ ದಿ ಇಯರ್ -2 ಮೂಲಕ ಅನನ್ಯ ಪಾಂಡೆ ಬಾಲಿವುಡ್’ಗೆ ಎಂಟ್ರಿ ಕೊಟ್ಟಿದ್ದಾರೆ…ಇದೀಗ ಅವರು ಹೇಳಿರುವ ಹೆಳಿಕೆಯೊಂದು ಅಚ್ಚರಿಯನ್ನು ಮೂಡಿಸಿದೆ.. ಇತ್ತೀಚೆಗೆ ಟೈಗರ್ ಶ್ರಾಫ್, ನಟಿಯರಾದ ಅನನ್ಯ ಪಾಂಡೆ ಮತ್ತು ತಾರಾ ರೇಡಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ರೆಡಿಯೋ ಜಾಕಿ ನೀವು ಯಾವುದರಲ್ಲಿ ಬೆಸ್ಟ್ ಎಂದು ಟೈಗರ್ ಗೆ ಪ್ರಶ್ನೆ ಮಾಡಿದ್ದಾರೆ. ಈ ಸಮಯದಲ್ಲಿ ಟೈಗರ್ ನಾನು ಯಾವುದರಲ್ಲಿ ಬೆಸ್ಟ್ ಇದ್ದೀನಿ ಎಂಬುದು ನನಗೆ ಗೊತ್ತಿಲ್ಲ ಎಂದಿದ್ದಾರೆ. ಆಗ ನಟಿ ಅನನ್ಯ ಪಾಂಡೆ ಮಧ್ಯ ಮಾತನಾಡಿ ಟೈಗರ್ ಕಿಸ್ ಮಾಡುವುದರಲ್ಲಿ ಬೆಸ್ಟ್ ಎಂದು ತಿಳಿಸಿದ್ದಾರೆ..

ಸ್ಟುಡೆಂಟ್ ಆಫ್ ದಿ ಇಯರ್ -2 ಸಿನಿಮಾದಲ್ಲಿ ಟೈಗರ್ ಶ್ರಾಫ್, ನಟಿ ಅನನ್ಯ ಹಾಗೂ ತಾರಾ ಜೊತೆ ಕಿಸ್ಸಿಂಗ್ ಸೀನ್ ಮಾಡಿದ್ದಾರೆ. ರೆಡಿಯೋ ಕಾರ್ಯಕ್ರಮದಲ್ಲಿ ಕಿಸ್ಸಿಂಗ್ ಸೀನ್ ಬಗ್ಗೆ ಅನನ್ಯ ಮಾತನಾಡಿದ್ದಾರೆ. ಕಾರ್ಯಕ್ರಮದಲ್ಲಿ ಅನುಭವವನ್ನು ಕೇಳಿದ್ದರು… ಆಗ ಅನನ್ಯ ‘ಇದು ನನ್ನ ಮೊದಲನೇ ಕಿಸ್. ನಾನು ಇದುವರೆಗೂ ಯಾರನ್ನು ಕಿಸ್ ಮಾಡಿಲ್ಲ. ಹಾಗಾಗಿ ನಾನು ಟೈಗರ್ ಅವರನ್ನು ಬೇರೆ ಯಾರಿಗೂ ಹೋಲಿಕೆ ಮಾಡಲು ಆಗುವುದಿಲ್ಲ. ನನ್ನ ಫಸ್ಟ್ ಕಿಸ್ ಬೆಸ್ಟ್ ಆಗಿತ್ತು ಎಂದು ಅನನ್ಯ ರೆಡಿಯೋ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಮೂಲಕ ಪುನೀತ್ ಮಲ್ಹೋತ್ರ ಸ್ಟುಡೆಂಟ್ ಆಫ್ ದಿ ಇಯರ್ -2  ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರ ಇದೇ ತಿಂಗಳು ಮೇ 10ರಂದು ಬಿಡುಗಡೆಯಾಗಲಿದೆ… ಸಿನಿ ರಸಿಕರು ಸ್ಟುಡೆಂಟ್ ಆಫ್ ದಿ ಇಯರ್ -2 ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.

Edited By

Manjula M

Reported By

Manjula M

Comments