ಹೆರಿಗೆ ನಂತರ ಬಾಣಂತಿ ಸಾವು, OPT ನಲ್ಲೆ ಶವ ಬಿಟ್ಟು ವೈದ್ಯರು ಪರಾರಿ..!

06 May 2019 3:36 PM | Entertainment
109 Report

ಹೆಣ್ಣಿಗೆ ತಾಯಿಯಾಗೋದು ಅಂದರೆ ಒಂದು ಅದ್ಭುತ ಪರಿಕಲ್ಪನೆ.. ಮಗು ಹುಟ್ಟಿದ ನಂತರ ಹೀಗೆ ಇರಬೇಕು ಮಗುವನ್ನು ಹೇಗೆಲ್ಲಾ ನೋಡಿಕೊಳ್ಳಬೇಕು ಎಂಬ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ… ಆದರೆ ಹೆರಿಗೆ ಆದ ತಾಯಿಯೇ ಇಲ್ಲ ಎಂದರೆ ಆಕೆ ಕಂಡ ಕನಸುಗಳನ್ನು ನುಚ್ಚು ನುರು ಅಲ್ವ.. ಹೌದು.. ಅದೇ ರೀತಿಯ ಘಟನೆಯೊಂದು ಚನ್ನಪಟ್ಟಣದ ಬಾಲು ನರ್ಸಿಂಗ್ ಹೋಂ ನಲ್ಲಿ ನಡೆದಿದೆ..ಗಂಡು ಮಗುವಿಗೆ ಜನ್ಮ ಕೊಟ್ಟ ರಶ್ಮಿ(19) ಹೆರಿಗೆ ನಂತರ ಕೊನೆಯುಸಿರೆಳೆದಿದ್ದಾರೆ..ಮೃತ ಪಟ್ಟ ಮಹಿಳೆಯ ಸಂಬಂಧಿಕರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು…

ಚನ್ನಪಟ್ಟಣದ ಬಾಲುನರ್ಸಿಂಗ್ ಹೋಮ್‍ಗೆ ಹೆರಿಗೆಗಾಗಿ ದಾಖಲಾಗಿದ್ದ ರಶ್ಮಿ ತಡರಾತ್ರಿ 12 ಗಂಟೆ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದರು. ನಂತರ ಕೆಲ ಸಮಯದಲ್ಲೇ ರಶ್ಮಿ ಸಾವನ್ನಪ್ಪಿದ್ದು, ಆಪರೇಷನ್ ಥಿಯೇಟರ್‍ನಲ್ಲೇ ಶವ ಬಿಟ್ಟು ವೈದ್ಯರು ಪೊಲೀಸ್ ಭದ್ರತೆಯಲ್ಲಿ ಆಸ್ಪತ್ರೆ ಬಿಟ್ಟು ಪರಾರಿಯಾಗಿದ್ದಾರೆ. ಡಾ.ಶೈಲಜಾ ಈಕೆಗೆ ಹೆರಿಗೆ ಮಾಡಿಸಿದ್ದರು. ವಿಷಯ ತಿಳಿದ ರಶ್ಮಿ ಸಂಬಂಧಿಕರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿ ಭಟನೆ ನಡೆಸಿದ್ದು, ಚನ್ನಪಟ್ಟಣ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ವೈದ್ಯರ ನಿರ್ಲಕ್ಷ್ಯದಿಂದ ರಶ್ಮಿ ಮೃತಪಟ್ಟಿದ್ದರಿಂದ ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆ ಮುಂದೆ ಪ್ರತಿಭಟಿಸಿದ್ದಲ್ಲದೆ, ಬೆಂಗಳೂರು-ಮೈಸೂರು ಹೆದ್ದಾರಿ ತಡೆದಿದ್ದರಿಂದ ಟ್ರಾಫಿಕ್‍ಜಾಮ್‍ನಿಂದಾಗಿ ಈ ಮಾರ್ಗದ ವಾಹನ ಸವಾರರು ತೊಂದರೆಗೆ ಸಿಲುಕುವಂತಾಯಿತು.. ವೈದ್ಯರ ನಿರ್ಲಕ್ಷಕ್ಕೆ ಒಂದು ಜೀವ ಹೋಯಿತು.. ಮಗು ತಾಯಿಯನ್ನು ಕಳೆದುಕೊಂಡು ಅನಾಥವಾಯಿತು… ಪೊಲೀಸರು ದೂರು ದಾಖಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

Edited By

Manjula M

Reported By

Manjula M

Comments