ನಾದಬ್ರಹ್ಮ ಹಂಸಲೇಖಾ ಅವರಿಂದ ಅನುಶ್ರೀ ಗೆ ಸಿಕ್ತು ಹೊಸ ಬಿರುದು..!!

06 May 2019 1:00 PM | Entertainment
710 Report

ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯ ಆಗಿರುವ ರಿಯಾಲಿಟಿ ಷೋ ಗಳಲ್ಲಿ ಸರಿಗಮಪ ಕೂಡ ಒಂದು..ಜೀ ವಾಹಿನಿಯಲ್ಲಿ ಪ್ರಸಾರವಾಗಿರುವ ಈ ಕಾರ್ಯಕ್ರಮಕ್ಕೆ ವೀಕ್ಷಕರ ವರ್ಗ ಹೆಚ್ಚಾಗಿಯೇ ಇದೆ… ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಕೂಡ ಈ ಕಾರ್ಯಕ್ರಮದಲ್ಲಿ ಗಾಯಕರಿದ್ದಾರೆ…ಅದರಲ್ಲಿ ಎಲ್ಲರನ್ನೂ ಅಟ್ರಾಕ್ಟ್ ಮಾಡೋದು ನಿರೂಪಕಿ ಅನುಶ್ರೀ… ಹರಳು ಉರಿದಂತೆ ಮಾತನಾಡುವ ಈಕೆಯನ್ನು ಮಾತಿನ ಮಲ್ಲಿ ಪಟ್ ಪಟ್ ಪಟಾಕಿ ಅಂತೆಲ್ಲಾ ಕರೆಯುತ್ತಾರೆ…ಇದೀಗ ಆಕೆಗೆ ಮತ್ತೊಂದು ಬಿರುದು ಸಿಕ್ಕಿದೆ..

ಕಿರುತೆರೆಯಲ್ಲಿ ಮಾತಿನ ಮೂಲಕ ಚಾಪು ಮೂಡಿಸಿರುವ ಕರಾವಳಿ ತೀರದ ಬೆಡಗಿ ಅನುಶ್ರೀ ಅವರಿಗೆ ಹೊಸ ಬಿರುದನ್ನು ನಾದಬ್ರಹ್ಮ, ಸ್ವರದಿಗ್ಗಜ ಅಂತಾನೇ ಫೇಮಸ್ ಆಗಿರುವ  ಹಂಸಲೇಖ ಅವರು ನೀಡಿದ್ದಾರೆ. ಸಂಗೀತ ಕಾರ್ಯಕ್ರಮದ ನಿರೂಪಕಿಯಾಗಿರುವ ಅನುಶ್ರೀ ಎಲ್ಲರ ಅಚ್ಚುಮೆಚ್ಚಿನ ತಾರೆ ಎನ್ನಬಹುದು. ಕಾರ್ಯಕ್ರಮದ ಮಹಾತೀರ್ಪುಗಾರರ ಸ್ಥಾನದಲ್ಲಿರುವ ಹಂಸಲೇಖ ಹೊಸ ಬಿರುದು ನೀಡಿ ಅನುಶ್ರೀ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ‘ಪ್ರಸಂಗಗೀತ’ ಎಂಬ ಹೊಸ ಕನ್ನಡ ಬಿರುದನ್ನು ಹಂಸಲೇಖ ನೀಡಿದ್ದಾರೆ. ಪ್ರಸಂಗಗೀತ ಬಿರುದು ಪಡೆದ ಅನುಶ್ರೀ ಸಂತೋಷವನ್ನು ವ್ಯಕ್ತಪಡಿಸಿದರು. ಅನುಶ್ರೀ ಸಿನಿಮಾಗಳಲ್ಲೂ ಕೂಡ ಅಭಿನಯಿಸಿದ್ದಾರೆ. ಆಕೆಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು ಮಾತ್ರ ಸರಿಗಮಪ ಕಾರ್ಯಕ್ರಮ.. ಈ ಬಿರುದಿನಿಂದ ಅನುಶ್ರೀ ಯವರು ಫುಲ್ ಖುಷಿಯಾಗಿದ್ದಾರೆ. ಮಹಾ ಗುರುಗಳೆ ನನಗೆ ಬಿರುದು ಕೊಟ್ಟಿದ್ದಾರೆ. ಮುಂದಿನ ವಾರದಿಂದ ನನ್ನ ಸಂಬಳ ಹೆಚ್ಚು ಮಾಡಿ ಎಂದು ಕಾಲೆಳೆದಿದ್ದಾರೆ.

Edited By

Manjula M

Reported By

Manjula M

Comments