ಸ್ಯಾಂಡಲ್ ವುಡ್ ಸ್ಟಾರ್ ನಟಿಗೆ ನಿಶ್ಚಿತಾರ್ಥದಲ್ಲಿ ಕಿರುಕುಳ : ಆರೋಪಿಗಳ ಬಂಧನ..!!!

04 May 2019 12:39 PM | Entertainment
285 Report

ನಟಿ ಮಣಿಯರ ಮೇಳೆ ನಡೆಯುವ ಶೋಷಣೆಗಳು ಹೆಚ್ಚಾಗುತ್ತಿವೆ…ದಿನದಿಂದ ದಿನಕ್ಕೆ ಇದರ ಬಗ್ಗೆ ಮಾತನಾಡುವವರೇ ಹೆಚ್ಚಾಗಿ ಹೋಗಿದ್ದಾರೆ..ಇದೀಗ ಸ್ಯಾಂಡಲ್ ವುಡ್ ನ ನಟಿಯೊಬ್ಬಳು ಈ ಬಗ್ಗೆ ದೂರು ದಾಖಲಿಸಿದ್ದಾರೆ. ಎಸ್… ಸ್ಯಾಂಡಲ್ ವುಡ್ ನ ನಟಿ ಹರ್ಷಿಕಾ ಪೂಣಚ್ಚಗೆ ಸಂಬಂಧಿಕರ ನಿಶ್ಚಿತಾರ್ಥದ ವೇಳೆಯಲ್ಲಿ ಈ ಘಟನೆ ನಡೆದಿರುವ ಆರೋಪ ಕೇಳಿ ಬಂದಿದೆ.

ಮಡಿಕೇರಿಯ ನೀರುಕೊಲ್ಲಿ ಗ್ರಾಮದಲ್ಲಿನ ರೆಸಾರ್ಟ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.  ಬನ್ಸಿ ನಾಣಯ್ಯ ಮತ್ತು ಬಿಪಿನ್ ದೇವಯ್ಯ ಎಂಬವರು ಕಿರುಕುಳ ನೀಡಿದ್ದಾರೆ ಎಂದು ಹರ್ಷಿಕಾ ಪೂಣಚ್ಚ ತಿಳಿಸಿದ್ದಾರೆ.ಗುರುವಾರ ರೆಸಾರ್ಟ್ ನಲ್ಲಿ ಸಂಬಂಧಿಕರ ನಿಶ್ಚಿತಾರ್ಥ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ಹರ್ಷಿಕಾ ಕೂಡ ಹೋಗಿದ್ದರು.. ಆ ಸಮಯದಲ್ಲಿ ಹರ್ಷಿಕಾ ಜೊತೆ ಬನ್ಸಿ ನಾಣಯ್ಯ ಮತ್ತು ಬಿಪಿನ್ ದೇವಯ್ಯ ಅಸಭ್ಯವಾಗಿ ವರ್ತಿಸಿದ್ದಾರೆ. ತದ ನಂತರ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಇಬ್ಬರು ಬನ್ಸಿ ನಾಣಯ್ಯ ಮತ್ತು ಬಿಪಿನ್ ದೇವಯ್ಯ ಇಬ್ಬರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇಬ್ಬರ ಮೇಲೆ ಐಪಿಸಿ ಸೆಕ್ಷನ್ 232, 242, 354 ಮತ್ತು 506 ಅಡಿಯಲ್ಲಿ ದೂರು ದಾಖಲಾಗಿತ್ತು. ಇದೀಗ ಪೋಲಿಸರು ಈ ದೂರಿನ ಸಂಬಂಧ ತನಿಖೆ ಆರಂಭಿಸಿದ್ದಾರೆ. 

Edited By

Manjula M

Reported By

Manjula M

Comments