ಸ್ಯಾಂಡಲ್’ವುಡ್ ನಲ್ಲಿ ಮತ್ತೆ ಶುರುವಾಗುತ್ತಾ ಸ್ಟಾರ್ ವಾರ್..!! 

04 May 2019 11:19 AM | Entertainment
324 Report

ಅದ್ಯಾಕೋ ಗೊತ್ತಿಲ್ಲ… ನಮ್ಮ ಸ್ಯಾಂಡಲ್ ವುಡ್ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲೋ….ಇದೀಗ ಮತ್ತೊಮ್ಮೆ ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ವಾರ್ ಸಿಕ್ಕುವ ಮುನ್ಸೂಚನೆ ಸಿಕ್ಕಿದೆ.. ಬಾಕ್ಸ್ ಆಫೀಸ್ ಸುಲ್ತಾನರಲ್ಲಿ ಸ್ಯಾಂಡಲ್ ವುಡ್ ದಿಗ್ಗಜರಾದ ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಮುಖರು.. ಇದೀಗ ಅವರಿಬ್ಬರ ನಡುವೆ ಸ್ಟಾರ್ ವಾರ್ ಮತ್ತೆ ಪ್ರಾರಂಭವಾಗುತ್ತೆ ಎಂಬ ಮಾತುಗಳು ಕೇಳಿ ಬರುತ್ತಿವೆ.. ಇದಕ್ಕೆ ಕಾರಣ ಏನ್ ಗೊತ್ತಾ..?

ಇಬ್ಬರು ಸೂಪರ್ ಸ್ಟಾರ್​​ಗಳ ಚಿತ್ರ ಒಂದೇ ಸಮಯದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸ್ಟಾರ್ ನಟರ ಬಹುನಿರೀಕ್ಷೆಯ ಬಿಗ್ ಬಜೆಟ್ ಸಿನಿಮಾಗಳಾದ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಸಿನಿಮಾಗಳು ವರಮಹಾಲಕ್ಷ್ಮಿ ಹಬ್ಬದ ದಿನದಂದು ತೆರೆಗೆ ಬರಲಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ…ದರ್ಶನ್ ಮತ್ತು ಸುದೀಪ್ ಸಿನಿಮಾ ಒಟ್ಟಿಗೆ ತೆರೆಗೆ ಬರುತ್ತಿರುವುದು ವಿಶೇಷವಾದ್ರೂ ಸ್ಟಾರ್ ವಾರ್ ಪ್ರಾರಂಭವಾಗೋದರಲ್ಲಿ ಯಾವುದೆ ಸಂಶಯವಿಲ್ಲ… ಒಂದು ವೇಳೆ ಚಿತ್ರತಂಡ ಪ್ಲಾನ್ ಮಾಡಿದ್ದಂತೆ ಇಬ್ಬರ ಸಿನಿಮಾಗಳು ಒಟ್ಟಿಗೆ ಬಂದ್ರೆ ಥಿಯೇಟರ್ ನಲ್ಲಿ ಕಮಾಲು ಮಾಡೋದು ಗ್ಯಾರೆಂಟಿ..  ಬಾಕ್ಸ್ ಆಫೀಸ್ ಕೊಳ್ಳೆ ಹೋಡೆಯೋದು ಗ್ಯಾರೆಂಟಿ…

Edited By

Manjula M

Reported By

Manjula M

Comments