ಚಿತ್ರ ನಟಿಯನ್ನು ಅಪಹರಸಿ, ಲೈಂಗಿಕ ಹಲ್ಲೆ ಮಾಡಿದ ಖ್ಯಾತ ನಟ..!!

04 May 2019 9:51 AM | Entertainment
460 Report

ಇತ್ತಿಚಿಗೆ ಸಿನಿಮಾ ಕ್ಷೇತ್ರದಲ್ಲಿ ನಟಿಯರ ಮೇಲೆ ಲೈಂಗಿಕ ಶೋಷಣೆ ಹೆಚ್ಚಾಗಿ ನಡೆಯುತ್ತಿದೆ.. ಬಣ್ಣದ ಜಗತ್ತಿಗೆ ನಾನಾ ಆಸೆಗಳನ್ನು ಇಟ್ಟುಕೊಂಡು ಬಂದಿರುವ ನಟಿಯರು ಸಿನಿಮಾ ಕ್ಷೇತ್ರದ ಬಗ್ಗೆ ಬೇಸರದ ಮಾತುಗಳನ್ನು ಆಡುತ್ತಿದ್ದಾರೆ.. ಇದೀಗ ಮಲಯಾಳಂ ಚಿತ್ರ ನಟಿಯೊಬ್ಬರನ್ನು ಅಪಹರಿಸಿ, ಲೈಂಗಿಕ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ… ಈ ಹಿನ್ನಲೆಯಲ್ಲಿ ನಟ ದಿಲೀಪ್ ಅವರ ಮೇಲೆ  ಈ ಆರೋಪ ಕೇಳಿ ಬಂದಿದೆ. ಮಲಯಾಳಂ ಚಿತ್ರನಟಿಯೊಬ್ಬರನ್ನು ಅಪಹರಿಸಿದ ಹಾಗೂ ಲೈಂಗಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಟ ದಿಲೀಪ್‌ನನ್ನು ವಿಚಾರಣೆಗೊಳಪಡಿಸುವುದಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಅಷ್ಟೆ ಅಲ್ಲದೆ ನಟಿಯ ಮೇಲೆ ಲೈಂಗಿಕ ಹಲ್ಲೆಯ ವಿಡಿಯೋ ಚಿತ್ರಿಕೆಯನ್ನುಒಳಗೊಂಡಿರುವ ಮೆಮೊರಿಕಾರ್ಡ್ ಅನ್ನು ಕಾನೂನಿನಡಿ ದಾಖಲೆಯಾಗಿ ಪರಿಗಣಿಸಬಹುದೇ ಎಂಬುದನ್ನು ಪರಿಶೀಲಿಸಲು ಕೇರಳ ಸರ್ಕಾರವು ಸಮಯಾವಕಾಶವನ್ನು ಕೋರಿರುವುದರಿಂದ ನ್ಯಾಯಾಲಯವು ವಿಚಾರಣೆಗೆ ತಡೆಯಾಜ್ಞೆ ನೀಡಿದೆ ಎಂದು ಹೇಳಲಾಗುತ್ತಿದೆ. ಪ್ರಕರಣದ ವಿಚಾರಣೆಯ ಕಲಾಪಗಳು ಸುಪ್ರೀಂಕೋರ್ಟ್‌ನಲ್ಲಿ ಪೂರ್ಣಗೊಳ್ಳುವವರೆಗೆ ವಿಚಾರಣಾ ನ್ಯಾಯಾಲಯ ಅದರ ಅಲಿಕೆ ನಡೆಸುವಂತಿಲ್ಲವೆಂದು ಸುಪ್ರೀಂಕೋರ್ಟ್ ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆಯು ಜುಲೈ ತಿಂಗಳ ಮೂರನೆ ವಾರ ನಡೆಯಲಿದೆಯೆಂದು ನ್ಯಾಯಾಲಯ ತಿಳಿಸಿದೆ. ಚಿತ್ರನಟಿಯನ್ನು ಎರ್ನಾಕುಲಂ ಸಮೀಪದ ಅಂಗಮಾಲಿಯಲ್ಲಿ ಫೆಬ್ರವರಿ 17,2017ರ ರಾತ್ರಿಯಂದು ದುಷ್ಕರ್ಮಿಗಳ ಗುಂಪೊಂದು ಅಪಹರಿಸಿತ್ತು ಹಾಗೂ ಲೈಂಗಿಕ ಹಲ್ಲೆ ನಡೆಸಿತ್ತು. ಈ ದಾಳಿಯ ಹಿಂದಿನ ಸೂತ್ರಧಾರಿ ದಿಲೀಪ್ ಎಂದು ಪೊಲೀಸರು ಆರೋಪಿಸಿ, ಮೊಕದ್ದಮೆ ದಾಖಲಿಸಿದ್ದರು.. ಈ ದೂರು ಯಾವ ರೀತಿಯ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments