ನನ್ನನ್ನು ಯಾರಾದರೂ ಐಟಂ ಗರ್ಲ್ ಅಂದ್ರೆ ಅವರ ಕಪಾಳಕ್ಕೆ ಬಾರಿಸುತ್ತೇನೆ ಎಂದ ಖ್ಯಾತ ನಟಿ..!!

03 May 2019 5:58 PM | Entertainment
316 Report

ಇತ್ತಿಚಿಗೆ ನಟ ನಟಿಯರು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ… ನಿಮಗೆಲ್ಲಾ ಬಾಲಿವುಡ್ ಪೇಮಸ್ ನಟಿಯೊಬ್ಬರ ಬಗ್ಗೆ ಹೇಳಬೇಕು ಕೇಳಿ… ಬಾಲಿವುಡ್ ನಟಿ ಮಲೈಕಾ ಅರೋರಾ ಕಾರ್ಯಕ್ರಮ ಒಂದರಲ್ಲಿ ನನ್ನನ್ನು ಐಟಂ ಗರ್ಲ್ ಎಂದು ಕರೆದವರ ಕಪಾಳಕ್ಕೆ ಬಾರಿಸುತ್ತೇನೆ ಎಂದು ಹೇಳಿದ್ದಾರೆ. ಇತ್ತಿಚಿಗೆ ಮಲೈಕಾ ಕಾರ್ಯವೊಂದಕ್ಕೆ ಆಗಮಿಸಿದ್ದರು… ಈ ಸಂದರ್ಭದಲ್ಲಿ ನಿರೂಪಕ ನಿಮಗೆ ಐಟಂ ಗರ್ಲ್ ಎಂದು ಕರೆಯುತ್ತಿರುತ್ತಾರೆ.. ಅದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಆ ನಿರೂಪಕ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮಲೈಕಾ ಅರೋರಾ, ನಾನು ಯಾವುದೇ ಹಾಡನ್ನು ಮಾಡಬೇಕಾದರೂ ಕೂಡ ಇಷ್ಟಪಟ್ಟು ಮಾಡಿದ್ದೇನೆ. ಆ ವಿಷಯದಲ್ಲಿ ನನಗೆ ಯಾವುದೇ ರೀತಿಯ ಅಭ್ಯಂತರವಿರಲಿಲ್ಲ. ನನಗೆ ಏನಾದರೂ ಇಷ್ಟವಾಗಿರಲಿಲ್ಲ ಎಂದರೆ ನಾನು ಆಗ ಮಾತನಾಡುತ್ತಿದೆ ಎಂದು ಮಲೈಕಾ ತಿಳಿಸಿದ್ದಾರೆ.  ಇದೀಗ ಕಾಲ ಬದಲಾಗಿದೆ. ನಾನು 80 ಹಾಗೂ 90ರ ದಶಕದಲ್ಲಿ ವಿಶೇಷವಾದ ಹಾಡಿಗೆ ಹೆಜ್ಜೆ ಹಾಕಿದ್ದಾಗ ಎಲ್ಲರೂ ಕೂಡ ಐಟಂ ಗರ್ಲ್ ಎಂದು ಕರೆಯುತ್ತಿದ್ದರು. ಆಗ ನನಗೆ ತುಂಬಾ ಕೋಪ ಬರುತಿತ್ತು. ಅಲ್ಲದೆ ನನಗೆ ಯಾರಾದರೂ ಐಟಂ ಗರ್ಲ್ ಎಂದು ಕರೆದರೆ ಕಪಾಳಕ್ಕೆ ಬಾರಿಸಬೇಕು ಎಂದು ನನಗೆ ಅನಿಸುತ್ತಿತ್ತು. ನನಗೆ ಇಷ್ಟವಾದ ಹಾಡಿಗೆ ನಾನು ಹೆಜ್ಜೆ ಹಾಕಿದ್ದೇನೆ ಹೊರತು ಬೇರೆ ಯಾರ ಬಲವಂತಕ್ಕೂ ನಾನು ಸಿನಿಮಾಗಳಲ್ಲಿ ಡ್ಯಾನ್ಸ್ ಮಾಡಿಲ್ಲ ಎಂದು ಮಲೈಕಾ ತಿಳಿಸಿದ್ದಾರೆ. ಹೆಣ್ಣು ಮಕ್ಕಳು ಸಮಯ ಸಂದರ್ಭಕ್ಕೆ ಆ ರೀತಿ ನಡೆದುಕೊಳ್ಳುತ್ತಾರೆ ಅಷ್ಟೆ ಎಂದು ಹೇಳಿದ್ದಾರೆ..

Edited By

Manjula M

Reported By

Manjula M

Comments