ನಾಲ್ಕನೇ ಮಗುವಿಗೆ ತಂದೆಯಾಗುತ್ತಿರುವ ನಟನಿಗೆ ‘ಸರ್ ನಿಮಗೆ ಫ್ಯಾಮಿಲಿ ಪ್ಲಾನಿಂಗ್ ಗೊತ್ತಿಲ್ವ’ ಎಂದಿದ್ಯಾರು..?

03 May 2019 10:55 AM | Entertainment
743 Report

ಇತ್ತಿಚಿಗೆ ನಟಿ ನಟಿಯರು ಏನುಮಾಡಿದರೂ ಟ್ರೋಲ್ ಆಗೋದು ಕಾಮನ್ ಆಗಿ ಬಿಟ್ಟಿದೆ.. ಒಳ್ಳೆಯದನ್ನು ಮಾಡುದ್ರೂ ಟ್ರೋಲ್ ಆಗ್ತಾರೆ, ಕೆಟ್ಟದನ್ನ ಮಾಡುದ್ರೂ ಟ್ರೋಲ್ ಆಗ್ತಾರೆ… ನಟ ನಟಿಯರು ಟ್ರೋಲ್ ಮಾಡುವವರ ವಿರುದ್ದ ಸಾಕಷ್ಟು ಬಾರಿ ಕಿಡಿ ಕಾರಿದ್ದು ಕೂಡ ಉಂಟು.. ಇದೀಗ ತೆಲುಗಿನ ಖ್ಯಾತ ನಟ ಮೋಹನ್ ಬಾಬು ಅವರ ಮಗ ಕೂಡ ಟ್ರೋಲ್ ಗೆ ಗುರಿಯಾಗಿದ್ದಾರೆ.. ಅರೇ ಹೌದಾ..ಯಾವ ವಿಷಯಕ್ಕೆ ಅಂತೀರಾ.. ಮುಂದೇ ಓದಿ..,

ತೆಲುಗು ಖ್ಯಾತ ನಟ ಮೋಹನ್ ಬಾಬುರವರ ಪುತ್ರ ಮಂಚು ವಿಷ್ಣು ಇದೀಗ  ನಾಲ್ಕನೇ ಮಗುವಿಗೆ ತಂದೆಯಾಗುತ್ತಿರುವ ವಿಚಾರವನ್ನು ತನ್ನ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದಕ್ಕೆ ಜನರಿಂದ ಪಾಸಿಟಿವ್ ಗಿಂತ, ನೆಗೆಟಿವ್ ಪ್ರತಿಕ್ರಿಯೆಯೇ ಹೆಚ್ಚು ಸಿಗುತ್ತಿದೆ. 2009 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಷ್ಣು ಹಾಗೂ ವಿರಾನಿಕರಿಗೆ ಈಗಾಗಲೇ ಅರಿಯಾನ್, ವಿವಿಯನ ಎಂಬ ಇಬ್ಬರು ಹೆಣ್ಣು ಮಕ್ಕಳು ಹಾಗೂ ಅವಿರಾಮ್ ಎಂಬ ಗಂಡು ಮಗ ಇದ್ದಾನೆ...ಇದೀಗ ನಾಲ್ಕನೇ ಲಿಟಲ್ ಏಂಜಲ್ ನಿರೀಕ್ಷೆಯ ಬಗ್ಗೆ ಸಂತಸವನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ಈ ಟ್ಟೀಟಿಗೆ ಪ್ರತಿಕ್ರಿಯೆ ನೀಡಿದ ವ್ಯಕ್ತಿಯೊಬ್ಬ 'ನಮ್ಮ ದೇಶಕ್ಕೆ ನಿಮ್ಮಂತಹ ಉದ್ಯಮಿ ಅವಶ್ಯಕತೆ ಇದೆ ಆದರೆ ಮತ್ತೊಂದು ಮಗು ಮಾಡಿಕೊಳ್ಳುವ ಬದಲ, ದೇಶದಲ್ಲಿ ಸಾಕಷ್ಟು ಜನ ಅನಾಥ ಮಕ್ಕಳಿದ್ದಾರೆ ಅದರಲ್ಲಿ ಒಂದು ಮಗುವನ್ನು ದತ್ತು ಪಡೆದಿದ್ದರೆ ಒಳ್ಳೆಯದಿತ್ತು' ಎಂದಿದ್ದಾರೆ. ಮತ್ತೊಬ್ಬ ವ್ಯಕ್ತಿ 'ಸರ್ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ನಿಮಗೆ ಗೊತ್ತಾ' ಎಂದು ವ್ಯಂಗವಾಗಿ ಪ್ರಶ್ನೆ ಮಾಡಿದ್ದಾರೆ. ತಮ್ಮ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಟ್ರೋಲಿಗರು ಟ್ರೋಲ್ ಮಾಡುತ್ತಾರೆ ಎಂದು ಈ ಜೋಡಿ ಬೇಸರಗೊಂಡಿದ್ದಂತು ನಿಜ…

Edited By

Manjula M

Reported By

Manjula M

Comments