ತಾಯಿಗೆ ಕ್ಯಾನ್ಸರ್ ಅಂದ್ರೂ ನಿಮಗೆ ಅರ್ಥವಾಗಲ್ವಾ..? ಈ ಕಾರಣಕ್ಕೆ ಶೂಟಿಂಗ್ ಗೆ ಬಾರದ ಸುದೀಪ್ ‘ನಾಯಕಿ’ ಗೆ ಚಿತ್ರರಂಗದಿಂದ ಬಹಿಷ್ಕಾರ..!?

03 May 2019 9:20 AM | Entertainment
1265 Report

ನಟ ನಟಿಯರಿಗೆ ಚಲನಚಿತ್ರ ರಂಗದಿಂದ ಬಹಿಷ್ಕಾರ ಹಾಕುವುದು ತೀರಾ ಅಪರೂಪ… ಇದೀಗ ಕನ್ನಡದಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಬಹುಭಾಷ ನಟಿ ನಿತ್ಯಾ ಮೆನನ್ ಗೆ ಚಿತ್ರರಂಗದಿಂದ ಬಹಿಷ್ಕಾರ ಹಾಕಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ… ಚಿತ್ರಿಕರಣದ ವೇಳೆ ಸರಿಯಾಗಿ ಸಮಯಕ್ಕೆ ಬರುತ್ತಿಲ್ಲ… ಅವರಿಂದಾಗಿ ಎಲ್ಲರಿಗೂ ಕೂಡ ತೊಂದರೆಯಾಗುತ್ತಿದೆ ಎಂದು ಅನೇಕ ನಿರ್ಮಾಪಕರು ಮತ್ತು ನಿರ್ದೇಶಕರು ಕಲಾವಿದರ ಸಂಘಕ್ಕೆ ದೂರು ನೀಡಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿಯೂ  'ಮೈನಾ' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ  ನಿತ್ಯಾ ಮೆನನ್ ಮಲಯಾಳಂ ಮಾತ್ರವಲ್ಲದೇ, ತೆಲುಗು, ತಮಿಳು ಚಿತ್ರಗಳಲ್ಲಿಯೂ ಕೂಡ ಮಿಂಚಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಶೂಟಿಂಗ್ ಗೆ ಸರಿಯಾಗಿ ಬಾರದೇ ವಿರೋಧ ಕಟ್ಟಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲು ಒತ್ತಾಯ ಕೇಳಿ ಬಂದಿದೆ ಎನ್ನಲಾಗಿದೆ... ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿತ್ಯಾ ಮೆನನ್, ನಮ್ಮ ತಾಯಿಗೆ ಕ್ಯಾನ್ಸರ್ ಇದೆ. ಅವರನ್ನು ನೋಡಿಕೊಳ್ಳಬೇಕಾಗಿರುವುದು ನನ್ನ ಕರ್ತವ್ಯ ಮತ್ತು ಜವಬ್ಧಾರಿಯಾಗಿದೆ. ತಾಯಿ ಸ್ಥಿತಿ ಕಂಡು ಅತ್ತು ಅತ್ತು ಸುಸ್ತಾಗಿದ್ದೇನೆ. ಇದೇ ಕಾರಣಕ್ಕೆ ಶೂಟಿಂಗಿಗೆ ಸರಿಯಾದ ಸಮಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ತಾಯಿಗೆ ಕ್ಯಾನ್ಸರ್ ಇದೆ ಎಂದರೂ, ನಿಮಗೆ ಅರ್ಥವಾಗುವುದಿಲ್ಲವೇ ಎಂದು ಅವರು ನಿತ್ಯಾ ಮೆನನ್ ಅಳಲು ತೋಡಿಕೊಂಡಿದ್ದಾರೆ. ಕಲಾವಿದರ ಸಂಘ ಮುಂದಿನ ದಿನಗಳಲ್ಲಿ ಯಾವ ರೀತಿಯ ನಿರ್ಧಾರ ಕೈ ಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments