ಕಿರುತೆರೆಗೆ ಎಂಟ್ರಿ ಕೊಟ್ರ ನಟಿ ರಶ್ಮಿಕಾ ಮಂದಣ್ಣ ಸಹೋದರಿ..! ?

02 May 2019 2:28 PM | Entertainment
983 Report

ಸ್ಯಾಂಡಲ್ ವುಡ್ ಸಾನ್ವಿ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ…  ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಈಕೆ ಬಾಲಿವುಡ್ ನಲ್ಲಿಯೂ ಕೂಡ ಮಿಂಚುವುದಕ್ಕೆ ಸಿದ್ದವಾಗುತ್ತಿದ್ದಾರೆ. ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ನಗುಮುಖದಿಂದಲೇ ಎಲ್ಲರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ಕರ್ನಾಟಕ ಕ್ರಶ್ ರಶ್ಮಿಕಾ ರೀತಿ ಕಾಣುವ ಮತ್ತೊಬ್ಬ ಕಲಾವಿದೆ ಕಿರುತೆರೆಯಲ್ಲಿ ಅಭಿನಯಿಸಲಿದ್ದಾರೆ. ಈ ಕಿರುತೆರೆ ನಟಿ ಸೇಮ್ ರಶ್ಮಿಕಾ ರೀತಿಯೇ ಕಾಣುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಇಷ್ಟ ದೇವತೆ' ಧಾರವಾಹಿಯಲ್ಲಿ ವೈದೇವಿ ಪಾತ್ರದ ಮೂಲಕ ಎಲ್ಲರಿಗೂ ಕೂಡ ಪರಿಚಿತವಾಗುತ್ತಿದ್ದಾರೆ. ನಿಜ ಏನು ಅಂದ್ರೆ ಆಕೆಗೂ ರಶ್ಮಿಕಾಗೂ ಏನು ಸಂಬಂಧವಿಲ್ಲವಂತೆ... ಆದರೆ ಆಕೆ ನೋಡೋದಿಕ್ಕೆ ರಶ್ಮಿಕಾರವರಂತೆ ಕಾಣುತ್ತಿದ್ದಾರೆ ಅಷ್ಟೆ. ,ಈ ನಟಿಗೂ ರಶ್ಮಿಕಾಗೂ ಸಂಬಂಧವಿಲ್ಲ. ರಶ್ಮಿಕಾಗೆ ಒಬ್ಬಳೇ ಸಹೋದರಿ ಇದ್ದು, ಆಕೆಗೆ ಇನ್ನೂ 5 ವರ್ಷ ಎಂಬುದು ಎಲ್ಲರಿಗೂ ಕೂಡ ತಿಳಿದೆ ಇದೆ.. ಇಷ್ಟದೇವತೆ ಧಾರವಾಹಿಯನ್ನು ನಿರ್ದೇಶನ ಮಾಡುತ್ತಿರುವುದು ಪುಟ್ಟಗೌರಿ ಮದುವೆ ಖ್ಯಾತಿಯ ರಂಜಿನಿ ರಾಘವನ್. ರಂಜನಿ ರಾಘವನ್ ಪುಟ್ಟಗೌರಿಯ ಮದುವೆ ಧಾರವಾಹಿಯಲ್ಲಿ ಕಾಣಿಸಿಕೊಂಡು ಎಲ್ಲರ ಜನಮನ ಗೆದ್ದಿದ್ದರು.

Edited By

Manjula M

Reported By

Manjula M

Comments