ಡಿಂಪಲ್ ಕ್ವೀನ್ ರಚಿತಾ ರಾಮ್​​​ ಮನೆಯಲ್ಲಿ ಮದುವೆ ಮಾತುಕಥೆ..!! ಹುಡುಗ ಯಾರ್ ಗೊತ್ತಾ..?

02 May 2019 11:47 AM | Entertainment
14865 Report

ಅಂತೂ ಇಂತೂ ರಚಿತಾ ರಾಮ್ ಮನೆಯಲ್ಲಿ ಮಂಗಳವಾದ್ಯದ ಶಬ್ಧ ಅತೀ ಶೀಘ್ರದಲ್ಲಿ ಕೇಳುವುದಂತೂ ಗ್ಯಾರೆಂಟಿ… ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಎಲ್ಲಿ ಹೋದರೂ ಕೂಡ ಒಂದೇ ಪ್ರಶ್ನೆ.. ನಿಮ್ಮ ಮದುವೆ ಯಾವಾಗ, ಹುಡುಗ ಯಾರು ಅನ್ನೋದು.. ಈ ಹಿಂದೆ ರಚಿತಾ ರಾಮ್ ನಾನು ಗೌಡರ ಹುಡುಗನನ್ನೆ ಮದುವೆಯಾಗುತ್ತೇನೆ ಎಂದಿದ್ದರು.. ಇದೀಗ ಅವರ ಮನೆಯಲ್ಲಿ ಮದುವೆಯ ಮಾತುಕತೆ ಜೋರಾಗಿ ನಡೆಯುತ್ತಿದೆ.. ಅರೇ ಹೌದಾ ರಚಿತಾ ಮದುವೆಯಾಗುತ್ತಿದ್ದಾರಾ ಎಂಬ ಪ್ರಶ್ನೆ ನಿಮ್ಮ ಮುಂದೆ ಬಂದಿರಬಹುದು ಅದಕ್ಕೆ ಉತ್ತರ ಇಲ್ಲಿದೆ ನೋಡಿ..

ಡಿಂಪಲ್ ಮನೆಯಲ್ಲಿ ಮದುವೆ ಮಾತು ಕೇಳಿ ಬರುತ್ತಿದೆ ನಿಜ.. ಆದರೆ ಮದುವೆಯಾಗುತ್ತಿರುವುದು ರಚಿತಾ ಅಲ್ಲ, ಅವರ ಬದಲಿಗೆ ಅವರ ಅಕ್ಕಾ ನಿತ್ಯ ರಾಮ್ ಗೆ ಮದುವೆ ಫಿಕ್ಸ್ ಆಗಿದೆ.. ಕನ್ನಡ ಹಾಗೂ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.. ಸದ್ಯ ರಚಿತಾರಾಮ್ ಅಕ್ಕಾ ನಿತ್ಯರಾಮ್ ಹೊಸ ಜೀವನಕ್ಕೆ ಕಾಲಿಡಲು ಸಿದ್ದವಾಗುತ್ತಿದ್ದಾರೆ. ನಿತ್ಯ ಕೂಡ ಎಲ್ಲರಿಗೂ ಚಿರ ಪರಿಚಿತ..ಕೆಲವೊಂದು ಸಿನಿಮಾಗಳನ್ನು ಮಾಡಿದ್ದಾರೆ…. ನಿತ್ಯ ಮದುವೆಯಾಗ್ತಿರೋದು ವಿದೇಶದಲ್ಲಿ ಇರೋ ಗೌಡರ ಹುಡುಗನನ್ನು… ಸೆಪ್ಟೆಂಬರ್ ನಲ್ಲಿಯೇ ಮದುವೆ ನಡೆಯಲಿದೆ. ಸದ್ಯ ರಚಿತಾ ರಾಮ್ ಗೆ ಲೈನ್ ಕ್ಲಿಯರ್ ಆಗಿದೆ. ಅಕ್ಕ ನ ಮದುವೆ ಆದ ಮೇಲೆ ನೆಕ್ಟ್ ತಂಗಿದೇ ಅಲ್ವ..ಸೋ ರಚಿತಾ ರಾಮ್ಅಕ್ಕನ ಮದುವೆ ಆಗುತ್ತಿದ್ದಂತೆ ಅವರು ಕೂಡ ಮದುವೆಗೆ ಸಿದ್ದ ಆಗುವುದರಲ್ಲಿ ನೋ ಡೌಟ್

Edited By

Manjula M

Reported By

Manjula M

Comments