ಅಪ್ಪ ನೀನು ಬದಲಾಗು ಎಂದು ಅಂಗಲಾಚಿದ ಕ್ರಿಕೆಟರ್ ಮಗಳು....

30 Apr 2019 4:10 PM | Entertainment
258 Report

ಕ್ರಿಕೆಟರ್ ಮಹಮ್ಮದ್ ಶಮಿ ಮತ್ತು ಪತ್ನಿ ಹಸೀನ್ ವಿವಾದ  ವರ್ಷದಿಂದ ನಡೆಯುತ್ತಲೇ ಇದೆ. ಗಂಡ ಹೆಂಡ್ತಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋವಾಗೇ ಕ್ರಿಕೆಟಿಗನ ಮಗಳು ಇದೀಗ ಅಪ್ಪನ ಪ್ರೀತಿಯಿಂದ ವಂಚಿತಳಾಗಿದ್ದಾಳೆ. ಮೊನ್ನೆಯಷ್ಟೇ ಮಾವನ ಮನೆಗೆ ಬಂದ ಹಸೀನ್ ಅವರನ್ನು ಪೊಲೀಸರು ಮಧ್ಯರಾತ್ರಿಯೇ ಮನೆಯಿಂದ ಹೊರ ಕಳುಹಿಸಿ ಅರೆಸ್ಟ್ ಮಾಡಿದ್ದರು. ಆ ನಂತರ ಬಿಡುಗಡೆ ಮಾಡಿದ್ದಾರೆ.

 ಶಮಿ ಪುತ್ರಿ ಅಪ್ಪನಿಗೆ ಸಲಹೆಯೊಂದನ್ನು ನೀಡಿದ್ದಾಳೆ. ಅಪ್ಪ ನೀನು ಬದಲಾಗು ಎಂದು ಹೇಳಿದ್ದಾಳೆ. ಅಪ್ಪ ಕೆಟ್ಟವನಾಗಿ ವರ್ತಿಸುತ್ತಾನೆ. ಮಹಮ್ಮದ್ ಶಮಿ ವಿರುದ್ಧ ಹಸೀನ್ ಗಂಭೀರ ಆರೋಪ ಮಾಡಿದ್ರು. ಶಮಿ ಇನ್ನೊಬ್ಬಳ ಜೊತೆ ಸಂಬಂಧ ಹೊಂದಿದ್ದಾನೆ. ಕುಟುಂಬ ನಿರ್ವಹಣೆಗೆ ಹಣ ಕೊಡುತ್ತಿಲ್ಲ. ಅಷ್ಟೇ  ಅಲ್ಲದೇ  ವಿಚ್ಛೇದನ ನೀಡ್ತೇನೆ ಎಂದಿದ್ದರು. ಶಮಿ ಕೂಡ ಹಸೀನ್ ವಿರುದ್ಧವಾಗಿ ಆರೋಪ ಮಾಡಿದ್ದಾರೆ. ಹಸೀನ್ ತಮ್ಮ ಮೊದಲನೇ ಮದುವೆ ಮತ್ತು ಮಕ್ಕಳ ಬಗ್ಗೆ ನನ್ನ ಬಳಿ ಮುಚ್ಚಿಟ್ಟಿದ್ದಾರೆ. ಆ ನಂತರ ನನಗೆ ವಿಷಯ ಗೊತ್ತಾಗಿದೆ ಎಂದು ಶಮಿ ದೂರಿನಲ್ಲಿ ತಿಳಿಸಿದ್ದಾರೆ. ಮಾಡೆಲ್ ಆಗಿರುವ ಹಸೀನ್, ಕೊಲ್ಕತ್ತಾ ನೈಟ್ ರೈಡರ್ಸ್ ಚಿಯರ್ ಗರ್ಲ್ ಆಗಿದ್ದ ವೇಳೆ ಶಮಿ ಪ್ರೀತಿಗೆ ಬಿದ್ದಿದ್ದರು. ಕುಟುಂಬಸ್ಥರ ಇಚ್ಛೆಗೆ ವಿರುದ್ಧವಾಗಿ 2014ರಲ್ಲಿ ಮದುವೆಯಾಗಿದ್ದರು.

Image result for mohammed shami

 

Edited By

Kavya shree

Reported By

Kavya shree

Comments