'ರಾಧ ರಮಣ' ಆಯ್ತು ಇದೀಗ 'ಮಗಳು ಜಾನಕಿ'ಯಿಂದ ಮತ್ತೊಬ್ಬ ಕಲಾವಿದೆ ಔಟ್..!!!

30 Apr 2019 12:56 PM | Entertainment
1375 Report

 ವೀಕ್ಷಕರು ಸೀರಿಯಲ್ ಶುರುವಾದಾಗ ಪಾತ್ರದಾರಿಗಳನ್ನು ತಮ್ಮ ಮನೆಯವರಂತೆಯೇ ಭಾವಿಸಿ ಪ್ರೀತಿಸುತ್ತಾರೆ. ಇದೀಗ ಜನಪ್ರಿಯ ಸೀರಿಯಲ್  ನಟಿಯೊಬ್ಬರು ಧಾರವಾಹಿಯಿಂದ ಹೊರ ಬಂದಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸೀರಿಯಲ್ ಪ್ರೇಮಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಟಿ ಎನ್, ಸೀತಾರಾಮ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಧಾರವಾಹಿ ಮಗಳು ಜಾನಕಿಯಿಂದ ನಟಿಯೊಬ್ಬರು ಹೊರ ಬಂದಿದ್ದಾರೆ.

Image result for magalu janaki

ಪ್ರೇಕ್ಷಕರ ಅಚ್ಚು ಮೆಚ್ಚಿನ ಪಾತ್ರ ಚಂಚಲ ಪಾತ್ರ ಬದಲಾಗಿದೆ. ಚಂಚಲ ಪಾತ್ರ ಬದಲಾಗಿ ಆ ಜಾಗಕ್ಕೆ  ಬೇರೊಬ್ಬ ಕಲಾವಿದೆ ಎಂಟ್ರಿ ಕೊಟ್ಟಿದ್ದಾರೆ. ಜಾನಕಿಯ ಮುದ್ದಿನ ತಂಗಿ, ಭಾರ್ಗಿ ಎರಡನೇ ಮಗಳು ಜಾಗಕ್ಕೆ ಬೇರೊಬ್ಬ ನಟಿ ಬಂದಿದ್ದಾರೆ. ಅಂದಹಾಗೇ ಚಂಚಲ ಪಾತ್ರ ಮಾಡುತ್ತಿದ್ದ ಐಶ್ವರ್ಯ ಜಾಗಕ್ಕೆ ಪೂಜಾ ಎಂಬ ಹೊಸ ನಟಿ ಬರುತ್ತಿದ್ದಾರೆ. ಪೂಜಾ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ.  ಧಾರವಾಹಿ ಶುರುವಿನಿಂದಲೂ ಚಂಚಲ ಪಾತ್ರ ಮಾಡುತ್ತಿದ್ದ ಐಶ್ವರ್ಯ ಮಾತಿಗೆ ಜನರು ಫಿದಾ ಆಗಿದ್ದಾರೆ. ಚಂಚಲ ಪಾತ್ರ ಮಾಡುತ್ತಿದ್ದ ಐಶ್ವರ್ಯರನ್ನು ಮತ್ತೆ ಕರೆಸುವಂತೆ ಸೋಶಿಯಲ್ ಮಿಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಚಂಚಲ ಹೈಯರ್ ಎಜುಕೇಷನ್ ಮಾಡಲು ಇಂಗ್ಲೆಂಡ್ ಗೆ ಹೋಗಿದ್ದರು. ಸ್ವಲ್ಪ ದಿನಗಳ ಕಾಲ ಚಂಚಲ ಸ್ಕ್ರೀನ್ ನಿಂದ ಮರೆಯಾಗಿದ್ದರು. ವೀಕ್ಷಕರು ಚಂಚಲ ಅವರನ್ನು ತೋರಿಸುತ್ತಿಲ್ಲ, ಅವರನ್ನು ತೋರಿಸಿ ಎಂದು   ರಿಕ್ವೆಸ್ಟ್ ಮಾಡಿಕೊಂಡ ಮೇಲೆ ಚಂಚಲ ಇಂಗ್ಲೆಂಡ್ ನಿಂದ ಎಜುಕೇಷನ್ ಮುಗಿಸಿವಾಪಸ್ ಆಗಿದ್ದಾರೆ. ಮನೆಗೆ ಬಂದ ಹೊಸ ಚಂಚಲ ನೋಡಿ ಅಭಿಮಾನಿಗಳು ಶಾಕ್  ಆಗಿದ್ದಾರೆ. ಚಂಚಲ ಪಾತ್ರದಲ್ಲಿ ಬೇರೊಬ್ಬ ನಟಿ ಮನೆಗೆ ಬಂದಿದ್ದರು.

Image result for magalu janaki

Edited By

Kavya shree

Reported By

Kavya shree

Comments