ತನ್ನ ಬಗ್ಗೆ ಅನುಮಾನ ವ್ಯಕ್ತಪಡಿಸಿದವರಿಗೆ ಫೋಟೋ ಹಾಕಿ ತಿರುಗೇಟು ಕೊಟ್ಟ ಡಿಪ್ಪಿ

30 Apr 2019 11:40 AM | Entertainment
205 Report

ಈ ಬಾರಿ ಪ್ರದಾನಿ ನರೇಂದ್ರ ಮೋದಿಯವರು ಬಹು ಹೆಚ್ಚಳವಾಗಿ ಮತದಾನ ಮಾಡಬೇಕೆಂದು ದೇಶದ ಪ್ರಜೆಗಳಲ್ಲಿ ಮನವಿ ಮಾಡಿಕೊಂಡಿದ್ದರು. ಬಾಲಿವುಡ್’ನ ಕೆಲ ಸೆಲೆಬ್ರಿಟಿಗಳನ್ನು ಕುರಿತು ಖುದ್ದು ಮಾತನಾಡಿದ  ಅವರು  ಈ ಬಾರಿ ತಾವು ಅತೀ ಹೆಚ್ಚು ಓಟಿಂಗ್ ನಡೆಯುವಂತೆ ನಿಮ್ಮ ಸಹಾಯ ಬಯಸುವಾದಾಗಿ ಕೇಳಿಕೊಂಡಿದ್ದರು. ನಿಮ್ಮಿಂ ಸಾಧ್ಯ ನಿಮ್ಮ ಸ್ಟೇಟ್ ಮೆಂಟ್ ನಿಂದ ನಿಮ್ಮ ಫ್ಯಾನ್ಸ್ ಬಳಗ ಖಂಡಿತಾ ಕೇಳುತ್ತದೆ. ನೀವು  ನಿಮ್ಮ ಅಭಿಮಾನಿಗಳಲ್ಲಿ ತಪ್ಪದೆ ಮತ ಹಾಕಿ ಎಂದು  ಮನವಿ ಮಾಡಿಕೊಳ್ಳುವಂತೆ ಕೋರಿಕೊಂಡಿದ್ದರು.

ಮೋದಿಯವರ ಮಾತಿಗೆ ಬಾಲಿವುಡ್ ಸೆಲೆಬ್ರಿಟಿಗಳು ತಲೆಯಾಡಿಸಿದ್ದರು ಕೂಡ. ಹಾಗೇ ತಮ್ಮ ಫೇಸ್ ಬುಕ್ ಖಾತೆಗಳಲ್ಲಿ ಲೈವ್ ಆಗಿ ಬಂದು ಫ್ಯಾನ್ಸ್ ಗಳಲ್ಲಿ ಜಾಗೃತಿ ಮೂಡಿಸಿದ್ದರು. ಆದರೆ  ಹಾಗೇ ಕೇಳಿ ಸ್ಟಾರ್ ನಟ-ನಟಿಯೇ ಓಟ್ ಮಾಡಿಲ್ಲವೆಂದರೆ ....ಈಗ ಕೆಲ ಬಾಲಿವುಡ್ ಖ್ಯಾತ ಸ್ಟಾರ್ ನಟ- ನಟಿಯರು ಮತ ಚಲಾವಣೆ ಮಾಡಿಲ್ಲವೆಂದು ಅಪವಾದ ಕೇಳಿ ಬರುತ್ತಿದೆ. ಅದರಲ್ಲಿ ನಟಿ ದೀಪಿಕಾ ಪಡುಕೋಣೆ ಹೆಸರು  ಕೂಡ ಕೇಳಿ ಬಂದಿದೆ. ಈ ಬಾರಿ ಓಟ್ ಮಾಡಿಲ್ಲ, ಅವರು ಭಾರತೀಯ ಪೌರತ್ಆವವನ್ದನೇ ಪಡೆದಿಲ್ಲವೆಂದವರಿಗೆ ಡಿಪ್ಪಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರಂತೂ ದೀಪಿಕಾ ಭಾರತದ ಪೌರತ್ವವನ್ನೇ ಪಡೆದಿಲ್ಲ ಎನ್ನುವಷ್ಟರ ಮಟ್ಟಿಗೆ ಆನುಮಾನ ವ್ಯಕ್ತಪಡಿಸಿದ್ರು. ಅದಕ್ಕೆ ಸರಿಯಾಗಿ ದೀಪಿಕಾ ಕ್ಲಾಸ್ ತೆಗದುಕೊಂಡಿದ್ದಾರೆ. ಫೋಟೋ ಹಾಕುವುದರ ಮೂಲಕ ನಾನು ಭಾರತೀಯಳೇ, ನಾನು ಕೂಡ ನನ್ನ ಹಕ್ಕು ಚಲಾಯಿಸಿದ್ದೇನೆ ನೋಡಿ ಎಂದು ಉತ್ತರಿಸಿದ್ದಾರೆ.ತಮ್ಮ ಮತದಾನ ಹಕ್ಕನ್ನು ಚಲಾಯಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿರುವ ದೀಪಿಕಾ, ಹಲವರು ನನ್ನ ಪೌರತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅವರಿಗೆ ಈ ಮತದಾನವೇ ಉತ್ತರ. ನಾನು ಯಾರು ಹಾಗೂ ಎಲ್ಲಿಂದ ಬಂದಿದ್ದೇನೆ ಎನ್ನುವುದನ್ನು ಎಂದೂ ಮರೆಯುವುದಿಲ್ಲ ಎಂದು ಉತ್ತರಿಸಿದ್ದಾರೆ. ಸೋಮವಾರ ನಡೆದ ನಾಲ್ಕನೇ ಹಂತದ ಚುನಾವಣೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಮತದಾನ ಮಾಡಿದ್ದಾರೆ. ಲಾಸ್ ಏಂಜಲೀಸ್ ನಲ್ಲಿದ್ದ ನಟಿ ಪ್ರಿಯಾಂಕಾ ಮತದಾನ  ಮಾಡಲೆಂದೇ ಮುಂಬೈ ಗೆ ಬಂದಿದ್ದರು.

Edited By

Kavya shree

Reported By

Kavya shree

Comments