ಹಾಸ್ಯ ನಟ ಬುಲೆಟ್ ಪ್ರಕಾಶ್ ರಿಂದ ಸ್ಯಾಂಡಲ್ ವುಡ್ ಪದ್ಮಾವತಿಗೆ ಕಾದಿದೆ ಗ್ರಹಚಾರ: ನಾಳೆ ರಿಲೀಸ್ ಆಗುತ್ತಂತೆ ವಿಡಿಯೋ…!!!

29 Apr 2019 4:53 PM | Entertainment
1228 Report

ಅಂದಹಾಗೇ ಇತ್ತೀಚೆಗೆ ಸುಖಾ ಸುಮ್ಮನೇ ಟ್ರೊಲ್ ಆಗ್ತಾನೇ ಇರೋರ ಪೈಕಿ ರಮ್ಯಾಗೆ ಮೊದಲ ಸ್ಥಾನ. ಏನಾದರೊಂದು ಕಿತಾಪತಿ ಮಾಡುತ್ತಲೇ ಮೈ ಮೇಲೆ ವಿವಾದಗಳ್ನನು ಎಳೆದುಕೊಳ್ಳುವ ರಮ್ಯಾಗೆ ಈ ಬಾರಿ ಬುಲೆಟ್ ಪ್ರಕಾಶ್ ಯಾವ ರೀತಿ ತಿರುಗೇಟು ಕೊಟ್ಟಿದ್ದಾರೆ ಗೊತ್ತಾ...? ಹಿಂದೊಮ್ಮೆ ನಟ ಜಗ್ಗೇಶ್ ಅವರು ಕಾಂಗ್ರೆಸ್ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾಗೆ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದರು. ಸೋಶಿಯಲ್ ಮಿಡಿಯಾ ಮೂಲಕವೇ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.ಇದೀಗ ಬುಲೆಟ್ ಪ್ರಕಾಶ್ ಅವರು ರಮ್ಯಾಗೆ ಡ್ರಿಲ್ ಮಾಡಿಸಿದ್ದಾರೆ.

ಬುಲೆಟ್ ಪ್ರಕಾಶ್ ಮಾತಿಗೆ ರಮ್ಯಾ ಯಾವ ರೀತಿ ರಿಯಾಕ್ಟ್ ಮಾಡ್ತಾರೋ ಕಾದು ನೋಡಬೇಕು. ಅಂದಹಾಗೇ ಬುಲೆಟ್ ಪ್ರಕಾಶ್ ರಿಂದ ಬೈಸಿಕೊಳ್ಳೋ ಕೆಲಸವನ್ನ ಈ ಸ್ಯಾಂಡಲ್'ವುಡ್ ಪದ್ಮಾವತಿ ಮಾಡಿದ್ದಾದ್ರು ಏನು ಅಂತೀರಾ…? ಮೋದಿಯ ವಿಚಾರವಾಗಿ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ರಮ್ಯಾ ಈ ಬಾರಿಯೂ ಅಂತಹದ್ದೇ ವಿವಾದಕ್ಕೆ ಗುರಿಯಾಗಿದ್ದಾರೆ. ಪ್ರಧಾನಿ ಮೋದಿಯನ್ನು ಹಿಟ್ಲರ್ ಗೆ ಹೋಲಿಸಿ  ಫೋಟೋ ಪೋಸ್ಟ್ ಮಾಡಿದ್ದಾರೆ. ಎಡಿಟ್ ಮಾಡಿದ ಫೋಟೋವೊಂದನ್ನು ಹಾಕುವುದರ ಮೂಲಕ ಇದೀಗ ರಮ್ಯಾ ಕಾಲೆಳೆಯುವವರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಅಂದಹಾಗೇ ರಮ್ಯಾ ಟ್ವೀಟ್ ಗೆ ತಿರುಗೇಟು ಕೊಟ್ಟಿರುವ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ತಿರುಗಿ ಬಿದ್ದಿದ್ದಾರೆ.  ತಮ್ಮ ಟ್ವಿಟ್ಟರಿನಲ್ಲಿ, “ರಮ್ಯ ಮೇಡಮ್ (ಪದ್ಮಾವತಿ) ಈ ಮಗುವಿನ ವಯಸ್ಸಿನಲ್ಲಿ ನಿಮ್ಮ ತಂದೆಯವರು ನಿಮ್ಮ ಕಿವಿ ಹಿಂಡಿದ್ದರೆ ನೀವು ಹೀಗೆ ಆಗುತ್ತಿರಲಿಲ್ಲ. ನೀವು ಎರಡು ಚುನಾವಣೆಗಳಲ್ಲಿ ನಿಮ್ಮ ಹಕ್ಕು ಅಂದರೆ ಮತ ಚಲಾಯಿಸದವರು ನಿಮಗೆ ವಿಶ್ವನಾಯಕ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವುದಕ್ಕೆ ಯಾವುದೇ ನೈತಿಕತೆ ಇಲ್ಲ. ನಾಳೆ ವಿಡಿಯೋ ಮೂಲಕ ಉತ್ತರ ಕೊಡುತ್ತೇನೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

Edited By

Kavya shree

Reported By

Kavya shree

Comments