ಕ್ಯಾನ್ಸರ್'ನಿಂದ ಬಳಲುತ್ತಿರುವ ನಟಿಯಿಂದಲೂ ಮತದಾನ..!!!

29 Apr 2019 1:37 PM | Entertainment
276 Report

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸ್ಟಾರ್ ನಟಿ ಸೋನಾಲಿ ಬೇಂದ್ರೆ ಇಂದು ಮತ ಚಲಾವಣೆ ಮಾಡಿದ್ದಾರೆ.  ಮುಂಬೈನ ವೈಲ್ ಪಾರ್ಲೆ ಕ್ಷೇತ್ರದಲ್ಲಿ ಅವರು ಮತ ಚಲಾಯಿಸಿದರು. ಅಂದಹಾಗೇ ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೇರಿಕಾ ದನ್ಯೂರ್ಯಾಕ್ ನಲ್ಲಿದ್ದ ನಟಿ ಸೊನಾಲಿ ಆ ನಂತರ ಭಾರತಕ್ಕೆ ವಾಪಸ್ಸಾಗಿದ್ದರು.  ಈಗಲೂ ಅವರು ನಿಯಮಿತವಾಗಿ ಚಿಕಿತ್ಸೆ ಪಡೆದುಕೊಳ್ತಿದ್ದಾರೆ. ಅಂದಹಾಗೇ ಸೋನಾಲಿ ಬೇಂದ್ರೆ ಅವರು ಕ್ಯಾನ್ಸರ್ ಹೋರಾಟವನ್ನು ಎದುರಿಸಿ ಬಂದಿದ್ದಾರೆ. ನಟಿಗೆ ಕ್ಯಾನ್ಸರ್  ಎಂದು ಗೊತ್ತಾದಾಗ ಸ್ವಲ್ಪವೂ ಎದೆಗುಂದಲಿಲ್ವಂತೆ.

ಆ ನಂತರ ತಾವೇ ಖುದ್ದು ಮಾದ್ಯಮಗಳೆದುರು ಅಭಿಮಾನಿಗಳಿಗೆ ತಾವು ಕ್ಯಾನ್ಸರ್ ನಿಮದ ಬಳಲುತ್ತಿರುವುದಾಗಿ ಹೇಳಿ ಕೊಂಡಿದ್ದರು.ಇದೀಗ ತಾವು ಅನಾರೋಗ್ಯದ ನಡುವೆಯೂ ಮತಚಲಾಯಿಸುವ ಮೂಲಕ ಮತದಾನದ ಮಹತ್ವವನ್ನು ಸಾರಿ ಹೇಳಿದ್ದಾರೆ. ನಟಿ ಸೋನಾಲಿ ಬೇಂದ್ರೆ ಕನ್ನಡದಲ್ಲೂ ನಟಿಸಿದ್ದಾರೆ.ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಅವರು ನಟಿಸಿರುವ ಪ್ರೀತ್ಸೆ ಸಿನಿಮಾದಲ್ಲಿ ನಟಿಸಿದ ಇವರು ಇಂದಿಗೂ ಕನ್ನಡಾಭಿಮಾನಿಗಳಿಗೆ ಕಿರಣ್ ಎಂದೇ ಪರಿಚಿತವಾಗಿದ್ದಾರೆ. ಸೋನಾಲಿ ಕ್ಯಾನ್ಸರ್ ಗೆ ಒಳಗಾದಾಗ ಆಕೆಗೆ ಕುಟುಂಬ ಬೆಂಬಲವಾಗಿ ನಿಂತುಕೊಂಡಿತ್ತಂತೆ. ಮಾನಸಿಕ ಸ್ಥೈರ್ಯ ತುಂಬಿತ್ತಂತೆ. ಆ ಸಮಯದಲ್ಲಿ ಔಷಧಿಗಳಿಗಿಂತ ಹೆಚ್ಚಾಗಿ ಮನೆಯವರ ಪ್ರೀತಿ ವಿಶ್ವಾಸ ಬೇಕು. ಅದು ನನಗೆ ಸಿಕ್ಕಿದೆ ಎನ್ನುತ್ತಾರೆ ಸಾವು ಗೆದ್ದ ಈ ನಟಿ. ಲೋಕಸಭಾ ಚುನಾವಣೆಗೆ ನಾಲ್ಕನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಮುಂಬೈಯ ಆರು ಲೋಕಸಭಾ ಕ್ಷೇತ್ರಗಳಲ್ಲೂ ಇಂದೇ ಮತದಾನ ನಡೆಯುತ್ತಿರುವುದರಿಂದ ಹಲವು ಸೆಲೆಬ್ರಿಟಿಗಳು ಮತ ಚಲಾಯಿಸಿದ್ದಾರೆ.ಲೋಕಸಬಾ ಚುನಾವಣೆಯ ಫಲಿತಾಂಶ ಮೇ 23 ರಂದು ಹೊರಬೀಳಲಿದೆ.

Edited By

Kavya shree

Reported By

Kavya shree

Comments