ಮಗಧೀರನ ಬೆಡಗಿ ಈತನ ಅಭಿಮಾನಿಯಂತೆ…!! ಯಾರ ಗೊತ್ತಾ..?

29 Apr 2019 9:36 AM | Entertainment
521 Report

ಒಂದೊಂದು ಕ್ಷೇತ್ರದವರಿಗೆ ಒಬ್ಬೊಬ್ಬರನ್ನು ಕಂಡರೆ ತುಂಬಾ ಇಷ್ಟ.. ಹಾಗೇ ನೋಡುವುದಾದರೆ ಸಿನಿಮಾಗೂ ಕ್ರಿಕೆಟಿಗೂ ಒಂಥರಾ ನಂಟು ಜಾಸ್ತಿನೇ ಇದೆ ಬಿಡಿ… ಇದೀಗ ಪಡ್ಡೆ ಹುಡುಗರ ಹಾಟ್ ಫೇವರೇಟ್ ಆದ ಮಗಧೀರನ ಸುಂದರಿ ಕಾಜಲ್ ಅಗರ್ವಾಲ್’ಗೆ ಈ ಕ್ರಿಕೆಟರ್ ಅಂದ್ರೆ ತುಂಬಾ ಇಷ್ಟವಂತೆ.. ಅರೇ ಹೌದಾ  ಯಾರು ಅಂತೀರಾ… ಮುಂದೆ ಓದಿ..!!

 

ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಕಾಜಲ್ ಅಗರ್ ವಾಲ್ ಗೆ  ದೊಡ್ಡ ಅಭಿಮಾನಿ ಬಳಗವೇ ಇದೆ. ಇದೀಗ ಆಕೆ ತಾನು ಕ್ರಿಕೆಟಿಗ ರೋಹಿತ್ ಶರ್ಮಾರ ದೊಡ್ಡ ಅಭಿಮಾನಿ ಎಂದು ಕಾಜಲ್ ತಿಳಿಸಿದ್ದಾರೆ. ಕಾಜಲ್ ಅಗರ್ ವಾಲ್  ತೆಲಗು, ತಮಿಳು ಸೇರಿದಂತೆ ಹಿಂದಿ ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ. ದಕ್ಷಿಣ ಭಾರತದ ಸಿನಿ ಅಂಗಳದಲ್ಲಿ ಕಾಜಲ್ ಹೆಸರಿನಿಂದಲೇ ಸಿನಿಮಾಗಳು ಹಿಟ್ ಆಗಿವೆ ಎಂಬುದು ಅನೇಕ  ಮಂದಿಯ ಮಾತಾಗಿದೆ... ಕಾಜಲ್ ನಾನು ರೋಹಿತ್ ಶರ್ಮಾ ಅಭಿಮಾನಿ ಎಂಬ ವಿಷಯಯನ್ನು ಬಹಿರಂಗ ಪಡಿಸಿದ್ದಾರೆ.  ಕಾಜಲ್ ಅಭಿನಯದ ಮಗಧೀರ ಸಿನಿಮಾ ಹೆಚ್ಚು ಹೆಸರು ಮಾಡಿ ಬಾಕ್ಸ್ ಆಫಿಸ್ ಅನ್ನು ಲೂಟಿ ಮಾಡಿ ಕಾಜಲ್ ಗೆ ಒಳ್ಳೆ ನೇಮು ಪ್ರೇಮು ತಂದುಕೊಟ್ಟಿತ್ತು. ಡಾರ್ಲಿಂಗ್, ಬೃಂದಾವನಂ, ಮಿ.ಪರ್ಫೆಕ್ಟ್, ನಾಯಕ್, ಬಾದ್‍ಶಾ, ಖೈದಿ ನಂಬರ್ 150, ವಿವೇಗಂ, ಸ್ಪೆಶಲ್ 26, ಮೆರ್ಸಲ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಜಲ್ ನಟಿಸಿದ್ದಾರೆ. ಮಗಧೀರನ ಬೆಡಗಿ ಕಾಜಲ್ ಗೆ ರೋಹಿತ್ ಶರ್ಮಾ ಅಂದ್ರೆ ಇಷ್ಟ ಎಂಬುದನ್ನು ರಿವಿಲ್ ಮಾಡಿದ್ದಾರೆ ಎನ್ನುವುದೇ ಕುತೂಹಲದ ವಿಷಯ.

Edited By

Manjula M

Reported By

Manjula M

Comments