ಶಾಕಿಂಗ್ : ವಂಚನೆ ಪ್ರಕರಣದಲ್ಲಿ ಖ್ಯಾತ ಹಾಸ್ಯ ನಟ ಸಾಧು ಕೋಕಿಲ...!!!

27 Apr 2019 5:10 PM | Entertainment
1143 Report

ಸಿನಿಮಾ ರಂಗದಲ್ಲಿ ವಂಚನೆ ಆಗೋದು ಏನು ಹೊಸದಲ್ಲ. ಆದರೆ ಈ ಬಾರಿ ಕನ್ನಡ ಸಿನಿಮಾ ರಂಗದ ಖ್ಯಾತ ಹಾಸ್ಯ ನಟ ಸಾಧು ಕೋಕಿಲ ಅವರ ಹೆಸರು ವಂಚನೆ ಪ್ರಕರಣದಲ್ಲಿ ಕೇಳಿ ಬಂದಿದೆ. ಸಿನಿ ನಿರ್ಮಾಪಕರಿಗೆ ವಂಚನೆ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೀಗೆ ವಂಚನೆಗೊಳಗಾದ ನಿರ್ಮಾಪಕ ಯಾರೆಂದರೆ  'ರಾವಣ' ಸಿನಿಮಾ ನಿರ್ಮಾಪಕ ಶಿವಶಂಕರ್. ಅಂದಹಾಗೇ ತಮ್ಮ ರಾವಣ ಸಿನಿಮಾದಲ್ಲಿ ಹಾಸ್ಯ ನಟ ಸಾಧು ಅವರನ್ನು ಕರೆತಂದು ಪಾತ್ರ ಮಾಡಬೇಕು ಎಂದು ಬಹುದಿನಗಳ ಕಾಲ ಪ್ರಯತ್ನ ಮಾಡಿದ್ದರಂತೆ.

ಈ ಮಧ್ಯೆ ಹರಿ ಮತ್ತು ಅವಿ ಎಂಬುವವರು ಬಂದು ಶಿವ ಶಂಕರ್ ಅವರು ನಮಗೆ ಸಾದು ಸರ್ ಗೊತ್ತಿದೆ. ಅವರನ್ನು ನಿಮ್ಮ ಸಿನಿಮಾದಲ್ಲಿ ನಟಿಸಲು ಒಪ್ಪಿಸುತ್ತೇವೆ.ಸದ್ಯ ಅವರು  ರಿಯಾಲಿಟಿ ಶೋ ಜಡ್ಜ್ ಆಗಿದ್ದಾರೆ. ಅವರನ್ನು ಕರೆತರುವ ಜವಬ್ದಾರಿ ನಮ್ಮದು ಎಂದು ಶಿವ ಶಂಕರ್ ಅವರಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಕೆಲ ದಿನಗಳ ನಂತರ ಸಾಧು ಕೋಕಿಲ ಸರ್ ಅವರು  ನಿಮ್ಮ ಸಿನಿಮಾದಲ್ಲಿ ಹಾಸ್ಯ ಪಾತ್ರ ಮಾಡಲು ಒಪ್ಪಿದ್ದಾರೆ. ಶೂಟಿಂಗ್ ದಿನ ಬಂದು ಅಭಿನಯಿಸಿ ಹೋಗ್ತಾರೆ. ಅವರಿಗೆ ಮುಂಚಿತವಾಗಿ ಅಡ್ವಾನ್ಸ್ ಕೊಡಿ ಎಂದು ನಿರ್ಮಾಪಕ ಶಿವ ಶಂಕರ್ ಬಳಿ ಕೇಳಿದ್ದಾರೆ  ಮುಂಗಡವಾಗಿ 35 ಸಾವಿರ ರೂಅನ್ನು ಶಿವಶಂಕರ್ ಬಳಿ ಆ ಇಬ್ಬರು ತೆಗೆದುಕೊಂಡಿದ್ದಾರೆ.  ಶೂಟಿಂಗ್ ಶುರು ಮಾಡಿಕೊಂಡ ಶಿವಶಂಕರ್ ಗೆ ಎಷ್ಟು  ಬಾರಿ ಪ್ರಯತ್ನ ಮಾಡಿದ್ರು ಹಾಸ್ಯ ನಟ ಸಾಧು ಕೋಕಿಲ ಅವರನ್ನು ಕಾಂಟಾಕ್ಟ್ ಮಾಡಲು ಸಾದ್ಯವಾಗಲೇ ಇಲ್ಲ. ಸೀನ್ ಶೂಟಿಂಗ್ ಇದ್ದಾಗಲೂ ಸಾಧು ಕೋಕಿಲ ಬರುತ್ತಾರೆ ಬರುತ್ತಾರೆ ಎಂದು ಕಾದರೂ ಬಾರದೇ ಇರದಿದ್ದಾಗ ತಾವು ವಂಚನೆಗೆ ಒಳಗಾಗಿರೋದು ಗೊತ್ತಾಗಿದೆ.ಈ ಸಂಬಂಧ ರಾವಣ ಸಿನಿಮಾ ನಿರ್ಮಾಪಕ ಶಿವಶಂಕರ್, ಫಿಲ್ಮ ಛೇಂಬರ್ ಗೆ ದೂರು ನೀಡಿದ್ದು, ತಮಗೆ ವಂಚನೆ ಆಗಿದೆ. ನ್ಯಾಯ ಒದಗಿಸಿಕೊಡಬೇಕು. ವಂಚಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

Edited By

Manjula M

Reported By

Kavya shree

Comments