ತನಗಿಂತ 15 ವರ್ಷದ ಚಿಕ್ಕವಯಸ್ಸಿನ ಹುಡುಗನ ಜೊತೆ ಸ್ಟಾರ್ ನಟಿ ಸುಶ್ಮಿತಾ ಸೇನ್ ನಿಶ್ಚಿತಾರ್ಥ..?!!!

27 Apr 2019 3:26 PM | Entertainment
347 Report

ತಮ್ಮ ವಯಸ್ಸಿಗಿಂತ ಚಿಕ್ಕವರನ್ನ, ಅವರಿಗಿಂತ ದುಪ್ಪಟ್ಟು ವಯಸ್ಸಿನಲ್ಲಿ ದೊಡ್ಡವರನ್ನು ಮದುವೆಯಾಗೋದು ಸಿನಿಮಾ ರಂಗದಲ್ಲಿ ಕಾಮನ್ ಆಗಿ  ಬಿಟ್ಟಿದೆ.ಈಗಾಗಲೇ ಸ್ಟಾರ್ ನಟ-ನಟಿಯರು ಅದೇ ಹಾದಿ ತುಳಿದಿದ್ದಾರೆ. ಸದ್ಯ ನಟಿ ಸುಶ್ಮಿತಾ ಸೇನ್ ಅವರು ತಮಗಿಂತ 15 ವರ್ಷದ ಕಿರಿಯ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಯೇ ಎಂಬ ಸುದ್ದಿ ವೈರಲ್ ಆಗಿದೆ. ಇದೇನು ಹೊಸದಲ್ಲಾ ಬಿಡಿ, ಈಗಾಗಲೇ ಸುಶ್ಮಿತಾ ಸೇನ್ ಆ ಹುಡುಗನ ಜೊತೆ ಲವ್ , ಡೇಟಿಂಗ್ ಅಂತಾ ಸುತ್ತಾಡುತ್ತಿದ್ದರು. ಆಮೇಲೆ ಮಾಧ್ಯಮಗಳ ಮುಂದೆಯೇ ಈತ ತನ್ನ ಪ್ರಿಯರ ರೋಹ್ಮನ್ ಶಾಲ್ ಎಂದು ಪರಿಚಯ ಮಾಡಿಕೊಟ್ಟಿದ್ರು.

ಆದರೆ ನಿಶ್ಚಿತಾರ್ಥದಲ್ಲಿ ರೆಡಿಯಾಗುವಂತಹ ಫೋಟೋವೊಂದು ಸಾಮಾಜಿಕ ಜಾಲತಾಣಗಗಳಲ್ಲಿ ಹರಿದಾಡುತ್ತಿದೆ.ಈ ಫೋಟೋ ನೋಡಿದ ಕೆಲವು ಅಭಿಮಾನಿಗಳು ಸುಶ್ಮಿತಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿದು ಇನ್‍ಸ್ಟಾಗ್ರಾಂನಲ್ಲಿ ಕಮೆಂಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಸುಶ್ಮಿತಾ ಆಗಲಿ, ರೋಹ್ಮಲ್ ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.ಅಂದಹಾಗೇ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸುಶ್ಮಿತಾ ಮತ್ತು ರೋಹ್ಮನ್ ಅವರು ಮೊದ ಮೊದಲು ಸ್ನೇಹಿತರಾಗಿದ್ದರು.

ಆ ನಂತರ ಸ್ನೇಹ ಪ್ರೀತಿಗೆ ತಿರುಗಿತು. ರೋಹ್ಮನ್ ಅವರೇ ಕೆಲವು ದಿನಗಳ ಹಿಮದಷ್ಟೃಏ ಸುಶ್ಮಿತಾಗೆ ಪ್ರಪೋಸ್ ಮಾಡಿದ್ದರು. ಸುಶ್ಮಿತಾ ಕೂ ಲವ್ ಅಕ್ಸೆಪ್ಟ್ ಮಾಡಿಕೊಂಡಿದ್ದರು. ಆ ನಂತರ ಇಬ್ಬರು ಕೈ ಕೈ ಹಿಡಿದು ಸುತ್ತಾಡುತ್ತಿದ್ದುದರ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಯೇ ಆಗಿತ್ತು. 2019 ರಲ್ಲಿ ಇವರಿಬ್ಬರು ಸಪ್ತಪದಿ ತುಳಿಯಲಿದ್ದಾರೆಂಬ ಸುದ್ದಿಯೂ ಸುದ್ದಿ ಮಾಧ್ಯಮವೊಂದರಲ್ಲಿ  ಪ್ರಕಟವಾಗಿತ್ತು.

Edited By

Kavya shree

Reported By

Kavya shree

Comments