ಮೇಘನಾ ರಾಜ್ ನಟಿಯೂ ಆದ್ರು, ಗಾಯಕಿ ಕೂಡ ಆದ್ರು, ಈಗ...?!!!

27 Apr 2019 12:21 PM | Entertainment
836 Report

ನಟ ಚಿರಂಜೀವಿ ಮತ್ತು ಸರ್ಜಾ  ಮೇಘನಾ ರಾಜ್'ರನ್ನು ಸದ್ಯ ಸ್ಯಾಂಡಲ್’ವುಡ್’ನ ಕ್ಯೂಟ್ ಕಪಲ್ ಸ್ಟಾರ್ ಎಂದೇ ಕರೆಯಲಾಗುತ್ತದೆ. ಅಂದಹಾಗೇ ಇತ್ತೀಚೆಗೆ ಮೇಘನಾ ರಾಜ್ ಹೆಸರು ಸ್ಯಾಂಡಲ್’ವುಡ್ ನಲ್ಲಿ ಭಾರೀ ಆಗಿಯೇ ಕೇಳಿ ಬರುತ್ತಿದೆ. ಮೇಘನಾ ನಟಿಯಾಗಿ, ಸಿಂಗರ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಆಕೆ ಇನ್ನೊಂದು ಸ್ಟೆಪ್ಪು ಮುಂದೆ ಹೋಗಿ ನಿರ್ಮಾಪಕಿಯಾಗಿಯೂ ಬರುತ್ತಿದ್ದಾರೆ. ಮೇಘನಾ ಮತ್ತು ಚಿರು ಇಬ್ರದ್ದು ಲವ್ ಕಮ್ ಅರೆಂಜ್ ಮ್ಯಾರೇಜ್. ಅಂದಹಾಗೇ ನನ್ನ ಕೆಲಸಕ್ಕೆ ನಿಜಕ್ಕೂ ಸಾಥ್ ಕೊಟ್ಟಿದ್ದು ನನ್ನ ಅಪ್ಪ-ಅಮ್ಮ. ಅಷ್ಟೇ ಅಲ್ಲದೇ ನನ್ನ ಪತಿ ಚಿರಂಜೀವಿ ಕೂಡ ನನ್ನೊಂದಿಗೆ ಸದಾ ಇರ್ತಾರೆ ಎಂಬುದನ್ನು ತಿಳಿಸಿದ್ದಾರೆ.

Related image

ಮಜಾ ಟಾಕೀಸ್ ನ  ಪವನ್ ಅವರು ಬಂದು ಕಥೆ ಹೇಳಿದಾಗ ನನಗೆ ಹಿಡಿಸಿತು. ನಾನು ಒಪ್ಪಿಕೊಂಡೇ ಎಂದಿದ್ದಾರೆ.ಮೇಘನಾ ರಾಜ್‌ ಅವರೊಂದಿಗೆ ಸಹ ನಿರ್ಮಾಪಕರಾಗಿ ಅಶೋಕ್‌ ಸುಲೇಗಾಯ್‌, ಜಿ.ಆರ್‌.ಮೋಹನ್‌ಕುಮಾರ್‌, ರಥಾವರ ನಿರ್ಮಾಪಕ ಧರ್ಮಶ್ರೀ ಮಂಜುನಾಥ್‌, ಗೋಂದರಾಜುಲು ಮತ್ತು ಪ್ರವೀಣ್‌.ಎಂ ಅವರು ಇದ್ದಾರೆ. ಬಿ ಎಸ್‌ ಮೀರಾ ಸಾಹಿತ್ಯದ ಮೂರು ಹಾಡುಗಳಿಗೆ ಕೊಳಲುವಾದಕ ವಸಂತ್‌ಕುಮಾರ್‌.ಎಲ್‌.ಎನ್‌ ಅವರ ಸಂಗೀತ ಇದೆ. ಹೊಸೆಯುತ್ತಿದ್ದಾರೆ.

Image result for maja talkies pavan ಸಂತೋಷ್‌ಹರಿತ್ಸ ಅವರು ಕ್ಯಾಮೆರಾ ಹಿಡಿದರೆ, ಕುಮಾರ್‌ ಕೆರಗೋಡು ಸಂಭಾಷಣೆ ಬರೆಯುತ್ತಿದ್ದಾರೆ. ಮಗಳ ಮೊದಲ ನಿರ್ಮಾಣದ ಸಿನಿಮಾದಲ್ಲಿ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಕಾಣಿಸಿಕೊಳ್ತಿದ್ದಾರೆ. ಇನ್ನು ಉಳಿದಂತೇ ಮುಖ್ಯಮಂತ್ರಿ ಚಂದ್ರು ಸೇರಿದಂತೇ ಹಿರಿ ಕಿರಿ ಕಲಾವಿದರು  ಇದರಲ್ಲಿ ನಟಿಸಿದ್ದಾರೆ.

Edited By

Kavya shree

Reported By

Kavya shree

Comments