'ನನ್ನ ಹೊಸ ಕಾರನ್ನೇ ಎಗರಿಸಿಬಿಟ್ಟಿದ್ದ ನಟ ಶಶಿ ಕುಮಾರ್ ’ : ಜಗ್ಗೇಶ್

27 Apr 2019 10:46 AM | Entertainment
438 Report

ನವರಸ ನಾಯಕ ಜಗ್ಗೇಶ್  ಇದೀಗ ಎಲ್ಲಡೆ ಸುದ್ದಿಯಾಗುತ್ತಿದ್ದಾರೆ.  ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟೀವ್ ಆಗಿರುವ ಜಗಣ್ಣ ಒಂದು ಇಂಟ್ರೆಸ್ಟಿಂಗ್ ಸುದ್ದಿಯೊಂದನ್ನು  ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ಕ್ರೇಜಿಸ್ಟಾರ್ ಮಗಳ ಮದುವೆಗೆಂದು ಕರೆಯಲು ಬಂದಿದ್ದಾಗ ಅವರಿಗೆ ಅಪರೂಪದ ವಸ್ತು ತೋರಿಸಿ ಅಚ್ಚರಿಗೊಳಿಸಿದ್ರು. ಇದೀಗ ಶಶಿಕುಮಾರ್ ಅವರು ಜಗಣ್ಣನ ಕಾರನ್ನು ಎಗರಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಡ್ಯಾನ್ಸ್ ಸ್ಟಾರ್ ಶಶಿ ಕುಮಾರ್  ಅವರು ಜಗಣ್ಣ ತೆಗೆದುಕೊಂಡ ಹೊಸ ಕಾರನ್ನು ಯಾಮಾರಿಸಿ ತೆಗೆದುಕೊಂಡು ಹೋಗಿ ಬಿಟ್ಟಿದ್ದರಂತೆ. ಅವರೇ ಅಂದು ನಡೆದ ಸ್ವಾರಸ್ಯ ಘಟನೆಯನ್ನು ಮೆಲುಕು ಹಾಕಿದ್ದಾರೆ.

Related image

ಅಂದಹಾಗೇ ಜಗ್ಗೇಶ್ ಸಿನಿಮಾ ಮಾಡುವಾಗ  ಜಗ್ಗೇಶ್ ಹತ್ತಿರ ಮೊದಲ ಕಾರು ಪ್ರೀಮಿಯರ್ ಪದ್ಮಿನಿ ಇತ್ತಂತೆ. ಆಗ ಕೊಡೋ ಸಂಭಾವನೆ ಜೀವನ ಸರಿದೂಗಿಸೋಕೆ ಹಾಕ್ತಾಯಿರಲಿಲ್ಲ. ನನ್ ಜೊತೇಲಿ ಇದ್ದವರ  ಹತ್ತಿರ ಕಾರ್ ಇತ್ತು. ನನ್ನ ಬಳಿ ಇರಲಿಲ್ಲ. ಹೇಗೋ ತೆಗೆದುಕೊಂಡೆ. ಒಂದ್ ಸಲ ಹಂಸಲೇಖ ಅವರು ನನ್ನ ಕಾರಿನಲ್ಲಿ ಕೂತ್ಕೊಂಡು ಹೋಗುವಾಗ ಇದೇನಯ್ಯಾ ಡಬ್ಬ ಕಾರು ಅಂತ ರೇಗಿಸಿಬಿಟ್ರು. ನನ್ನ ಮನಸ್ಸಿಗೆ  ತುಂಬಾ ಫೀಲ್ ಆಯ್ತು.ಆಮೇಲೆ  ಮಾರುತಿ 800 ತೆಗೆದುಕೋ ಬೇಕು ಅಂತಾ ಡಿಸೈಡ್ ಮಾಡ್ದೆ. ತೆಗೆದುಕೊಂಡೆ, ಕಾರನ್ನು ತೆಗೆದುಕೊಂಡು ಬಂದು ನನ್ನ ಫ್ರೆಂಡ್ಸ್ ಬಳಿ  ತಂದು ದಿಢೀರ್ ಅಂತಾ ನಿಲ್ಲಿಸಿದೆ. ಅಲ್ಲಿಯೇ ಇದ್ದ ಶಶಿಕುಮಾರ್ ನನ್ನ ಕಾರು ನೋಡಿ ಬಾಯಿ ಬಿಟ್ಟ. ತಂದು ನಿಲ್ಸಿದ್ದೇ ತಡ ಲೋ ಒಂದ್ ರೌಂಡ್ ಕಾರು ಕೊಡು ಅಂತಾ ತೆಗೆದುಕೊಂಡು ಹೋಗಿಯೇ ಬಿಟ್ಟ, ಆಮೇಲೆ ಆಸಾಮಿ ಪತ್ತೇನೆ ಇಲ್ಲ. ಎರಡು ದಿನ ಬರಲೇ ಇಲ್ಲ. ಹಾಗೆಲ್ಲಾ ಮೊಬೈಲ್ ಇರಲಿಲ್ಲ. ಬೇಕೆಂದಾಗ ಫೋನ್ ನಮಗೆ ಸಿಕ್ತಾ ಇರಲಿಲ್ಲ. ಮೈಸೂರಿಗೆ ಶೂಟಿಂಗ್'ಗೆಂದು ಹೋಗಿ ಬಿಟ್ಟಿದ್ದ. ನನ್ನ ರೇಗಿಸೋಕೆ ಆತ ಹಾಗ್ ಮಾಡಿದ್ದ.  ನಾನು ತೆಗೆದುಕೊಂಡ ಹೊಸ ಕಾರ್ ಶಶಿ ಕುಮಾರ್ ಪಾಲಾಯ್ತು ಎಂದು ಹಾಸ್ಯ ಮಿಶ್ರಿತವಾಗಿ ಹೇಳ್ತಾರೆ ಸರ್ವರ್ ಸೋಮಣ್ಣ. ಅಂದಹಾಗೇ ಈ ಘಟನೆಯನ್ನು ಮೆಲುಕು ಹಾಕಿದ್ದು  ಜಗ್ಗೇಶ್ ಅವರ ಪ್ರೀಮಿಯರ್ ಪದ್ಮಿನಿ ಸಿನಿಮಾ ರಿಲೀಸ್ ಸಂದರ್ಭದಲ್ಲಿ. ನಿನ್ನೆ ರಾಜ್ಯಾದ್ಯಂತ ಬಿಡುಗಡೆಯಾಗಿರುವ ಈ ಸಿನಿಮಾಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ.

Edited By

Kavya shree

Reported By

Kavya shree

Comments