ಕೆಜಿಎಫ್-2 ಆಡಿಷನ್ ನಲ್ಲಿ ಆಯ್ಕೆಯಾದವರು ಯಾರು..?!!!

26 Apr 2019 4:31 PM | Entertainment
286 Report

ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಹವಾ ಎಸ್ಟಿದೆ ಎಂದ್ರೆ ಕೆಜಿಎಫ್-2 ನಿರೀಕ್ಷೆಯಲ್ಲಿ ಎಲ್ಲರು ಬಕ ಪಕ್ಷಿಗಳಂತೆ ಕಾತುರರಾಗಿದ್ದಾರೆ. ಯಶ್ ಕೆಜಿಎಫ್-2 ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಬಾರಿ ಮತ್ತಷ್ಟು ಫ್ಯಾನ್ಸ್ ಗೆ ಥ್ರಿಲ್ಲಿಂಗ್ ರಸದೌತಣ ಕೊಡಲು ಸಿನಿ ತಂಡ ಭರ್ಜರಿಯಾಗಿಯೇ ವರ್ಕೌಟ್ ಮಾಡಿದೆ. ಬಾಲಿವುಡ್ ಖ್ಯಾತ ಸ್ಟಾರ್ ಒಬ್ಬರು ಕೂಡ ಕೆಜಿಎಫ್-2 ನಲ್ಲಿ ನಟಿಸಲು ಆಗಮಿಸಿದ್ದಾರೆ. ಒಟ್ಟಾರೆ ಕನ್ನಡದ ಒಂದು ಸಿನಿಮಾ ದೇಶದ ಗಡಿದಾಡಿ ಹೋಗಿ ಒಂದು ಸಂಚಲನವನ್ನೇ ಸೃಷ್ಟಿಸಿದೆ ಎಂದ್ರೆ ಅದರ ಪವರ್ ಗೆ ಸಲಾಂ ಹೊಡಿಲೇ ಬೇಕು. ಇನ್ನು ಈ ಬಾರಿ ಕೆಜಿಎಫ್-2 ಶುರುವಿನಲ್ಲೇ ಅಭಿಮಾನಿಗಳಿಗೆ ಗುಡ್ ನ್ಯೂಸ್'ವೊಂದನ್ನು ಹರಿಬಿಟ್ಟಿದ್ರು.

Image result for kgf-2ಕೆಜಿಎಫ್-2 ನಲ್ಲಿ ನಟಿಸಲು ಆಡಿಷನ್ ಕೂಡ ಸಿನಿ ತಂಡ ಅರೆಂಜ್ ಮಾಡಿತ್ತು. ಇಂದು ಆಡಿಷನ್ ಆರಂಭವಾಗಿದೆ. ಸಿನಿಮಾದಲ್ಲಿ ಸಣ್ಣ ಚಾನ್ಸ್ ಗಿಟ್ಟಿಸಿಕೊಳ್ಳಲು ಯಾವ ಪರಿ ಕ್ರೇಜ್ ಹುಟ್ಟಿದೆ ಎಂದ್ರೆ, ಆಡಿಷನ್ ಗೆ ಬಂದವರ ಸರತಿ ಸಾಲು ನೋಡಿದ್ರೆ ನಿಮಗೆ ಗೊತ್ತಾಗಿಬಿಡುತ್ತೆ.ಕೆಜಿಎಫ್ ಭಾಗ-1 ರಲ್ಲಿ ಸಿಕ್ಕ ಸಣ್ಣ ಸಣ್ಣ ಅವ ಕಾಶದಲ್ಲೇ ಯಶ್’ರಷ್ಟೇ  ಸಹ ಕಲಾವಿದರು ಕೂಡ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದರು. ಅಷ್ಟೇ ಪ್ರಮಾಣದಲ್ಲಿ ಗುರುತಿಸಿಕೊಂಡರು. ಇದೀಗ ಕೆಜಿಎಫ್-2 ಅವಕಾಶದ ಬಾಗಿಲು ತೆರೆದಿದೆ.

ನಮಗಾಗಿ ದೊಡ್ಡ ಅವಕಾಶವೊಂದನ್ನು ಕೊಟ್ಟಿದ್ದಾರೆ. ಆಡಿಷನ್‌ಗೆ ಕಲಾವಿದರನ್ನು ಆಹ್ವಾನಿಸಲಾಗಿದೆ. ಮಲ್ಲೇಶ್ವರಂನ GM Rejyoj ಹೊಟೇಲಿನಲ್ಲಿ ಆಡಿಶನ್‌ಗೆ ಕರೆಯಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಭಾರೀ ಜನಸಾಗರವನ್ನು ಕಂಡು ಚಿತ್ರತಂಡವೇ ಅಚ್ಚರಿಗೊಂಡಿದೆ.8-16 ವರ್ಷದೊಳಗಿನ ಮಕ್ಕಳು ಹಾಗೂ 25 ವರ್ಷ ಮೇಲ್ಪಟ್ಟ ಯುವಕರನ್ನು ಆಡಿಶನ್‌ನಲ್ಲಿ ಭಾಗವಹಿಸಲು ಕೇಳಿ ಕೊಳ್ಳಲಾಗಿತ್ತು. ಅಲ್ಲಿ ಸೇರಿದ್ದ ಜನರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಆಡಿಷನ್ ಮಾಡಿರುವ ಚಿತ್ರತಂಡ ಯಾರನ್ನು ತಾವು ಸೆಲೆಕ್ಟ್ ಮಾಡಿದ್ದೀವಿ ಎಂದು ಸದ್ಯದಲ್ಲೇ ತಿಳಿಸಲಾಗುವುದು ಎಂದು ಹೇಳಿದೆ.

Edited By

Kavya shree

Reported By

Kavya shree

Comments