ವೀಡಿಯೋ ಮಾಡುತ್ತಿದ್ದವರ ಮೊಬೈಲ್ ಕಸಿದ ನಟ ಸಲ್ಮಾನ್ ಮೇಲೆ ದೂರು ದಾಖಲು…!!!

26 Apr 2019 11:12 AM | Entertainment
158 Report

ಅಂದಹಾಗೇ ಸಿನಿಮಾದವರು ಹೆಸರು-ದುಡ್ಡು ಸಿಕ್ಕಿದ ಮೇಲೆ ಅವರ ಬುದ್ಧಿ, ತಾಳ್ಮೆ ಸ್ವಲ್ಪ ಸ್ವಲ್ಪವೇ ಕಡಿಮೆಯಾಗುತ್ತಾ ಹೋಗುತ್ತದೆ. ಅದಕ್ಕೆ ಸಾಕ್ಷಿ  ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್.  ಸದ್ಯ ಇದೀಗ ಮಾಧ್ಯಮದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟೇ ಅಲ್ಲದೇ ಸಲ್ಮಾನ್ ಖಾನ್ ಮೇಲೆ ದೂರು ಕೂಡ ದಾಖಲಾಗಿದೆ. ಸಲ್ಮಾನ್ ಕೋಪ ನೆತ್ತಿ ಗೇರುವಂತೆ ನಡೆದಿದ್ದಾದ್ರು ಏನು.

ಸಲ್ಮಾನ್ ಇದ್ದ ಜಾಗದಲ್ಲಿ ಅವರನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ ವೇಳೆ ಪತ್ರಕರ್ತರ ಮೊಬೈಲ್ ಫೋನ್ ಕಸಿದುಕೊಂಡು ಅವರನ್ನು ಬಾಯಿಗೆ ಬಂದಂತೆ ಬೈಯ್ದಾಡಿದ್ದಾರೆ. ಅಶೋಕ್ ಶ್ಯಾಮ್ ಲಾಲ್ ಪಾಂಡೆ ಅವರ ಮೇಲೆ ಸಲ್ಮಾನ್ ಕೋಪ ಮಾಡಿಕೊಂಡಿದ್ದು. ತಮ್ಮ ಮೊಬೈಲ್ ಕಸಿದುಕೊಂಡು ದರ್ಪ ತೋರಿದ ಸ್ಟಾರ್ ನಟನ ಮೇಲೆ  ದೂರು ದಾಖಲಿಸಿದ್ದಾರೆ ಈ ಪತ್ರಕರ್ತ.ಜುಹುವಿನಿಂದ ಕಂಡಿವಿಲಿಗೆ ತಮ್ಮ ಕ್ಯಾಮೆರಾ ಮ್ಯಾನ್ ಜತೆಗೆ ತೆರಳುವಾಗ ಸಲ್ಮಾನ್ ಖಾನ್ ಬೈಸಿಕಲ್ ಓಡಿಸುತ್ತಿದ್ದುದನ್ನು ನೋಡಿದೆ. ಅವರ ಅಂಗರಕ್ಷಕರನ್ನು ವಿಡಿಯೋ ಮಾಡಬಹುದಾ ಎಂದು ಕೇಳಿದ್ದಕ್ಕೆ ಒಪ್ಪಿಕೊಂಡರು. ಶೂಟಿಂಗ್ ಗಾಗಿ ನಮ್ಮ ಮೊಬೈಲ್ ಫೋನ್ ತೆಗೆದು, ಚಿತ್ರೀಕರಣ ಆರಂಭಿಸಿದಾಗ ಸಲ್ಮಾನ್ ಖಾನ್ ಅವರು ತಮ್ಮ ಅಂಗರಕ್ಷಕರ ಕಡೆ ತಿರುಗಿ ಸನ್ನೆ ಮಾಡಿದರು.c ಬೈಕ್ ನಲ್ಲಿ ಬಂದ ಅಂಗರಕ್ಷಕರು ನಮ್ಮ ಕ್ಯಾಮೆರಾ ಮನ್ ಅನ್ನು ತಳ್ಳಿದರು. ಅಷ್ಟೇ ಅಲ್ಲ, ನಮ್ಮ ಕಾರನ್ನು ಸಹ ಬಲವಂತವಾಗಿ ನೂಕಿದರು. ಅವರ ಜತೆ ವಾಗ್ವಾದಕ್ಕೆ ಇಳಿದೆವು. ಆಗ ಸ್ವತಃ ಸಲ್ಮಾನ್ ಖಾನ್ ಬಂದರು. ನಾವು ಮಾಧ್ಯಮದವರು ಎಂದು ತಿಳಿಸಿದೆವು. ಆಗ ಸಲ್ಮಾನ್, ಅವೆಲ್ಲ ವಿಷಯ ಅಲ್ಲ ಎಂದು, ನಮ್ಮ ಮೊಬೈಲ್ ಫೋನ್ ಕಸಿದುಕೊಂಡು ಹೋದರು ಎಂದು ದೂರು ನೀಡಿದ್ದಾರೆ. ಸಲ್ಮಾನ್ ಖಾನ್ ಮೇಲೆ ದೂರು ಕೊಟ್ಟ ಮೇಲೆ  ಅವರ ಅಂಗರಕ್ಷಕರು ಬಂದು ತಮ್ಮ ಮೊಬೈಲ್ ಫೋನ್ ನನ್ನು ಹಿಂದುರುಗಿಸಿ ಹೋಗಿದ್ದಾರೆ. ಅಷ್ಟೆ ಅಲ್ಲದೇ ಅನುಮತಿ ಇಲ್ದೇ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು ಎಂದು ಪತ್ರಕರ್ತರ ಮೇಲೆ ದೂರು ದಾಖಲಿಸಿದ್ದಾರೆ.

 

Edited By

Kavya shree

Reported By

Kavya shree

Comments