ಫೋಟೋಶೂಟ್‍ಗೆ ಅಂತ ಹೋದ ನಟಿಗೆ ನನ್ನ ಜೊತೆ ಮಲಗು ಎಂದ ಮಾಡೆಲ್ ಕಮ್ ಫೋಟೋಗ್ರಾಫರ್..!!

26 Apr 2019 10:03 AM | Entertainment
354 Report

ಸಿನಿ ದುನಿಯಾದಲ್ಲಿ ದಿನಕ್ಕೆ ಒಂದಲ್ಲ ಒಂದು ಹಾಟ್ ನ್ಯೂಸ್ ಗಳು ಸುದ್ದಿ ಮಾಡುತ್ತಲೇ ಇರುತ್ತವೆ.. ಅದರಲ್ಲು ಹೆಚ್ಚು ಸುದ್ದಿ ಮಾಡುವುದು ಲೈಂಗಿಕ ಶೋಷಣೆಯ ಬಗ್ಗೆ.. ಎಸ್ ಇದೀಗ ರಷ್ಯನ್ ನಟಿಗೆ ಲೈಂಗಿಕ ಕಿರುಕುಳ ನೀಡಿದಕ್ಕೆ ಮಾಡೆಲ್ ಕಮ್ ಪೋಟೋಗ್ರಾಫರ್ ಅನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.. ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ರೂಪೇಶ್ ಕುಮಾರ್ ಎಂದು ಗುರುತು ಮಾಡಲಾಗಿದೆ.  ನನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಕಿರುಕುಳ ನೀಡುತ್ತಿದ್ದಾನೆ ಎಂದು ನಟಿ ದೂರಿನಲ್ಲಿ ವಿವರಿಸಿದ್ದಾರೆ.  

ನಟಿಯ ದೂರಿನ ಆಧಾರದ ಮೇರೆಗೆ ಫೋಟೋಗ್ರಾಫ‌ರ್‌ನನ್ನು ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ. ರಷ್ಯನ್ ನಟಿ ರಾಘವ ರಾಲೆನ್ಸ್ ನಟಿಸಿರುವ ‘ಕಾಂಚನ 3’ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ರಿ ಡ್ಜಾವಿ ಅಲೆಕ್ಸಾಂಡ್ರಾ ಅವರು ರಾಘವ ಅವರ ಗೆಳತಿಯ ರೋಸಿ ಪಾತ್ರ ಮಾಡಿದ್ದಾರೆ. ಆರೋಪಿ ರೂಪೇಶ್ ಕುಮಾರ್ ಪಬ್‍ನಲ್ಲಿ ನಟಿಯನ್ನು ಭೇಟಿಯಾಗಿದ್ದು, ಅಲ್ಲಿ ಅವಕಾಶ ಕೊಡಿಸುತ್ತೇನೆ, ನೀವು ಜಾಹೀರಾತುಗಳಿಗಾಗಿ ಫೋಟೋಶೂಟ್ ಮಾಡಿಸಿಕೊಳ್ಳಿ ಎಂದು ಕೇಳಿದ್ದಾನೆ.

ಅದಕ್ಕೆ ನಟಿ ಒಪ್ಪಿಕೊಂಡಿದ್ದು, ನುಂಗಂಬಾಕ್ಕಂ ಪ್ರದೇಶದಲ್ಲಿನ ಹೋಟೆಲ್‍ನಲ್ಲಿ ಫೋಟೋಶೂಟ್ ಮಾಡಲು ನಿರ್ಧಾರ ಮಾಡಿದ್ದಾರೆ. ಪೋಟೋ ಶೂಟ್ ಸಮಯದಲ್ಲಿ ರೂಪೇಶ್ ಹಲವು ಭಂಗಿಗಳಲ್ಲಿ ನನ್ನ ಫೋಟೋಗಳನ್ನು ತೆಗೆದಿದ್ದಾನೆ. ಆ ಫೋಟೋಗಳನ್ನು ನನ್ನ ವಾಟ್ಸಪ್ ಕಳುಹಿಸಿ, ನನ್ನ ಜೊತೆ ಮಲಗಬೇಕು ಎಂದು ಕೇಳಿದ್ದಾನೆ. ಅದಕ್ಕೆ ನಾನು ಒಪ್ಪಲಿಲ್ಲ ಒಂದು ವೇಳೆ ನೀನು ಸಹಕರಿಸದಿದ್ದರೆ ನಿನ್ನ ಫೋಟೋಗಳನ್ನು ಮಾರ್ಪ್ ಮಾಡಿ ಸಾಮಾಜಿಕ ಜಾಲತಾಣಗಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.. ಅಷ್ಟೇ ಅಲ್ಲದೇ ಮೆಸೇಜ್, ಫೋನ್ ಮಾಡಿ ಕಿರುಕುಳ ನೀಡುತ್ತಿದ್ದಾನೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ಮಾಡಿದ ನಂತರ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

Edited By

Manjula M

Reported By

Manjula M

Comments