ಮಂಡ್ಯ ಪಕ್ಷೇತರ ಅಭ್ಯರ್ಥಿಯ ‘ಆ’ ಒಂದು ಮಾತಿಗೆ ವಿಷ್ಣು ಅಭಿಮಾನಿಗಳು ಫಿದಾ..!!

24 Apr 2019 5:57 PM | Entertainment
1263 Report

ರೆಬಲ್ ಸ್ಟಾರ್ ಅಂಬರೀಶ್ ಅವರು ಬಾರದ ಲೋಕಕ್ಕೆ ಪಯಣ ಬೆಳಸಿ ಇಂದಿಗೆ ಐದು ತಿಂಗಳುಗಳು ಕಳೆದಿವೆ.. ಅವರು ನಮ್ಮನ್ನ ಅಗಲಿದ್ದಾರೆ ಅಷ್ಟೆ.. ಆದರೆ ಅವರ ನೆನಪುಗಳನ್ನು ಮರೆಯೋಕೆ ಯಾರಿಂದಲೂ ಕೂಡ ಸಾಧ್ಯವಿಲ್ಲ… ಇದೇ ವಿಚಾರವಾಗಿ ಅಂಬಿ ಪತ್ನಿ ಸುಮಲತಾ ಕೂಡ ಭಾವುಕರಾದರು.. ಇಂದು ಕಂಠೀರವರ ಸ್ಟುಡಿಯೊದಲ್ಲಿ ಅಂಬರೀಷ್ ಅವರ ಐದನೇ ತಿಂಗಳ ಪುಣ್ಯಸ್ಮರಣೆ ನಿಮಿತ್ತ ಸಮಾಧಿಗೆ ಪೂಜೆ ಸಲ್ಲಿಸಿದರು. ಇನ್ನೂ ಇದೇ ಸಮಯದಲ್ಲಿ ಮಾತನಾಡಿದ ಸುಮಲತಾ ಅಂಬರೀಷ್ ಅವರ ಪ್ರೀತಿ, ಮಾತು ನೆನಪು ಸಾಕಷ್ಟಿದೆ ಎಂದರು.

ಲೋಕಸಭಾ ಚುನಾವಣೆಯ ನಂತರ ನನಗೆ ಒಂದಷ್ಟು ತಿಳುವಳಿಕೆ ಬಂದಿದೆ. ಮೇ 23ರಂದು ಫಲಿತಾಂಶ ಹೊರಬೀಳಲಿದೆ. ಗೆಲುವಿನ ಬಗ್ಗೆ ಬೆಟ್ಟಿಂಗ್ ನಡೆಯುತ್ತಿರುವುದನ್ನು ನಾನು ವಿರೋಧಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಅಂಬಿ ಸ್ಮಾರಕದ ಮೊದಲು ಡಾ. ರಾಜ್‍ಕುಮಾರ್, ಡಾ. ವಿಷ್ಣುವರ್ಧನ್ ಸ್ಮಾರಕಗಳನ್ನು ಪೂರ್ಣಗೊಳಿಸಬೇಕು ನಂತರ ಅಂಬಿ ಸ್ಮಾರಕವನ್ನು ಪೂರ್ಣಗೊಳಿಸಬೇಕು. ಇದು ಕೇವಲ ನನ್ನ ಆಸೆ ಮಾತ್ರವಲ್ಲ ಇದು ಅಭಿಮಾನಿಗಳ ಆಸೆ ಆಗಿದೆ. ಅಂಬಿ ಇಲ್ಲದಿದ್ದರು ಜನರ ಪ್ರೀತಿ ಮಾತ್ರ ಹಾಗೆಯೇ ಇದೆ ಎಂದರು. ಒಟ್ಟಿನಲ್ಲಿ ಸುಮಲತಾ ವಿಷ್ಣುವರ್ಧನ್ ಅವರ ಮೇಲಿಟ್ಟಿರುವ ಪ್ರೀತಿ ವಿಶ್ವಾಸ ಇಲ್ಲಿ ವ್ಯಕ್ತವಾಯಿತು.. ಮೊದಲು ವಿಷ್ಣುವರ್ಧನ್ ಅವರ ಸ್ಮಾರಕ ಆಗಬೇಕು ನಂತರ ಅಂಬಿಯವರದ್ದು ಎಂದು ತಿಳಿಸಿದರು.ಸುಮಲತಾ ಅವರ ಈ ಮಾತಿಗೆ ವಿಷ್ಣು ಅಭಿಮಾನಿಗಳು ಖುಷಿಯಾಗಿದ್ದಾರೆ…

Edited By

Manjula M

Reported By

Manjula M

Comments