ಅಂಬಿ, ವಿಷ್ಣು, ರಾಜ್ ರ ಹಳೆಯ ನೆನಪನ್ನು ಬಿಚ್ಚಿಟ್ಟ ಸೆಂಚುರಿ ಸ್ಟಾರ್...

24 Apr 2019 5:23 PM | Entertainment
253 Report

ಇಂದು ರಾಜ್ ಅವರ 91 ನೇ ಜನ್ಮ ದಿನಾಚರಣೆಯ ಸಂಭ್ರಮ. ನಾಡಿನಾದ್ಯಂತ ರಾಜ್ ಅಭಿಮಾನಿಗಳು ಬಹಳ ಖುಷಿಯಿಂದ ನೆಚ್ಚಿನ ಸ್ಟಾರ್ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ ಅವರ ಹಿರಿ ಮಗ ಶಿವಣ್ಣ ಮಾತನಾಡಿದ್ದಾರೆ. ರಾಜ್ ಅವರ ಸ್ನಾರಕಕ್ಕೆ ನಮಿಸಿ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಿಜ ಹೇಳ ಬೇಕಂದರೆ ರಾಜ್ ಕುಟುಂಬದಲ್ಲಿ ನಾನು ಹುಟ್ಟಿರೋದೇ ನಮ್ಮ ದೊಡ್ಡ ಪುಣ್ಯ. ಇಂತಹ ತಂದೆಯನ್ನು ಪಡೆದ ನಾವು ನಿಜಕ್ಕೂ ಹೆಮ್ಮೆ ಪಡುತ್ತೇವೆ.

ಅಪ್ಪಾಜಿಯ ಮೇಲೆ ಕೋಟ್ಯಾಂತರ ಅಭಿಮಾನಿಗಳು ಅಪಾರ ಪ್ರೀತಿ ತೋರಿಸುತ್ತಾರೆ. ಎಷ್ಟು ಕೋಟಿ ಕೊಟ್ಟರೂ ಇಂತಹ ಪುಣ್ಯ ನಮಗೆ ಎಂದಿಗೂ ದೊರಕಲಾರದು ಎಂದಿದ್ದಾರೆ.ಇದೇ ದಿನ ಅಂಬಿ ಮಾಮನ 5 ನೇ ತಿಂಗಳ ಪುಣ್ಯ ತಿಥಿ ಇದೆ. ಅವರನ್ನು ಕಳೆದುಕೊಂಡಿರೋದು ಇಂದಿಗೂ ನಮ್ಮನ್ನು ಕಾಡುತ್ತದೆ ಎಂದರು. ಇನ್ನು ರಾಜ್ ಹುಟ್ಟಿದ ದಿನ ಬಂದ್ರೆ ಶೂಟಿಂಗ್ ಇದ್ದಾಗ್ಲೂ ಅವರ ಬಳಿ ಹೋಗಿ ಕೇಕ್ ಕಟ್ ಮಾಡಿಸ್ತಾ ಇದ್ವಿ. ಕೇಕ್ ಗೆ ಖರ್ಚು ಮಾಡೋದನ್ನು ನೋಡಿ ಅವ್ರು ತುಂಬಾನೇ ಬೈಯ್ತಾಯಿದ್ರು ಎಂದರು. ಚಿಕ್ಕಂದಿನಿಂದ ನಾವು ಅಪ್ಪಾಜಿ, ಅಂಬಿಮಾಮ, ವಿಷ್ಣುಮಾಮರನ್ನು ನೋಡಿಕೊಂಡು ಬೆಳೆದವರು. ಅಂದಹಾಗೇ ಇವ್ರು ಸಿನಿಮಾ ರಂಗಕ್ಕೆ ಕೊಟ್ಟ ಕೊಡುಗೆ ಅಪಾರವಾದುದ್ದು. ಇವರ ಆತ್ಮೀಯ ಗೆಳೆತನ ತುಂಬಾನೇ ದೊಡ್ಡದು. ಈ ತ್ರಿಮೂರ್ತಿಗಳ ಸ್ಮಾರಕ ಒಂದೇ ಕಡೆ ಇದ್ದಿದ್ದರೇ ತುಂಬಾ ಚೆನ್ನಾಗಿ ಇರ್ತಾಯಿತ್ತು  ಎಂದರು. ಇನ್ನು ಅಂಬಿ ಸ್ಮಾರಕಕ್ಕೆ ಅಂಬಿ ಪತ್ನಿ ಸುಮಲತಾ  ಮತ್ತು ಅಭಿಷೇಕ್ ಪೂಜೆ ಸಲ್ಲಿಸಿದ್ದಾರೆ.

Edited By

Kavya shree

Reported By

Kavya shree

Comments