ಅಪಘಾತದಲ್ಲಿ 'ರಾಧ ರಮಣ' ಖ್ಯಾತಿಯ ಶ್ವೇತಾ ಇನ್ನಿಲ್ಲ : ಸುಳ್ಳು ಸುದ್ದಿಗೆ ಆಕ್ರೋಶ ವ್ಯಕ್ತಪಡಿಸಿದ ಪತಿ ಆರ್'ಜೆ ಪ್ರದೀಪ್...!!!

24 Apr 2019 1:09 PM | Entertainment
10900 Report

ಅಂದಹಾಗೇ ಇತ್ತೀಚೆಗೆ  ಜನಪ್ರಿಯ ಧಾರವಾಹಿ ರಾಧ ರಮಣದಿಂದ ರಾಧಾ ಮಿಸ್ ಔಟ್ ಆಗಿದ್ದಾರೆ ಎಂಬ ಸುದ್ದಿಗೆ ಅಭಿಮಾನಿ ಬಳಗ ಬೇಸರ ವ್ಯಕ್ತಪಡಿಸಿತ್ತು. ಕಾಂಟ್ರಾಕ್ಟ್ ಬೇಸ್ ಮೇಲೆ  ಕೆಲಸ  ಮಾಡುತ್ತಿದ್ದ ರಾಧಾ ಅಲಿಯಾಸ್ ಶ್ವೇತಾ ಪ್ರಸಾದ್ ಸದ್ಯ ಕಾರು ಅಪಘಾತದಲ್ಲಿ ತೀರಿ ಹೋಗಿದ್ದಾರೆ ಎಂಬ ಸುದ್ದಿಯೊಂದು ಹೊರ ಬಿತ್ತು.  ಈ ಸುದ್ದಿ ಹಬ್ಬುತ್ತಿದ್ದಂತೇ ಶ್ವೇತಾ ಅಭಿಮಾನಿಗಳು ಕ್ಷಣ ಶಾಕ್ ಆಗಿದ್ದಾರೆ. ಸೀರಿಯಲ್ ನಿಂದ ಹೊರ ಬಂದ ಆಕೆ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗಲಿಲ್ಲ. ಆರ್'ಜೆ ಪ್ರದೀಪ್ ಪತ್ನಿಯ ಬಗ್ಗೆ  ಈ ರೀತಿ ತಪ್ಪು ವಿಚಾರಗಳನ್ನು  ಹರಡಿಸಿದ್ದಾರೆ ಆದರೆ ಇದು ಸುಳ್ಳು ಸುದ್ದಿ. ಈ ಕೆಟ್ಟ ಸುದ್ದಿಯನ್ನು ಒಂದು ವೆಬ್ ಸೈಟ್ ವರದಿ ಮಾಡಿದೆ ಎಂದು ಆಕ್ರೋಶಗೊಂಡಿದ್ದಾರೆ.

Related image

ಹಣ ಮಾಡುವ ಉದ್ದೇಶದಿಂದ ಒಂದಿಷ್ಟು ವೆಬ್ಸೈಟ್ ಯೂಟ್ಯೂಬ್ ಚಾನಲ್’ಗಳು ಸುಖಾ-ಸುಮ್ಮನೇ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾರೆ. ಏಪ್ರಿಲ್ 23ರ ರಾತ್ರಿ ಈ ಅವಘಡ ಸಂಭವಿಸಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಈ ಸುದ್ದಿ ನೋಡಿ ಆರ್ ಜೆ ಪ್ರದೀಪ್ ದಂಪತಿ ಮತ್ತು ಅಭಿಮಾನಿಗಳು ಶಾಕ್ ಆಗಿದ್ದಾರೆ. ಲೈಕ್ಸ್ ಗಿಟ್ಟಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ. ಈ ಬಗ್ಗೆ ನನಗೆ  ಅನೇಕರು ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದಾರೆ.  ಕಾರು ಅಪಘಾತದ ಸುದ್ದಿ ಹಬ್ಬುತ್ತಿದ್ದಂತೇ ಸ್ವತಃ ಶ್ವೇತಾ ಕೂಡ ಗಾಬರಿಯಾಗಿದ್ದಾರೆ. ಈ ರೀತಿ ಪ್ರಾಣ ಹೋಗಿದೆ ಎಂಬ ಸುದ್ದಿ ಹಬ್ಬಿಸೋಕೆ ಅವರು ಮಾಡಿರುವ ಮೊಂಡು ಧೈರ್ಯದ ಬಗ್ಗೆ ಅಸಹ್ಯವಾಗುತ್ತಿದೆ ಎಂದು ಪ್ರದೀಪ್ ಪ್ರತಿಕ್ರಿಯೆ ಮಾಡಿದ್ದಾರೆ. ಅಂದಹಾಗೇ ಮತ ಚಲಾಯಿಸಲು ಶ್ವೇತಾ ಶಿವಮೊಗ್ಗಕ್ಕೆ ತೆರಳಿದ್ದಾರೆ. ಅವರು ಹೋದ ಮೇಲೆ ನನಗೆ ಸಾಕಷ್ಟು ಫೋನ್ ಕರೆ ಬಂದಿವೆ. ಇದೂವರೆಗೂ ಕಾಲ್ ಮಾಡಿದವರೆಲ್ಲಾ ಏನಾಯ್ತು, ಹುಷಾರಾಗಿದ್ದೀರಾ, ಅಪಘಾತದ ಸುದ್ದಿ ಓದಿ ಗಾಬರಿಯಾಯ್ತು ಕಾಲ್ ಮಾಡಿದ್ವಿ ಎಂದು ಕೇಳಿದ್ದಾರೆ.

Image result for shwetha prasad with pradeep

ಸೈಬರ್ ಕ್ರೈಮ್ ಗೆ ದೂರು ನೀಡಿದ ಪ್ರದೀಪ್’  ಅವರು ಈ ವಿಚಾರದ ಬಗ್ಗೆ ಆದಷ್ಟು ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂಯೆ ಮನವಿ ಮಾಡಿದ್ದಾರೆ. ಮಡದಿ ಬಗ್ಗೆ ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದರು. ಶ್ವೇತಾ ಪ್ರಸಾದ್ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಧಾ ರಮಣ' ದಾರಾವಾಹಿಯ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಧಾ ಮಿಸ್ ಅಂತಾನೆ ಖ್ಯಾತಿ ಗಳಿಸಿರುವ ಶ್ವೇತಾ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿಯಾಗಿದ್ದಾರೆ. ಇತ್ತೀಚಿಗಷ್ಟೆ 'ರಾಧಾ ರಮಣ' ದಾರಾವಾಹಿಯಿಂದ ಹೊರಬರುತ್ತಿರುವುದಾಗಿ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು ಶ್ವೇತಾ.

Edited By

Kavya shree

Reported By

Kavya shree

Comments