ಡಾ. ರಾಜ್'ರನ್ನ ಸ್ಮರಿಸಿದ ಯಧುವೀರ್ ಒಡೆಯರ್....

24 Apr 2019 11:54 AM | Entertainment
231 Report

ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬ ಇಂದು. ಚಿತ್ರರಂಗದ ಅನೇಕರು ಡಾ. ರಾಜ್ ಗೆ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಷಯ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಮೈಸೂರು ರಾಜವಂಶಸ್ಥ ಯಧುವೀರ್ ಅವರು ವಿಶೇಷ ರೀತಿಯಲ್ಲಿ ಶುಭಾಷಯ ತಿಳಿಸಿದ್ದಾರೆ.

ಇಂದು ನಟ ಸಾರ್ವಭೌಮ ಡಾ. ರಾಜ್’ಕುಮಾರ್ ಅವರ 90 ನೇ ಜಯಂತಿಯಾಗಿದ್ದು, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. ಯದುವೀರ್  ಅವರು ತಮ್ಮ ತಾತ ಜಯರಾಮರಾಜ ಒಡೆಯರ್ ಅವರು ಡಾ. ರಾಜ್ ಅವರಿಗೆ  ಸನಸಮಾನ ಮಾಡುತ್ತಿರುವ ಫೋಟೋ ಜೊತೆ ವಿಶ್ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಧ್ರುವತಾರೆ ಎಂದು ಯದುವೀರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಸ್ಮರಿಸಿದ್ದಾರೆ. ಕನ್ನಡ ಚಲನಚಿತ್ರ ರಂಗದ ಮೇರು ನಟ, ಕನ್ನಡ ಚಿತ್ರರಂಗದ ಧೃವತಾರೆ  ಎಂದೇ ಹೆಸರಾದ ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ 90 ನೇ ಜನ್ಮದಿನದಂದು ಅವರನ್ನು ಸ್ಮರಿಸುತ್ತಿದ್ದೇವೆ. ಡಾ. ರಾಜ್ ಕುಮಾರ್  ಅವರು  ಶ್ರೀಮಾನ್  ಮಹಾರಾಜ ಜಯಚಾಮರಾಜ ಒಡೆಯವರಿಂದ ಗೌರವಿಸಲ್ಪಡುತ್ತಿರುವುದು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

Edited By

Kavya shree

Reported By

Kavya shree

Comments