ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ‘ಈ’ ನಟ ಬಂದಿದ್ದಕ್ಕೆ ಅಪಸ್ವರವೆತ್ತ ನೆಟ್ಟಿಗರು..!!

24 Apr 2019 9:10 AM | Entertainment
1614 Report

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯ ಕಾರ್ಯಕ್ರಮಗಳು ಬರುತ್ತಿವೆ.. ಅದರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್ ವಿತ್ ರಮೇಶ್ ಕೂಡ ಒಂದು… ಈಗಾಗಲೇ ಮೂರು ಆವೃತ್ತಿಗಳನ್ನು ಮುಗಿಸಿರುವ ಈ ಕಾರ್ಯಕ್ರಮ ನಾಲ್ಕನೇ ಆವೃತ್ತಿಯನ್ನು ಶುರು ಮಾಡಿದೆ.. ಈಗಾಗಲೇ ಸೀಸನ್ ನಾಲ್ಕನೇ ಆವೃತ್ತಿಯ ಮೊದಲನೇ ಅಥಿತಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಶ್ರೀ ವೀರೆಂದ್ರ ಹೆಗ್ಗಡೆಯವರು ಬಂದಿದ್ದರು… ಇದೀಗ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಎರಡನೇ ಅಥಿತಿಯಾಗಿ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ರನ್ನು ಕರೆತರುವುದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಘವೇಂದ್ರ ರಾಜ್ ಕುಮಾರ್ ಒಂದು ದೊಡ್ಡ ಕುಟುಂಬದ ಹಿನ್ನಲೆಯಿಂದ ಬಂದವರು. ಅವರು ಹೆಚ್ಚು ಹಿಟ್ ಚಿತ್ರಗಳನ್ನೂ ನೀಡಿಲ್ಲ. ಜತೆಗೆ ಅವರು ಕಷ್ಟದಿಂದ ಮೇಲೆ ಬಂದವರಲ್ಲ. ಹೀಗಿರುವಾಗ ಅವರು ಸಾಧಕರು ಎಂದು ಹೇಗೆ ಎನಿಸಿಕೊಳ್ಳಲು ಸಾಧ್ಯ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಸಾಧಕರು ಎಂದರೆ ಕೇವಲ ಸಿನಿಮಾ ತಾರೆಯರು ಮಾತ್ರನಾ? ಉಳಿದ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಕರೆತರಬಹುದಲ್ಲವೇ? ಸುಧಾ ಮೂರ್ತಿ, ಅನಿಲ್ ಕುಂಬ್ಳೆ, ಪೊಲೀಸ್ ಅಧಿಕಾರಿ ರವಿ ಚೆನ್ನಣ್ಣನವರ್ ಮುಂತಾದ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಕರೆಸಬಹುದಿತ್ತಲ್ಲವೇ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ. ಹೀಗಷ್ಟೆ ಕಾರ್ಯಕ್ರಮ ಪ್ರಾರಂಭವಾಗಿದೆ… ಮುಂದಿನ ದಿನಗಳಲ್ಲಿ ಅವರು ಬರಬಹುದು ಎಂದು ಹಲವರು ತಿಳಿಸಿದ್ದಾರೆ.. ಮುಂಬರುವ ದಿನಗಳಲ್ಲಿ ಯಾವ ಯಾವ ಸಾಧಕರು ಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments