ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಬಿಗ್’ಬಾಸ್ ವಿನ್ನರ್ ಶಶಿ..!!ಕಾರಣ ಏನ್ ಗೊತ್ತಾ..?

23 Apr 2019 12:53 PM | Entertainment
2074 Report

ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್  6 ಸುದ್ದಿ ಮಾಡಿದಷ್ಟು ಬೇರೆ ಯಾವ ಸೀಸನ್ ಕೂಡ ಸುದ್ದಿ ಮಾಡಲಿಲ್ಲ… ಒಬ್ಬೊಬ್ಬ ಸ್ಪರ್ಧಿ ಕೂಡ ಒಂದೊಂದು ರೀತಿ ಆಡುತ್ತಿದ್ದರು..ಸಿಕ್ಕಾಪಟ್ಟೆ ಕಾಂಟ್ರೊವರ್ಸಿಗಳನ್ನು ಕ್ರಿಯೆಟ್ ಮಾಡುತ್ತಿದ್ದರು..ಕನ್ನಡ ಬಿಗ್​ಬಾಸ್​-6 ವಿಜೇತ ಮಾಡ್ರನ್​ ರೈತ ಶಶಿಕುಮಾರ್​ ಇದೀಗ ಸಿನಿಮಾ ನಾಯಕರಾಗಿ ಬೆಳ್ಳಿ ಪರದೆಗೆ ಎಂಟ್ರಿ  ಕೊಟ್ಟಿದ್ದಾರೆ. 'ಕೌಸಲ್ಯಾ ಕಲ್ಯಾಣ' ಎಂಬ ಸಿನಿಮಾದ ನಾಯಕ ನಟನಾಗಿ ಶಶಿ ಕುಮಾರ್ ನಟಿಸುತ್ತಿದ್ದು, ಚಿತ್ರದ ಫಸ್ಟ್​ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ. ಆದರೆ ನೆಟ್ಟಿಗರು ಮಾತ್ರ ಶಶಿ ವಿರುದ್ದ ಕಿಡಿಕಾರಿದ್ದಾರೆ..  

ಮೊದಲ ಸಿನಿಮಾ ಮಾಡುತ್ತಿರುವ ಬಿಗ್ ಬಾಸ್ ಸ್ಪರ್ಧಿ ಶಶಿ ಅವರಿಗೆ ಶುಭ ಹಾರೈಸುವ ಬದಲು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೃಷಿಯಲ್ಲಿ ಪದವಿ ಪಡೆದುಕೊಂಡಿರುವ ಶಶಿಕುಮಾರ್​ ರೈತ ಎಂಬ ಮಾನದಂಡದ ಮೇಲೆಯೇ ಬಿಗ್​ಬಾಸ್​ಗೆ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದರು. ಶೋನಿಂದ ಹೊರಬಂದ ಮೇಲೆ ರೈತನಾಗಿ ಮುಂದುವರೆಯುತ್ತೇನೆ ಎಂದು ಹೇಳಿಕೊಂಡು ಓಡಾಡುತ್ತಿದ್ದ ಮಾಡ್ರನ್​ ರೈತ ಇದೀಗ ಕೃಷಿಯತ್ತ ಮುಖ ತೋರದೆ ಸಿನಿಮಾ ಮಾಡಲು ಮುಂದಾಗಿರುವುದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ರೈತ ಎಂಬ ಮುಖವಾಡ ಹಾಕಿಕೊಂಡು ಎಲ್ಲರನ್ನೂ ಮೂರ್ಖನನ್ನಾಗಿ ಮಾಡಿದ… ಎಂದು ಸೋಷಿಯಲ್ ಮಿಡೀಯಾದಲ್ಲಿ ಹರಿಹಾಯುತ್ತಿದ್ದಾರೆ.. ಒಟ್ಟಿನಲ್ಲಿ ಶಶಿ ಸಿನಿಮಾ ಮಾಡುತ್ತಿರುವುದೇ ತಪ್ಪು ಎನ್ನುವ ರೀತಿ ಮಾತನಾಡುತ್ತಿದ್ದಾರೆ… ಈ ಹಿಂದೆ ಶಶಿಯು ಶಾಲಾ ಮಕ್ಕಳನ್ನು ದತ್ತು ಪಡೆದಿದ್ದರು…

Edited By

Manjula M

Reported By

Manjula M

Comments