ಬಾಲ್ಯದ ಗೆಳತಿ ಜೊತೆ ನಟ ಜಗನ್ ಮದುವೆ : ಅದ್ಧೂರಿ ವಿವಾಹಕ್ಕೆ ಡೇಟ್ ಫಿಕ್ಸ್

23 Apr 2019 12:05 PM | Entertainment
299 Report

ಅಂದಹಾಗೇ ಕಿರುತೆರೆ ನಟ ಜಗನ್ ಸದ್ಯ ಸೀತಾ ವಲ್ಲಭ ಧಾರವಾಹಿಯಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಬ್ಯಾಚುಲರ್ ಲೈಫ್ಗೆ ಗುಡ್ ಬೈ ಹೇಳಿ ಹಸೆಮಣೆ ಏರೋಕೆ ಸಜ್ಜಾಗಿದ್ದಾರೆ. ಬಿಗ್ ಬಾಸ್ ಸ್ಪರ್ಧಿಯು ಆಗಿದ್ದ ಜಗನ್'ಗೆ ಸದ್ಯ ಮದುವೆ ದಿನಾಂಕ ಫಿಕ್ಸ್ ಆಗಿದೆ.  ಅನೇಕ ಸೀರಿಯಲ್ ನಟರ ಜೊತೆ ಆತ್ಮೀಯನಾಗಿರುವ ನಟ ಜಗನ್ , ಮೇ 23 ರಂದು ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿರುವ ಕಾನ್ವೆಂಷನಲ್ ಹಾಲ್ ನಲ್ಲಿ ಪ್ರೀತಿಸಿದಾಕೆ ಜೊತೆ ಹೊಸ ಬಾಳಿಗೆ ಹೆಜ್ಜೆ ಇಡುತ್ತಿದ್ದಾರೆ. 

Related imageಮದುವೆ ಹಿಂದಿನ ದಿನ ಅಂದರೆ ಮೇ 22 ರಂದು ಸಂಗೀತ ಕಾರ್ಯಕ್ರಮ ನಡೆಯಲಿದೆ. ಮದುವೆ ಆಗಿ ಮೇ 26 ರಂದು ಆರತಕ್ಷತೆ ನಡೆಯಲಿದೆ.ಬಹಳ ಅದ್ಧೂರಿಯಾಗಿ ಮದುವೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೇ  ಸಿನಿ ರಂಗದ ಅನೇಕ ಸ್ಟಾರ್ ಕಲಾವಿದರು ಆಗಮಿಸುವ ನಿರೀಕ್ಷೆ ಇದೆ. ಜಗನ್ನಾಥ್ ಹಾಗೂ ತಮ್ಮ ಬಹುಕಾಲದ ಗೆಳತಿ ರಕ್ಷಿತಾ ಮುನಿಯಪ್ಪ  ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ರಕ್ಷಿತಾ ಫ್ಯಾಷನಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ಧಾರೆ.ಜಗನ್ ಈ ಹಿಂದೆ ಜೋಶ್ ಸಿನಿಮಾದಲ್ಲಿ ನಟಿಸಿದ್ದರು. ನಂತರ ಕಿರುತೆರೆ ಧಾರಾವಾಹಿಗಳಲ್ಲಿ ಬ್ಯಸಿಯಾದರು. ಗಾಂಧಾರಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರಿಗೆ ಖ್ಯಾತಿಯನ್ನೂ ತಂದು ಕೊಟ್ಟಿದೆ.  ಬಿಗ್ಬಾಸ್ ಸಿಸನ್ 5 ನಲ್ಲಿ ಸ್ಪರ್ಧಿಯು ಆಗಿದ್ದ ಜಗನ್ ಗೆ ಕಿರುತೆರೆ ನಟಿ ಅನುಪಮಾ ಜೊತೆ ಲವ್ ಇತ್ತು ಎಂಬ ಮಾಹಿತಿಯು ಕೂಡ ಬಿಗ್ ಬಾಸ್ ಮನೆಯಲ್ಲಿದ್ದಾಗ ಚರ್ಚೆಯಾಗಿತ್ತು. ಈ ಬಗ್ಗೆ ಯಾವ ಸ್ಪಷ್ಟೀಕರಣ ಕೂಡ  ಅನುಪಮಾ ಆಗಲೀ ಜಗನ್ ಆಗಲೀ ಕೊಟ್ಟಿಲ್ಲ.

Edited By

Kavya shree

Reported By

Kavya shree

Comments