ಬಾಹುಬಲಿ ನಾಯಕಿಗೆ ವಿಲನ್ ಆದ ಐಶ್ವರ್ಯ ರೈ..!! ಕಾರಣ ಏನ್ ಗೊತ್ತಾ..?

23 Apr 2019 9:50 AM | Entertainment
229 Report

ಸ್ಟಾರ್ ಜೋಡಿಗಳನ್ನು ತೆರೆಮೇಲೆ ನೋಡುವುದೇ ಅಭಿಮಾನಿಗಳಿಗೆ ಒಂಥರಾ ಖುಷಿಯ ವಿಚಾರ.. ಅದರಲ್ಲೂ ಟಾಪ್ ನಾಯಕಿಯರು ತೆರೆ ಮೇಲೆ ಒಟ್ಟಿಗೆ ಬಂದ್ರೆ ಇನ್ನೂ ಚಂದ ಅಲ್ವ.. ಅಭಿಮಾನಿಗಳಿಗಂತೂ ಒಂಥರಾ ಖುಷಿಯ ವಿಚಾರ.. ಎಸ್.. ಇದೀಗ ಬಾಲಿವುಡ್ ನ ಸ್ಟಾರ್ ನಾಯಕಿಯರಿಬ್ಬರು ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳೊದಿಕ್ಕೆ ರೆಡಿಯಾಗಿದ್ದಾರೆ.. ಅರೇ ಹೌದಾ ಯಾರಪ್ಪ ಅದು ಅಂತಿರಾ…ಮುಂದೆ ಓದಿ..

ಬಾಹುಬಲಿ ಖ್ಯಾತಿಯ ಸೌತ್ ಇಂಡಸ್ಟ್ರಿ ಸುಂದರಿ ಅನುಷ್ಕಾ ಶೆಟ್ಟಿ ಭಾಗಮತಿ ಸಿನಿಮಾದ ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಅದರ ನಡುವೆ ಅವರ ಮದುವೆಯ ಬಗ್ಗೆ ಗುಸು ಪಿಸು ಕೇಳಿದ್ದಂತೂ ಸುಳ್ಳಲ್ಲ… ಇದೀಗ ಅನುಷ್ಕಾ ಬಗ್ಗೆ ಬ್ರೇಕಿಂಗ್ ನ್ಯೂಸ್ ಒಂದು ಬಂದಿದೆ. ಅನುಷ್ಕಾ ಶೆಟ್ಟಿ ಹಾಗೂ ಐಶ್ವರ್ಯ ರೈ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ... ಈ ಇಬ್ಬರು ನಟಿಯರನ್ನು ಒಟ್ಟಾಗಿ ತೆರೆ ಮೇಲೆ ತರಲಿದ್ದಾರೆ ಖ್ಯಾತ ನಿರ್ದೇಶಕ ಮಣಿರತ್ನಂ. ಮಣಿರತ್ನಂ ನಿರ್ದೇಶನದ ’ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಈ ಇಬ್ಬರೂ  ಸ್ಟಾರ್ ನಾಯಕಿಯರು ನಟಿಸಲಿದ್ದಾರೆ. ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಐಶ್ವರ್ಯಾ ರೈ ವಿಲನ್ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅನುಷ್ಕಾ ಶೆಟ್ಟಿಗೆ ಐಶ್ವರ್ಯಾ ರೈ ವಿಲನ್ ಆಗಲಿದ್ದಾರಂತೆ… ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಐಶ್ವರ್ಯಾ ರೈ, ಅನುಷ್ಕಾ ಶೆಟ್ಟಿ, ಚಿಯಾನ್ ವಿಕ್ರಮ್, ಕಾರ್ತಿಕ್, ಅಮಿತಾಬಚ್ಚನ್ ಅಭಿನಯಿಸಲಿದ್ದಾರೆ. ಇಷ್ಟು ದಿನ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದ ಮಾಜಿ ವಿಶ್ವಸುಂದರಿ ಇದೀಗ ವಿಲನ್ ರೋಲ್ ನಲ್ಲಿ ತೆರೆ ಮೇಲೆ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳದ್ದು…

Edited By

Manjula M

Reported By

Manjula M

Comments