ಸುಖಾ ಸುಮ್ಮನೇ ನನ್ನನ್ನು ಟಾರ್ಗೆಟ್ ಮಾಡಿದರೆ’ :ರಾಕಿಂಗ್ ಸ್ಟಾರ್ ಯಶ್…!!!

22 Apr 2019 4:55 PM | Entertainment
846 Report

ನಟ ರಾಕಿಂಗ್ ಸ್ಟಾರ್ ಯಶ್ ಸದ್ಯ ಚುನಾವಣಾ ಪ್ರಚಾರದ ಬಳಿಕ  ವಿಶ್ರಾಂತಿ ತೆಗದುಕೊಳ್ತಿದ್ದಾರೆ. ಸಿನಿಮಾ  ಶೂಟಿಂಗ್'ಗೆ ವಾಪಸ್ಸಾಗಿರುವ ರಾಕಿಂಗ್ ಸ್ಟಾರ್  ನಮ್ಮನ್ನ ಟಾರ್ಗೆಟ್ ಮಾಡಿದ್ರೆ ಪರಿಣಾಮ ..ಹೀಗಂತಾ ಎಚ್ಚರಿಕೆ ಕೊಟ್ಟಿದ್ದಾರೆ. ಅವರು ಅವನಿ ಫೌಂಡೇಶನ್'ನಿಂದ  ವಿಶ್ವಭೂಮಿ ದಿನ ಪ್ರಯುಕ್ತ ನಡೆದ ಸಮಾರಂಭಕ್ಕೆ ಆಗಮಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಎಲೆಕ್ಷನ್  ಮುಗಿದ ಮೇಲೆ ಯಶ್ ಕುರಿತಾಗಿ ಅನೇಕ ಸುದ್ದಿಗಳು ಹರಿದಾಡುತ್ತಿವೆ.

ಒಂದು  ಕಾಲದಲ್ಲಿ ನಿಖಿಲ್ ಜೊತೆ ಆತ್ಮೀಯನಾಗಿದ್ದ ಯಶ್ ಸದ್ಯ ಅವರ ಕಟ್ಟಾ ವಿರೋಧಿಯಾಗಿದ್ದಾರೆ ಎಂದು ಕೆಲ ಮೂಲಗಳು ಹೇಳುತ್ತಿವೆ. ಅಂದಹಾಗೇ ನನ್ನನ್ನು ಟಾರ್ಗೆಟ್ ಮಾಡುವುದು ಸುಲಭದ ಮಾತಲ್ಲ. ನಾವೇನು ಸಮ್ಮನಿರಲ್ಲ, ಸುಖಾ ಸುಮ್ಮನೇ ನಮ್ಮನ್ಯಾಕೆ ಟಾರ್ಗೆಟ್ ಮಾಡ್ತಾರೆ.ನಾವೇನು ತಪ್ಪು ಮಾಡಿದ್ದೀವಿ ಎಂದು ಹೇಳಿದ್ದಾರೆ.ಇದೇ ವೇಳೆ ಅವರು ಮಾತನಾಡುತ್ತ ಚುನಾವಣೆಗೆ ವೇಳೆಯಲ್ಲಿ ಹಲವು ನಾಯಕರು ನೀಡಿದ್ದ ಹೇಳಿಕೆಗೆ ಸಂಬಂಧಪಟ್ಟತೆ ಉತ್ತರಿಸಿದ್ದ ನನ್ನ ಟಾರ್ಗೆಟ್ ಮಾಡುವುದ ಅಷ್ಟು ಸುಲಭವಲ್ಲ, ಇದಲ್ಲದೇ  ನನ್ನನ್ನು ಟಾರ್ಗೆಟ್​ ಮಾಡೋರು,  ನನ್ನನ್ನು ಟಾರ್ಗೆಟ್ ಮಾಡುವವರು ಸ್ವಲ್ಪ ಹುಷಾರಾಗಿ. ನಾನು ಯಾರು ಅಂತಾ ಗೊತ್ತಾಗುತ್ತದೆ ಎಂದು ಪರೋಕ್ಷವಾಗಿ ಎದುರಾಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Edited By

Kavya shree

Reported By

Kavya shree

Comments