ಟೆರೆಸ್ ಮೇಲೆ ವ್ಯಕ್ತಿ ಜೊತೆಗಿದ್ದಾಗ ಸಿಕ್ಕಿ ಬಿದ್ದ ಡಿಪ್ಪಿ : ವಿಡಿಯೋ ವೈರಲ್...!!!

22 Apr 2019 4:41 PM | Entertainment
304 Report

ಬಾಲಿವುಡ್’ನ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆಯ ಕಿಸ್ಸಿಂಗ್ ವಿಡಿಯೋ ವೈರಲ್ ಆಗಿದೆ.  ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಚಾಪಾಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ನಟ ವಿಕ್ರಾಂತ್ ಮಾಸೇ ಜೊತೆ ಟೆರೆಸ್ ಮೇಲೆ ಕಿಸ್ಸಿಂಗ್ ಸೀನ್ ಮಾಡಿದ ವಿಡಿಯೋ ಲೀಕ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೇ ಇದೀಗ ಡಿಪ್ಪಿ ಅಭಿಮಾನಿಗಳು ಇದೇನಿದು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಂದಹಾಗೇ ಡಿಪ್ಪಿ, ವ್ಯಕ್ತಿ ಜೊತೆ ಕಿಸ್ ಮಾಡುತ್ತಿದ್ದ ದೃಶ್ಯವನ್ನು ಫ್ಯಾನ್ಸ್ ಶೂಟ್ ಮಾಡಿ ವೈರಲ್ ಮಾಡಿದ್ದಾರೆ.

Related image

ವೈರಲ್ ಆಗಿರುವ ವಿಡಿಯೋದಲ್ಲಿ ದೀಪಿಕಾ ಟೆರೆಸ್ ಮೇಲೆ ನಿಂತು ನಟ ವಿಕ್ರಾಂತ್ ಜೊತೆ ಲಿಪ್ ಲಾಕ್ ಮಾಡುತ್ತಿದ್ದಾರೆ. ಈ ಸೀನ್ ಚಿತ್ರೀಕರಣದ ವೇಳೆ ಅಕ್ಕಪಕ್ಕದ ಮನೆಯವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಚಾಪಾಕ್  ಚಿತ್ರದ ಚಿತ್ರೀಕರಣದಲ್ಲಿ  ಭಾಗಿಯಾಗಿದ್ದ  ದೀಪಿಕಾ ಪಡುಕೋಣೆ ಮತ್ತು ಸಹ ನಟನ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈಗಾಗಲೇ ದೆಹಲಿಯ ಕೆಲವು ಕಡೆ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಸಿನಿಮಾ ಪೋಸ್ಟರ್’ವೊಂದು ರಿಲೀಸ್ ಆಗಿ ಸಿಕ್ಕಾಪಟ್ಟೆ ಕಾಂಪ್ಲಿಮೆಂಟ್ಸ್ ಕೊಡುತ್ತಿದ್ದರು.  Image result for actress deepika padukone chapak

ಇದೀಗ ಡಿಪ್ಪಿ ಕಿಸ್ಸಿಂಗ್ ಸೀನ್ ಲೀಕ್ ಆಗಿದ್ದು, ಅಂದಹಾಗೇ ಸಿನಿಮಾ, ಆ್ಯಸಿಡ್ ದಾಳಿಗೆ ಒಳಗಾಗಿದ್ದ  ಲಕ್ಷ್ಮಿ ಅಗರ್ವಾಲ್ ಕುರಿತಾದ ಜೀವನ ಚಿತ್ರವನ್ನು ಒಳಗೊಂಡಿದೆ.

Edited By

Kavya shree

Reported By

Kavya shree

Comments