ಯಾರಿಗೂ ಗೊತ್ತಿರದ ಪವರ್ ಸೀಕ್ರೇಟ್'ನ್ನ ಬಿಚ್ಚಿಡ್ತಾರಂತೆ ರಾಘಣ್ಣ ...!!!

22 Apr 2019 3:46 PM | Entertainment
220 Report

ಬಾಲ ನಟನಾಗಿ ಬಂದ ಅಪ್ಪು ಸದ್ಯ ಪವರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಆದರೆ  ಪವರ್ ಸ್ಟಾರ್ ಹೀರೋ ಆದಾಗ ಅಪ್ಪಾಜಿ ಡಾ. ರಾಜ್ ಇದ್ರಂತೆ. ಅವರು ಹೋದ ಮೇಲೆ ಅಪ್ಪಾಜಿ ಸ್ಥಾನ ತುಂಬಿದ್ದು ಅಪ್ಪುಗೆ ರಾಘಣ್ಣ ನಂತೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಬಗ್ಗೆ ರಾಘಣ್ಣ ಹೇಳಿದ ಮಾತುಗಳು ಶಿವಣ್ಣನ ದುಃಖವನ್ನು ಹುಮ್ಮಳಿಸಿತ್ತು. ಅದೇ ಪವರ್ ಸ್ಟಾರ್ ಪುನೀತ್ ರಾಘಣ್ಣ ನ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲಾ ರಾಘಣ್ಣ ಕೂಡ ಪವರ್ ಸ್ಟಾರ್ ಗೆ ಸಪ್ರೈಸ್ ಕೊಡ್ತಿದ್ದಾರೆ ಹೇಗೆ ಗೊತ್ತಾ..?

Related image

ಪುನೀತ್ ರಾಜ್ ಕುಮಾರ್ ಅವರ ಸಿನಿ ಲೈಫಿಗೆ ಬೆನ್ನಲುಬಾಗಿ ನಿಂತಿದ್ದು ರಾಘವೇಂದ್ರ  ರಾಜ್ ಕುಮಾರ್. ರಾಜ್ ಗೆ ಹೇಗೋ ಪಾರ್ವತಮ್ಮ ಹಾಗೂ ಅವರ ಸಹೋದರ ವರದಪ್ಪಇದ್ದರೋ ಪುನೀತ್'ಗೂ ಹಾಗೇ ರಾಘಣ್ಣ ನಿಂತಿದ್ದಾರೆ.ಅಂದಹಾಗೆ ಪುನೀತ್ ಬಗ್ಗೆ ಯಾರಿಗೂ ಗೊತ್ತಿರದ ಅನೇಕ ವಿಚಾರಗಳು ರಾಘವೇಂದ್ರ ರಾಜ್ ಕುಮಾರ್’ಗೆ ಗೊತ್ತಿದೆ.ಆ ವಿಚಾರಗಳನ್ನ, ಪುನೀತ್ ಸೀಕ್ರೇಟ್ ಗಳನ್ನು, ತರಲೆಗಳನ್ನು ವೀಕೆಂಡ್ ವಿತ್ ರಮೇಶ್ ನಲ್ಲಿ ಹಂಚಿಕೊಳ್ಳಲಿದ್ದಾರೆ ರಾಘಣ್ಣ. ಅಂದಹಾಗೇ ಕಳೆದ ಸೀಸನ್ ಗಳಲ್ಲಿ ಪುನೀತ್ ರಾಜ್ ಕುಮಾರ್ ಮತ್ತು  ಶಿವರಾಜ್ ಕುಮಾರ್ ಅವರು ಬಂದು ಹೋಗಿದ್ದರು. ಆದರೆ ರಾಘಣ್ಣನಿಗೆ ಆ ಭಾಗ್ಯವಿರಲಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ರಾಘಣ್ಣ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಈ ಬಾರಿ ರಾಘವೇಂದ್ರ ರಾಜ್'ಕುಮಾರ್ ವೀಕೆಂಡ್ ಟೆಂಟ್ ನಲ್ಲಿ ಕಾಣಿಸಿಕೊಳ್ತಿದ್ದಾರೆ.

Edited By

Kavya shree

Reported By

Kavya shree

Comments