ಶ್ರೀಲಂಕಾ ಬಾಂಬ್ ಸ್ಫೋಟಕ್ಕೆ ಕಂಬನಿ ಮಿಡಿದ ಸ್ಯಾಂಡಲ್'ವುಡ್ ಸ್ಟಾರ್ ನಟ...!

22 Apr 2019 1:59 PM | Entertainment
264 Report

ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂದತೇ ಸ್ಯಾಂಡಲ್ ವುಡ್ ಸ್ಟಾರ್ ಗಳು  ಪ್ರತಿಕ್ರಿಯಿಸಿದ್ದಾರೆ. ನಟ ವಸಿಷ್ಠ ಕಂಬನಿ ಮಿಡಿದಿದ್ದಾರೆ. ಶ್ರೀ ಲಂಕಾದ ರಸ್ತೆಗಳು ರಕ್ತ ಕೋಡಿಗಳಾಗಿ ಹರಿಯುತ್ತಿವೆ. ರಕ್ಕಸರ ಅಟ್ಟಹಾಸಕ್ಕೆ ಅನೇಕ ಅಮಾಯಕರು ಬಲಿಯಾಗಿದ್ದಾರೆ. ಆ ದೃಶ್ಯಗಳನ್ನು ನೋಡುತ್ತಿದ್ದರೇ ನನ್ನ ಕಣ್ಣಾಲಿಗಳು ತುಂಬುತ್ತವೆ. ಹೆತ್ತವರ ಆಕ್ರಂಧನ, ಮುಗ್ಧ ಮಕ್ಕಳು ಅಲ್ಲಲ್ಲಿಯೇ ನೆಲ ಕಚ್ಚಿರುವ ದೃಶ್ಯ ನಿಜಕ್ಕೂ ಘೋರವಾಗಿದೆ ಎಂದಿದ್ದಾರೆ.

ಶ್ರೀಲಂಕಾ ಚರ್ಚ್ ಅಂತೂ ಯುದ್ಧ ಭೂಮಿಯಾಗಿ ಮಾರ್ಪಟ್ಟಿದೆ. ದೇಹಗಳು ಛಿದ್ರ ಛಿದ್ರವಾಗಿ ಅಲ್ಲಲ್ಲಿ ಬಿದ್ದಿವೆ.ಈ ಬಗ್ಗೆ ತೀವ್ರವಾಗಿ ನೊಂದು ಟ್ವೀಟ್ ಮಾಡಿರುವ ನಟ ವಶಿಷ್ಠ ಅವರು, ‘ಇಂಥಾ ದಾಳಿಗಳು ಈ ಭೂಮಿ ಮೇಲೆ ಎಲ್ಲಿಯೂ, ಇನ್ನೆಂದಿಗೂ ಮರುಕಳಿಸಬಾರದು. ಪ್ರಪಂಚದ ಶಕ್ತಿಶಾಲಿ ರಾಷ್ಟ್ರಗಳೆಲ್ಲಾ ಒಂದಾಗಿ ಭಯೋತ್ಪಾದನೆ ಅನ್ನೋ ಭೂತದ ವಿರುದ್ಧ ಒಂದಾಗಬೇಕಿದೆ. ಭಯೋತ್ಪಾದನೆಯನ್ನ ಬುಡಸಮೇತ ಕಿತ್ತೊಗೆಯಬೇಕಿದೆ’ ಎಂದಿದ್ದಾರೆ. ಶ್ರೀಲಂಕಾದಲ್ಲಿ ನಡೆ ದಬಾಂಬ್ ಸ್ಫೋಟದಲ್ಲಿ ಕನ್ನಡಿಗರು ಸೇರಿದಂತೇ ಅನೇಕ ಭಾರತೀಯರು ಕೂಡ ಮೃತರಾಗಿದ್ದಾರೆ. ನಟಿ ರಾಧಿಕಾ ಶರತ್ ಕುಮಾರ್ ಕೂಡ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ನಟಿ ತಂಗಿದ್ದ ಹೋಟೆಲ್ ಮೇಲೆ ಬಾಂಬ್ ದಾಳಿ ನಡೆದಿದೆ. ಆದರೆ ಬಾಂಬ್ ಸ್ಫೋಟಸುವುದಕ್ಕಿಂತ ಕೆಲವೇ ನಿಮಿಷಗಳ ಹಿಂದೆ ಅವರು ಹೋಟೆಲ್ ನಿಂದ ಗೊರ ಬಂದಿದ್ದರಂತೆ.

Edited By

Kavya shree

Reported By

Kavya shree

Comments