ಕಿರಿಕ್ ಚೆಲುವೆಯ ಈ ಹಾಟ್ ಅವತಾರಕ್ಕೆ ಟ್ರೋಲಿಗರಿಂದ ಸಿಕ್ಕಾಪಟ್ಟೆ ರೆಸ್ಪಾನ್ಸ್...?!!!

22 Apr 2019 12:40 PM | Entertainment
3109 Report

ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುವ ನಟಿ ಸಂಯುಕ್ತಾ ಹೆಗಡೆ ಇದೀಗ ತಮ್ಮ ಬಿಕಿನಿ ಫೋಟೋ ಹಾಕಿ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾಳೆ. ಕನ್ನಡದ ಬಿಗ್ ಬಾಸ್ ಗೂ ಹೋಗಿ ಕಿರಿಕ್ ಮಾಡಿಕೊಂಡು ಹೊರ ಬಂದ ಈ ಕಿರಿಕ್ ಸುಂದರಿ ನಂತರ ಹಿಂದಿ ಕಿರುತೆರೆ ರಿಯಾಲಿಟಿ ಶೋ ದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಸದ್ಯ ಕಿರಿಕ್ ಪಾರ್ಟಿಯ ಈ ಚೆಲುವೆಯ ಬಿಕಿನಿ ತೊಟ್ಟ ಹಾಟ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ

ಸಮ್ಮರ್ ಸ್ಪೆಷಲ್ ಎಂಬಂತೆ ಈಕೆಯ ಫೋಟೋಗೆ ಇದೀಗ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಸಂಯುಕ್ತಾ ಹೆಗಡೆ ಫೋಟೋಗಳು ಇದೇ ಮೊದಲೇನಲ್ಲಾ ಬಿಡಿ. ಆದರೆ ಈಕೆಯ ಹಾಟ್ ಲುಕ್ ಗೆ ಅಭಿಮಾನಿಗಳು ದಂಗಾಗಿದ್ದಾರೆ. ಈ ಬೋಲ್ಡ್ ಬ್ಯೂಟಿ ಅವತಾರ ನೋಡಿ ಇನ್ನು ಕೆಲವರು ಇವಳು ನಮ್ಮ ಕನ್ನಡದವಳಾ.... ಎಂದು ಬಾಯಿ ಬಿಡುತ್ತಿದ್ದಾರೆ.ಇದೀಗ ಸಂಯುಕ್ತಾ ಥಾಯ್ಲೆಂಡ್ ನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಥಾಯ್ಲೆಂಡಿನ ಫಿಫಿ ದ್ವೀಪದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. 2 ಪೀಸ್ ನಲ್ಲಿರುವ ಅಲ್ಲಿನ ಫೋಟೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ. ಅದು ಸಿಕ್ಕಾಪಟ್ಟೆ ವೈರಲ್ ಆಗಿದೆ.  ಈ ಹಿಂದೆ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಲುಕ್ ವೈರಲ್ ಆಗಿತ್ತು. ಇದೀಗ ಮತ್ತೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.  ಅಂದಹಾಗೇ ಈ ಫೋಟೋ ವೈರಲ್ ಆಗುತ್ತಿದ್ದಂತೇ ಟ್ರೋಲಿಗರು ಸುಮ್ಮನಿರುತ್ತಾರೆಯೇ, ಕಿರಿಕ್ ಚೆಲುವೆಗೆ ತಲಾ ಒಂದೊಂದು ಪ್ರಶ್ನೆ ಕೇಳಿ ಆಕೆಯ ಪಿತ್ತ ನೆತ್ತಿಗೇರುವಂತೆ ಮಾಡುತ್ತಿದ್ದಾರೆ.

Image result for samyuktha hegde

Edited By

Kavya shree

Reported By

Kavya shree

Comments