ಸ್ಯಾಂಡಲ್ ವುಡ್ ಮೀಟೂ ಹೀರೋಯಿನ್ ಶೃತಿ ಹರಿಹರನ್ ಪ್ರತ್ಯಕ್ಷ : ಎಲ್ಲಿ ಗೊತ್ತಾ..?

22 Apr 2019 12:14 PM | Entertainment
4080 Report

ಸ್ಯಾಂಡಲ್’ವುಡ್ ನಲ್ಲಿ ಭಾರೀ ಸಂಚಲನ ಮೂಡಿಸಿದಘಟನೆ ಎಂದರೆ ನಟಿ ಶೃತಿ ಹರಿಹರನ್ ಅವರು ಅರ್ಜುನ್ ಸರ್ಜಾ ಮೇಲೆ ಹೊರಿಸಿದ್ದ ಲೈಂಗಿಕ ಆರೋಪ. ಇದು ಇಡೀ ಸ್ಯಾಂಡಲ್’ವುಡ್’ನ್ನೇ  ನಡುಗಿಸಿತ್ತು. ಆ ನಂತರ  ಶೃತಿ ಹರಿಹರನ್ ಅವರು  ಮತ್ತೆ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ನಟಿ ಶೃತಿ ಹರಿಹರನ್ ಅವರ ಸಿನಿಮಾ ನಾತಿಚರಾಮಿಯ ನಂತರ  ಮತ್ಯಾವ ಸಿನಿಮಾವೂ ಬಂದಿಲ್ಲ. ಅಂದ್ಹಾಗೆ ನಿನ್ನೆ ಶ್ರುತಿ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದರಂತೆ. ಶೃತಿ ಅಭಿಮಾನಿಗಳು ಅವರಿಗೆ ವಿಶಸ್ ತಿಳಿಸಿದ್ದಾರೆ.

Image result for sruthi hariharan with husbandಮತ್ತೆ ಶೃತಿ ಕಾಣಿಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ. ಅದು ತನ್ನ ಪತಿಯ ಜೊತೆಗೆ. ಅಂದಹಾಗೇ ರಾಮ್ ಜೊತೆ ಇರುವ ಶೃತಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಶೃತಿ ಈ ಘಟನೆಯ ನಂತರ ಮರತೇ ಹೋಗಿದ್ದಾರೆ ಎನ್ನುವ ಮಟ್ಟಿಗೆ ಕಣ್ಮರೆಯಾಗಿದ್ದರು. ಮತ್ತೆ ಶೃತಿ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಿದ್ದಾರೆ.ಮೀಟೂ ಆರೋಪ ಸುದ್ದಿಯಾಗೋವರೆಗೂ ಶೃತಿ ಮದುವೆ ಆಗಿರೋದು ಯಾರೊಬ್ಬರಿಗೂ ತಿಳಿದಿರಲಿಲ್ಲ. ಅರ್ಜುನ್​ ಸರ್ಜಾ ಮೇಲೆ ದೂರು ಸಲ್ಲಿಸಿದಾಗಲೇ ಶ್ರುತಿ ಮದುವೆಯಾಗಿರೋ ವಿಚಾರ ಗೊತ್ತಾಗಿದ್ದು. ದೂರಿನಲ್ಲಿ ಶ್ರುತಿಹರಿಹರನ್​ W/O ರಾಮ್​ಕುಮಾರ್ ಅಂತಾ ನಮೂದಿಸಿದ್ದರು. ಈ ಸಹಿಯ ನಂತರ ಶೃತಿ ತಾನು ಮದುವೆಯಾಗಿ ಮುಚ್ಚಿಟ್ಟ ಸತ್ಯ ಬಯಲಾಯ್ತು. ಅಂದಹಾಗೇ ಕಳೆದ ವರ್ಷವೇ ಇವರಿಬ್ಬರು ಸಪ್ತಪದಿ ತುಳಿದಿರೋ ಬಗ್ಗೆ ಮಾಹಿತಿ ಇದೆ. ಆದರೆ ಅದು ಸ್ಪಷ್ಟವಾಗಿ ಗೊತ್ತಿಲ್ಲ. ಅಂದಹಾಗೇ ಪ್ರತಿಭಾವಂತೆ ಕಲಾವಿದೆ ಶೃತಿ ಹರಿಹರನ್  ತಮ್ಮ ಬಾಯ್ ಪ್ರೆಂಡ್ ರಾಮ್ ಬಗ್ಗೆ ಹೇಳಿಕೊಂಡಿದ್ದರು. ಆದರೆ ಮದುವೆಯಾಗಿಲ್ಲ ಮುಂದೆ ಆಗಬೇಕು ಎಂದಷ್ಟೇ ಹೇಳಿದ್ದರು. ಆದರೆ ಈ ಪ್ರಕರಣ ಆದ ನಂತರ ನಾನು ರಾಮ್ ಮದುವೆಯಾಗಿದ್ದೀವಿ ಎಂದರು.

Related imageಅಲ್ಲಿಂದಾಚೆಗೆ ಮದುವೆ ಆಗಿರೋ ವಿಚಾರ ಹೊರಗೆ ಬಂದಿತ್ತು. ಅಂದ್ಹಾಗೆ ಶ್ರುತಿ- ರಾಮ್​ ಇಬ್ಬರದ್ದೂ ಏಳೆಂಟು ವರ್ಷದ ಫ್ರೆಂಡ್​ಶಿಪ್​. ಶ್ರುತಿಯ ಸಾಧನೆಯ ಹಿಂದೆ ರಾಮ್​ ನಿಂತಿದ್ದರು. ಇದೇ ಫ್ರೆಂಡ್​ಶಿಪ್​ ಮುಂದೆ ಪ್ರೀತಿಯಾಗಿಯೂ ಬದಲಾಗಿತ್ತು. ಮೂಲಗಳ ಪ್ರಕಾರ ಕಳೆದ ವರ್ಷವೇ ಇಬ್ಬರೂ ಮದುವೆಯಾಗಿದ್ದು, ಸುಖಿ ಸಂಸಾರ ನಡೆಸುತ್ತಿದ್ದಾರೆ. ಇಂದು ಅವರ ಮದುವೆ ವಾರ್ಷಿಕೋತ್ಸವಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಶ್​ ಮಾಡಿದ್ದಾರೆ. ಉಳಿದಂತೆ ವಿವಾದದ ನಡುವೆಯೂ ಶ್ರುತಿ, ಚಿರು ಸರ್ಜಾ ಜೊತೆಗೆ ‘ಆದ್ಯ’ ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Edited By

Kavya shree

Reported By

Kavya shree

Comments