ಕೆಜಿಎಫ್- 2ನಲ್ಲಿ ಯಶ್ ಜೊತೆ ಅಭಿನಯಿಸೋದಿಕ್ಕೆ ನೀವು ರೆಡಿನಾ…? ಹಾಗಾದ್ರೆ ನೀವ್ ಮಾಡಬೇಕಿರೋದು ಇಷ್ಟೆ...!!

22 Apr 2019 10:24 AM | Entertainment
236 Report

ಸ್ಯಾಂಡಲ್ವುಡ್ ಗೆ ಬ್ರೇಕ್ ಕೊಟ್ಟಂತಹ ಸಿನಿಮಾಗಳಲ್ಲಿ ಕೆಜಿಎಫ್ ಸಿನಿಮಾ ಮಹತ್ತರ ಪಾತ್ರವನ್ನು ವಹಿಸಿತ್ತದೆ.. ಇಡೀ ದೇಶವೇ ಸ್ಯಾಂಡಲ್ ವುಡ್ ನತ್ತ ಮುಖ ಮಾಡಿ ನೋಡಿತ್ತು... ಕೇವಲ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಕೂಡ ಕನ್ನಡದ ಕೆಜಿಎಫ್ ಹವಾ ಕ್ರಿಯೆಟ್ ಮಾಡಿತ್ತು... ಥಿಯೇಟರ್ ನಲ್ಲಿ ಸಿನಿಮಾ ನೋಡುವ ಮಂದಿ ಶಿಳ್ಳೆ ಹೊಡೆದು ನೋಡುತ್ತಿದ್ದರು..ಇನ್ನೂ ಸಿನಿಮಾದ ಹವಾ ಮಾತ್ರ ಕಡಿಮೆಯಾಗಿಲ್ಲ.. ರಾಕಿಂಗ್ ಸ್ಟಾರ್ ಯಶ್ ರಾಕಿ ಭಾಯ್ ಆಗಿ ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಸೌಂಡ್ ಮಾಡಿದ್ದ ಚಿತ್ರ... ಕೆಜಿಎಫ್ 1 ನಲ್ಲಿ ಗೆದ್ದಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಅಂಡ್ ಟೀಂ ಸದ್ದಿಲ್ಲದೇ ಕೆಜಿಎಫ್​-2 ಪ್ರಾರಂಭ ಮಾಡಿತ್ತು. ಇದೀಗ ಕೆಜಿಎಫ್​-2 ಅಡ್ಡದಿಂದ ಹೊಸ ಸುದ್ದಿ ಒಂದು ಹೊರ ಬಂದಿದೆ.

ಎಸ್...ಕೆಜಿಎಫ್ ಸಿನಿಮಾ ಹೊಸದೊಂದು ಆಫರ್ ನೀಡಿದೆ.. ನಿಮಗೂ ಯಶ್ ಜೊತೆ ಅಭಿನಯಿಸಲು ಚಿತ್ರತಂಡ ಅವಕಾಶ ನೀಡಿದೆ. ಕೆಜಿಎಫ್ ಚಿತ್ರತಂಡ ಈ ರೀತಿಯ ಇದೇ ತಿಂಗಳ ಎಪ್ರಿಲ್ 26 ರಂದು ಕೆಜಿಎಫ್-2 ಚಿತ್ರದ ಆಡಿಷನ್ ಶುರುವಾಗಲಿದೆ. 8 ರಿಂದ 16 ವರ್ಷದ ಹುಡುಗರು, 25 ಅದಕ್ಕಿಂತ ಜಾಸ್ತಿ ಏಜ್ ಯುವಕರು ಈ ಆಡಿಷನ್​ನಲ್ಲಿ ಭಾಗವಹಿಸಬಹುದು. ಬೆಳಗ್ಗೆ 8 ರಿಂದ ಸಂಜೆ 4 ಗಂಟೆಗೆ ಈ ಆಡಿಯನ್ಸ್ ನಡೆಯಲಿದೆ.. ಬೆಂಗಳೂರಿನ ಮಲ್ಲೇಶ್ವರಂನ ಡಿಜಿಟಲ್ ಆಡಿಯೋಟೋರಿಯಂ ಬ್ಯಾಕ್ವೆಟ್ ಹಾಲ್​ನಲ್ಲಿ ನಡೆಯುತ್ತದೆ. ಆಡಿಷನ್​ನಲ್ಲಿ ಭಾಗವಹಿಸುವರು 1 ನಿಮಿಷದ ನಿಮ್ಮ ಓನ್ ಡೈಲಾಂಗ್ ರೆಡಿ ಮಾಡ್ಕೊಂಡು ಬನ್ನಿ. ನಿಮ್ಮ ಡೈಲಾಂಗ್ ಆಕ್ಟಿಂಗ್ ಇಷ್ಟ ಆದ್ರೆ ಪಕ್ಕ ನೀವು ಕೆಜಿಎಫ್​-2 ನಲ್ಲಿ ಯಶ್ ಜೊತೆ ಅಭಿನಯಿಸಬಹುದು. ಯಶ್ ಜೊತೆ ಅಭಿನಯಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ... ಈ ಅವಕಾಶ ನೀಡಿರುವ ಕೆಜಿಎಫ್ ಚಿತ್ರತಂಡಕ್ಕೆ ಅಭಿಮಾನಿಗಳು ಧನ್ಯವಾದ ತಿಳಿಸಿದ್ದಾರೆ

Edited By

Manjula M

Reported By

Manjula M

Comments