ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸಲ್ಲ ಎಂದ ಕನ್ನಡದ ಸ್ಟಾರ್ ನಟಿ..!!!

22 Apr 2019 9:46 AM | Entertainment
4525 Report

ಸದ್ಯ ಸ್ಯಾಂಡಲ್ ವುಡ್'ನಲ್ಲಿ ಒಬ್ಬರಾದಂತೆ ಮತ್ತೊಬ್ಬರು ಕಾಂಟ್ರೋವರ್ಸಿಗಳನ್ನು ಕ್ರಿಯೇಟ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಅದೇ ಸಾಲಿಗೆ ಸೇರುವ ನಟಿ ಎಂದರೆ ಅದು ಯೂಟರ್ನ್ ಬೆಡಗಿ ಶ್ರದ್ದಾ ಶ್ರೀನಾಥ್..ಯೂಟರ್ನ್ ಸಿನಿಮಾದ ಮೂಲಕ ಕನ್ನಡಿಗರ ಮನೆ ಮಾತಾದ ನಟಿ ಈಕೆ,,,ಸಿಂಪಲ್ ಅಂಡ್ ಬ್ಯೂಟಿಫುಲ್ ನಟಿ ಶ್ರದ್ದಾ ಇತ್ತಿಚಿಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ..

ಯೂಟರ್ನ್ ಸಿನಿಮಾದ ನಂತರ ಆಪರೇಷನ್ ಅಲಮೇಲಮ್ಮ, ಊರ್ವಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. ನಂತರ ಶ್ರದ್ಧಾ ಕಾಲಿವುಡ್​ಗೆ ಹಾರಿದ್ರು. ಕಾಲಿವುಡ್​ನಲ್ಲಿ ವಿಕ್ರಂ ವೇದಾ ಚಿತ್ರ ಸೂಪರ್ ಹಿಟ್ ಆದ್ಮೇಲೆ ಈ ಯೂಟರ್ನ್ ಬೆಡಗಿ ಬ್ಯಾಕ್ ಟು ಬ್ಯಾಕ್ ಆಫರ್​ಗಳಲ್ಲಿ ಬ್ಯುಸಿಯಾಗಿದ್ದಾರೆ.. ಸದ್ಯ ಕಾಲಿವುಡ್​ ಜೊತೆಗೆ ಟಾಲಿವುಡ್​ನಲ್ಲಿ ಅಭಿನಯಿಸುತ್ತಿರುವ ಈ ಚೆಲುವೆ ಸದ್ಯ ವಿವಾದಗಳ ಸುಳಿಯಲ್ಲಿ ಸಿಲುಕಿಕೊಳ್ತಿದ್ದಾರೆ. ಇತ್ತೀಚೆಗಷ್ಟೇ ಟಿಟೌನ್ ಸ್ಟಾರ್ ನಟಿ ಸಮಂತಾ ಅಕ್ಕಿನೇನಿ ಅಭಿನಯದ ಬಗ್ಗೆ ಕಮೆಂಟ್ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರದ್ಧಾ, ಈಗ ಮತ್ತೊಂದು ವಿವಾದವನ್ನು ಸೃಷ್ಟಿಸಿಕೊಂಡಿದ್ದಾರೆ..

ಟಾಲಿವುಡ್ ಸ್ಟಾರ್​ ನಾನಿ ಜೊತೆ ಅಭಿನಯದ ಜರ್ಸಿ ಚಿತ್ರದ ಪ್ರಮೋಷನ್ ವೇಳೆ ಯಶ್ ಅಥವಾ ನಾನಿ ಈ ಇಬ್ಬರಲ್ಲಿ ಯಾರ ಜೊತೆ ನಟಿಸಲ ಇಷ್ಟಪಡುತ್ತಿರಾ ಎಂದಾಗ ನಾನು ಈಗಾಗ್ಲೇ ನಾನಿ ಜೊತೆ ಅಭಿನಯಿಸಿದ್ದೇನೆ. ಹೀಗಾಗಿ ಅವರ ಜೊತೆ ಆ್ಯಕ್ಟ್ ಮಾಡಲು ನಾನು ರೆಡಿ ಇದ್ದೇನೆ ಎಂದಿದ್ದಾರೆ. . ನಾನು ಒಮ್ಮೆ ಮಾತ್ರ ಯಶ್​ ಭೇಟಿ ಮಾಡಿರೋದು. ಅವರು ಕಷ್ಟಪಟ್ಟ ಮೇಲೆ ಬಂದವರು. ಸೀರಿಯಲ್ ಮೂಲಕ ಗುರುತಿಸಿಕೊಂಡು ಈಗ ಬಿಗ್ ಹಿಟ್ ಸಿನಿಮಾ ಕೊಟ್ಟಿದ್ದಾರೆ ಎಂದು ಕೂಡ ತಿಳಿಸಿದ್ದಾರೆ. ಸ್ಯಾಂಡಲ್​ವುಡ್ ನಟಿಯೊಬ್ಬರು ಕನ್ನಡದ ಸ್ಟಾರ್ ಹೀರೋ ಜೊತೆ ಅಭಿನಯಿಸಲ್ಲ ಎಂದಿದ್ದಕ್ಕೆ ಯಶ್ ಫ್ಯಾನ್ಸ್ ಫುಲ್​ ಗರಂ ಆಗಿದ್ದಾರೆ. ಒಟ್ಟಾರೆಯಾಗಿ ಒಂದಲ್ಲ ಒಂದು ವಿಷಯಕ್ಕೆ ಸ್ಯಾಂಡಲ್ ವುಡ್ ನ ಸ್ಟಾರ್ ನಟ ನಟಿಯರು ಸುದ್ದಿಯಾಗುತ್ತಲೆ ಇರುತ್ತಾರೆ... ಅಷ್ಟೆ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಈ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿರುತ್ತದೆ.

Edited By

Manjula M

Reported By

Manjula M

Comments