ಸದ್ಯಕ್ಕಂತೂ ದರ್ಶನ್ ಬಣ್ಣ ಹಚ್ಚೋದು ಡೌಟು : ಕಾರಣ ಗೊತ್ತಾ..?

20 Apr 2019 3:12 PM | Entertainment
259 Report

ಸಿನಿಮಾ ಶೂಟಿಂಗ್;ಗೆ ಬ್ರೇಕ್ ಹಾಕಿ ಸುಮಲತಾ ಪರ ಕ್ಯಾಂಪೇನ್ ಮಾಡುತ್ತಿದ್ದ ಚಾಲೆಂಜಿಮಗ್ ಸ್ಟಾರ್ ದರ್ಶನ್ ಸದ್ಯ ನೆಯಲ್ಲಿಯೇ ರಿಲ್ಯಾಕ್ಷ್ ಮಾಡುತ್ತಿದ್ದಾರೆ ಎನ್ನುತ್ತಿವೆ ಕೆಲ ಮೂಲಗಳು. ಅಂದಹಾಗೇ ದರ್ಶನ್ ಯಜಮಾನ ಸಕ್ಸಸ್ ನಂತರ ರಾಬರ್ಟ್ ಸಿನಿಮಾ ಶೂಟಿಂಗ್ ಒಪ್ಪಿದ್ದಾರೆ. ದಚ್ಚು ಗೆ ರಾಬರ್ಟ್ ಚಿತ್ರ ಮತ್ತಷ್ಟು ಹೆಸರು ತಂದು ಕೊಡುವ  ಸಾಧ್ಯತೆ ಇದೆ. ಆದರೆ ಸದ್ಯಕ್ಕಂತೂ ರಾಬರ್ಟ್ ಗೆ ಬಣ್ಣ ಹಚ್ಚೋದು ಡೌಟ್ ಎನ್ಉತ್ತಿವೆ ದರ್ಶನ್ ಆಪ್ತ ಮೂಲಗಳು.

ಚೌಕ ಸಿನಿಮಾ ನಂತರ ತರುಣ್ ಸುಧೀರ್ ಅವರ ಬಹು ನಿರೀಕ್ಷಿತ ಸಿನಿಮಾ ರಾಬರ್ಟ್ ಗೆ ಬಣ್ಣ ಹಚ್ಚೋಕೆ ದರ್ಶನ್ ಸದ್ಯಕ್ಕಂತೂ ರೆಡಿಯಿಲ್ಲ .  ಇದೇ ತಿಂಗಳ 24 ರಿಮದ ರಾಬರ್ಟ್ ಸಿನಿಮಾದ ಮುಹೂರ್ತ ಫಿಕ್ಸ್ . ಆದರೆ ದರ್ಶನ್ ಕ್ಯಾಮೆರಾ ಮುಮದೆ ಕೈ ಮುಗಿದು ಡಯಲಾಗ್ ಹೇಳೋದು ಡೌಟು..ಕಾರಣ ಕಳೆದ ಇಪ್ಪತ್ತು ಮೂವತ್ತು ದಿನಗಳಿಂದ ಬಿರುಬಿಸಿಲಿನಲ್ಲಿ ಚುನಾವಣ ಪ್ರಚಾರ ಮಾಡಿದ್ದಾರೆ. ಜೋರಾಗಿ ಮಾತನಾಡಿ ಮಾತನಾಡಿ ಧ್ವನಿ ಪೆಟ್ಟಿಗೆ ಸಮಸ್ಯೆಯಾಗಿದೆ. ಜೊತೆಗೆ ಬಿಸಿಲಿಗೆ ಕಪ್ಪಾಗಿದ್ದಾರೆ ಕಲಾಸಿಪಾಳ್ಯ ಹೀರೋ. ಇವೆಲ್ಲ ರಿಕಾವರ್ ಆಗೋದಕ್ಕೆ ಕನಿಷ್ಟ 2 ವಾರ ಆಗ ಬಹುದು. ಸೋ ಅಲ್ಲಿಯ ತನಕ ಡಿ ಬಾಸ್​​ ಬಣ್ಣ ಹಚ್ಚೋದು ಕಷ್ಟವಾಗ ಬಹುದು ಎನ್ನುತ್ತಿದೆ ಮೂಲಗಳು. ದರ್ಶನ್ ಈಗಾಗಳೇ ಬಿಸಿಲು ಎನ್ನದೇ ಹಗಲು-ರಾತ್ರಿ ಸುಮಲತಾ ಪರ ಕ್ಯಾಂಪೇನ್ ಮಾಡಿದ್ದೇ ಮಾಡಿದ್ದು. ಸದ್ಯ ಅವರು ವಿಶ್ರಾಂತಿ ಬಯಸುತ್ತಿದ್ದಾರೆ.

Edited By

Kavya shree

Reported By

Kavya shree

Comments