ವಿದ್ಯಾರ್ಥಿನಿ ಮಧು ಸಾವಿಗೆ ನ್ಯಾಯ ಒದಗಿಸುವಂತೆ ಚಾಲೆಂಜಿಂಗ್ ಸ್ಟಾರ್ ಮನವಿ..!!!

20 Apr 2019 2:22 PM | Entertainment
217 Report

ವಿದ್ಯಾರ್ಥಿನಿಯೊಬ್ಬಳ ಅತ್ಯಾಚಾರದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಕಾಲೇಜಿಗೆ ಹೋದ ಮಧು ಪತ್ತಾರ, ಮತ್ತೆ ತಂದೆ ತಾಯಿಗೆ ಕಂಡಿದ್ದು ಅರೆಬರೆ ಹೆಣವಾಗಿ. ಆಕೆಯ ಸಾವಿಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು ಸ್ಯಾಂಡಲ್ ವುಡ್ ಕೂಡ ಮಧು ಪತ್ತಾರ ಅವರ ಸಾವಿಗೆ ಕಂಬನಿ ಮಿಡಿದಿದೆ. ಜಸ್ಟೀಸ್ ಫಾರ್ ಮಧು ಎಂಬ ಶೀರ್ಷಿಕೆಯಡಿ ಆಕೆಯ ಸಾವಿಗೆ ನ್ಯಾಯ ಒದಗಿಸುವಂತೆ ಹಲವು ಒತ್ತಡಗಳು ಕೇಳಿ ಬರುತ್ತಿವೆ. ಮಧು ಅವರ ಸಾವಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಪ್ರತಿಕ್ರಿಯಿಸಿದ್ದಾರೆ. 

ಮಧು ಅವರ ಸಾವನ್ನು ದರ್ಶನ್ ಟ್ವೀಟ್ ಮುಖಾಂತರ ಖಂಡಿಸಿದ್ದಾರೆ. ‘ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧುವಿನ ಅನುಮಾನಾಸ್ಪದ ಸಾವಿನ ತನಿಖೆ ಅತೀ ಶೀಘ್ರದಲ್ಲಿ ನಡೆಯಬೇಕು.  ಇಂಥ ಅಮಾನುಷ ಕೃತ್ಯವನ್ನು ಎಸಗಿರುವ ಕೀಚಕರಿಗೆ ಕಾನೂನು ಬದ್ಧವಾಗಿ ತಕ್ಕ ಶಾಸ್ತಿಯಾಗಬೇಕೆಂದು ಕೋರಿಕೊಳ್ಳುತ್ತಿದ್ದೇನೆ. ಈ ರೇಪ್ & ಮರ್ಡರ್ ಕೃತ್ಯಕ್ಕೆ ಇನ್ನಷ್ಟು ಕಠಿಣವಾದ ಕಾನೂನು ನಮ್ಮ ದೇಶದಲ್ಲಿ ರೂಪುಗೊಳ್ಳಬೇಕು’ ಅಂತಾ ಟ್ವೀಟ್​ ಮಾಡಿದ್ದಾರೆ. ದರ್ಶನ್ ಟ್ವೀಟ್ ಗೆ ಡಿ ಬಾಸ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು. ದರ್ಶನ್ ಸಾಮಾಜಿಕ ಕಾರ್ಯಗಳಲ್ಲೂ ಕೈ ಜೋಡಿಸುತ್ತಾರೆ ಎಂಬ ಟ್ಯಾಗ್ ಲೈನ್ ಮುಖಾಂತರ ಜೈ ಡಿ ಬಾಸ್ ಎಂದು ಘೋಷಣೆ ಬರೆದುಕೊಂಡಿದ್ದಾರೆ.

Edited By

Kavya shree

Reported By

Kavya shree

Comments