ಕೊನೆಗೂ ನಿನ್ನೆ ಮತದಾನ ಮಾಡಲೇ ಇಲ್ಲ ಪವರ್ ಸ್ಟಾರ್ : ಯಾಕೆ ಗೊತ್ತಾ..?!!!

19 Apr 2019 1:01 PM | Entertainment
9193 Report

ನಿನ್ನೆಯಷ್ಟೇ ಲೋಕಸಭಾ ಚುನಾವಣೆ ಮುಗಿದಿದೆ. ಎಲ್ಲಾ ಕನ್ನಡದ ಸ್ಟಾರ್ ನಟರು ಮತದಾನ ಮಾಡಿ ಎಂದು ಮನವಿ ಮಾಡಿದ್ದರೂ ಈ ಬಾರಿಯೂ ಬೆಂಗಳೂರಿನ ನೀರಸವಾಗಿ ಮತದಾನ ನಡೆದಿದೆ. ಈ ಬಾರಿ ಶಿವಣ್ಣ, ಸುದೀಪ್, ಯಶ್, ದರ್ಶನ್’ ಕುಟುಂಬ ಸಮೇತವಾಗಿ ಹೋಗಿ ಓಟ್  ಹಾಕಿ ಬಂದಿದ್ದಾರೆ. ಆದರೆ ಈ  ಬಾರಿ ಪವರ್ ಸ್ಟಾರ್  ಮತದಾನ ಮಾಡಿಲ್ಲ. ಅದಕ್ಕೆ ಕಾರಣವೂ ಇದೆ.

ಎಲ್ಲರು ಓಟ್ ಮಾಡಿ ಅದು ನಮ್ಮ ಹಕ್ಕು ಎಂದು ಹೇಳುತ್ತಿದ್ದರೇ ಪುನೀತ್ ರಾಜ್ ಕುಮಾರ್ ಮಾತ್ರ ವಿದೇಶ ಪ್ರವಾಸದಲ್ಲಿ ಇದ್ದಾರೆ. ಅವರು ರಜೆ ಸಿಕ್ಕ ಕಾರಣ ಪುನೀತ್ ರಾಜ್ ಕುಮಾರ್ ಅವರು ಕುಟುಂಬ ಸಮೇತ ಪ್ರವಾಸದಲ್ಲಿದ್ದಾರಂತೆ. ಆದರೆ ಪ್ರತೀ ಬಾರಿಯೂ ಪುನೀತ್ ರಾಜ್ ಕುಮಾರ್ ಶಿಸ್ತಿನ ನಾಗರೀಕರಾಗಿ ಮತ ಚಲಾಯಿಸುತ್ತಿದ್ದರು. ಆದರೆ ಈ ಬಾರಿ ಅವರು ಮತಚಲಾವಣೆ ಮಡಿಲ್ಲ. ಕೆಲ ಮೂಲಗಳ ಪ್ರಕಾರ ಈಗಾಗಲೇ ವಿದೇಶಕ್ಕೆ ಹೋಗುವುದು ಟಿಕೆಟ್ ಬುಕ್ಕಿಂಗ್ ಆಗಿ ಹೋಗಿತ್ತು. ಆ ನಂತರ ಎಲೆಕ್ಷನ್ ದಿನಾಂಕ ಅನೌನ್ಸ್ ಮಾಡಲಾಗಿತ್ತು. ಆದರೆ ಗುವುದು ಅನಿವಾರ್ಯವಾಗಿದ್ದರಿಂದ ಪವರ್ ಸ್ಟಾರ್ ಈ ಬಾರಿ ಓಟ್ ಮಾಡಿಲ್ಲ. ನಟ ಪುನೀತ್​ ಮತದಾನದ ಕುರಿತು ಅರಿವು ಮೂಡಿಸುವ ಸಲುವಾಗಿ ಕಳೆದ ಬಾರಿ ರಾಜ್ಯ ಚುನಾವಣಾ ಆಯೋಗದಿಂದ ರಾಯಭಾರಿಯಾಗಿ ಆಯ್ಕೆಯಾಗಿದ್ದರು, ಪವರ್ ಸ್ಟಾರ್ ಈ ಬಾರಿ ಮತದಾನ ಮಾಡದೇ ಹಲವು ಜನರಿಗೆ ಬೇಸರ ತರಿಸಿದೆ.

Edited By

Kavya shree

Reported By

Kavya shree

Comments