ಸಲಿಂಗ ವಿವಾಹವಾದ ಮಹಿಳಾ ಕ್ರಿಕೆಟರ್ಸ್...!

19 Apr 2019 11:08 AM | Entertainment
279 Report

ಅಂದಹಾಗೇ ಇತ್ತೀಚೆಗೆ ಕ್ರಿಕೆಟಿಗರಿಬ್ಬರ ಸಲಿಂಗ ವಿವಾಹದ ಸುದ್ದಿಯೇ ಭಾರಿಯೇ ಚರ್ಚೆಯಾಯ್ತು. ಪ್ರೀತಿ ಯಾವ ರೂಪದಲ್ಲಿ ಹೇಗೆ ಬರುತ್ತೋ ಯಾರು ಬಲ್ಲವರು. ಅಂದಹಾಗೇ ಇದಕ್ಕೆ ಸಾಕ್ಷಿ ಎಂಬಂತೆ ಹೈಲಿ ಜೆನ್‌ಸೆನ್‌ ಎಂಬ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟರ್‌ಗೂ ಆಸ್ಟ್ರೇಲಿಯಾದ ನಿಕೋಲಾ ಹ್ಯಾಂಕಾಕ್ ಎಂಬ ಮಹಿಳಾ ಕ್ರಿಕೆಟರ್‌ ನಡುವೆ ಪ್ರೀತಿ ಮೊಳಕೆ ಒಡೆದಿದೆ. ಕ್ರಿಕೆಟಿಗರ ಸಲಿಂಗ ವಿವಾಹದ ಬಗ್ಗೆ ಸಾಕಷ್ಟು ಪರ-ವಿರೋಧ ಚರಚೆಗಳು ಇದೀಗ ಎಲ್ಲೆಡೆ ಮಾತುಗಳು ಶುರುವಾಗಿವೆ.

ಅಲ್ಲದೆ ಇವರಿಬ್ಬರು ಇದೀಗ ಮದುವೆ ಕೂಡ ಆಗಿದ್ದಾರೆ. ಈ ಮೂಲಕ ಸಲಿಂಗ ವಿವಾಹವಾದ ಕ್ರಿಕೆಟ್‌ನ ಎರಡನೇ ಜೋಡಿ ಎಂಬ ಖ್ಯಾತಿ ಪಡೆದಿದ್ದಾರೆ.ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದ್ದು, ಪ್ರೀತಿ ದೊಡ್ಡದಾಗುತ್ತಾ ಹೋಗುತ್ತಿದ್ದಂತೆ ಇದೀಗ ಮದುವೆಯಾಗಿದ್ದಾರೆ. ಕಳೆದ ವರ್ಷ ಸೌತ್ ಆಫ್ರಿಕಾದ ಮಹಿಳಾ ಕ್ರಿಕೆಟ್ ಟೀಂನ ಕ್ಯಾಪ್ಟನ್ ಆಗಿದ್ದ ಡಾನಿ ವನ್ ನಿಯೇಕೆರ್ಕ್, ಅದೇ ತಂಡದ ಮಾರಿಜಾನ್ನೇ ಕ್ಯಾಪ್‌ ರನ್ನ ಪ್ರೀತಿಸಿ ವಿವಾಹವಾಗಿದ್ರು. ಇದೀಗ ಹೈಲಿ ಜೆನ್‌ಸೆನ್‌ ಮತ್ತು ನಿಕೋಲಾ ಹ್ಯಾಂಕಾಕ್ ಪರಸ್ಪರ ಒಪ್ಪಿ ಸಲಿಂಗ ವಿವಾಹವಾಗಿದ್ದಾರೆ.

Edited By

Manjula M

Reported By

Kavya shree

Comments